ಉತ್ತರಕನ್ನಡ ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯ ಮುಗಿದ ಬಗ್ಗೆ ಈ ಹಿಂದೆಯೇ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಿದ್ದರೂ ಸರ್ಕಾರಗಳು ದೊಡ್ಡ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ
ಅನಂತ ಅಶೀಸರ ಅಧ್ಯಕ್ಷ ಕೊಳ್ಳ ಸಂರಕ್ಷಣಾ ಸಮಿತಿ
ಜಿಲ್ಲೆಯ ನೀರನ್ನು ಬೇರೆಡೆ ಒಯ್ಯುತ್ತೇವೆ ಎನ್ನುವ ರಾಜಕಾರಣಿಗಳು ಜಿಲ್ಲೆಯಲ್ಲೇ ಇನ್ನಷ್ಟು ಕಾಡು ಬೆಳೆಸೋಣ ಎಂಬ ಯೋಜನೆ ತರುವ ಬಗ್ಗೆ ಪ್ರಯತ್ನಿಸಿಲ್ಲ. ಇದು ನದಿ ಕಣಿವೆಗಳ ಬಗ್ಗೆ ಅವರ ನಿಲುವು ಸ್ಪಷ್ಟಪಡಿಸುತ್ತದೆ
ಟಿ.ವಿ.ರಾಮಚಂದ್ರ ವಿಜ್ಞಾನಿ ಪರಿಸರಶಾಸ್ತ್ರ
ಗಮನ ಸೆಳೆದ ಗೋಷ್ಠಿಗಳು
ಕಮ್ಮಟದ ಅಂಗವಾಗಿ ಎತ್ತಿನಹೊಳೆ ಯೋಜನೆ: ಸ್ಥಳೀಯರ ಅನುಭವದ ಕುರಿತು ಪರಿಸರ ಹೋರಾಟಗಾರ ಕಿಶೋರಕುಮಾರ ಮಲೆನಾಡಿನ ಉಭಯವಾಸಿ ಜೀವಿ ಪರಿಸರದ ಮಹತ್ವದ ಕುರಿತು ಅಮಿತ ಹೆಗಡೆ ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕುರಿತು ಗಿರೀಶ ಜನ್ನೆ ಶರಾವತಿ ನದಿ ಕೆಳಹರಿವಿನ ಸಮಸ್ಯೆಗಳ ಕುರಿತು ಪ್ರಕಾಶ ಮೇಸ್ತ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆ ಕುರಿತು ಬಾಲಚಂದ್ರ ಸಾಯಿಮನೆ ಬೇಡ್ತಿ-ವರದಾ ನದಿ ತಿರುವು ಯೋಜನೆ ಕುರಿತು ನರಸಿಂಹ ಹೆಗಡೆ ವಾನಳ್ಳಿ ಕೇಣಿ ಬಂದರು ಯೋಜನೆ ಕುರಿತು ವಿಕಾಸ ತಾಂಡೇಲ ಒಳನಾಡಿನ ಸುಸ್ಥಿರ ನೀರಾವರಿ ಕುರಿತು ಶಿವಾನಂದ ಕಳವೆ ಕೆ.ಎಂ.ಹೆಗಡೆ ಭೈರುಂಬೆ ನೀರಾವರಿ ವರದಿ ಕುರಿತು ಜಿ.ವಿ.ಹೆಗಡೆ ಹುಳಗೋಳ ವಿಷಯ ಮಂಡಿಸಿದರು.