‘ಗುರುವಾರದಿಂದ ನಗರದ ಸಹಕಾರ ಸಂಘಗಳಲ್ಲಿ ಹಸಿ ಕೊಳೆ ಅಡಿಕೆ ಟೆಂಡರ್ ಆರಂಭಗೊಂಡಿದ್ದು, ಮೊದಲೆರಡು ದಿನ 1 ಕೆ.ಜಿ ಹಸಿ ಕೊಳೆ ಅಡಿಕೆ ದರ ಸರಾಸರಿ 40 ಪೈಸೆ ಇತ್ತು. ಶುಕ್ರವಾರ ದರವು 30 ಪೈಸೆಗೆ ಇಳಿದ ಕಾರಣ ಶನಿವಾರ ಬೆಳೆಗಾರರು ಮಾರುಕಟ್ಟೆಯತ್ತ ಸುಳಿಯಲಿಲ್ಲ. ಹಾಗಾಗಿ, ವ್ಯಾಪಾರಸ್ಥರು ದರವನ್ನು ₹1ಕ್ಕೆ ಏರಿಕೆ ಮಾಡಿದ್ದಾರೆ.