ಶಿರಸಿ: ಕರ್ನಾಟಕ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಫೆವಾರ್ಡ್-ಕೆಯಿಂದ ಬೆಳಗಾವಿ ವಿಭಾಗ ಮಟ್ಟದ ಕಾರ್ಯಾಗಾರ ಸೆ.10ರಂದು ನಗರದ ಎ.ಪಿ.ಎಂ.ಸಿ ಯಾರ್ಡ್ನಲ್ಲಿರುವ ಟಿಎಂಎಸ್ ಸಭಾಭವನದಲ್ಲಿ ನಡೆಯಲಿದ್ದು, ಉತ್ತರ ಕನ್ನಡ ಜಿಲ್ಲೆಯೂ ಸೇರಿದಂತೆ ಬೆಳಗಾವಿ ವಿಭಾಗದ 6 ಜಿಲ್ಲೆಗಳ ವೃತ್ತಿಪರ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಾಗಾರದಲ್ಲಿ ವೃತ್ತಿಪರ ಸ್ವಯಂ ಸೇವಾ ಸಂಸ್ಥೆಗಳ ಆಡಳಿತ, ಲೆಕ್ಕ ಪತ್ರ ನಿರ್ವಹಣೆ, ಯೋಜನೆ ರೂಪಿಸುವಿಕೆ, ಸಂಪನ್ಮೂಲ ಸಂಗ್ರಹ, ಅನುದಾನ ಕ್ರೋಢೀಕರಣ, ಮಾನವ ಸಂಪನ್ಮೂಲ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಮಾಹಿತಿ ನೀಡಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೂ ಒಕ್ಕೂಟದಲ್ಲಿ ಸೇರಿಕೊಳ್ಳದ, ಸಂಘ-ಸಂಸ್ಥೆಗಳ ನೋಂದಣಿ ಕಾಯಿದೆ, ಟ್ರಸ್ಟ್ ಆ್ಯಕ್ಟ್, ಸೆಕ್ಷನ್ 8 ಕಂಪನಿ ಅಥವಾ ಸಾಮಾಜಿಕ ಕಾರ್ಯಕ್ಕಾಗಿ ಕಾನೂನು ರೀತಿ ನೋಂದಣಿಗೊಂಡ ಸಂಘ-ಸಂಸ್ಥೆಗಳ ಪ್ರಮುಖರಿಗೆ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ. ಉತ್ತರ ಕನ್ನಡ ಜಿಲ್ಲೆಯ ಸಂಘ-ಸಂಸ್ಥೆಗಳು 2 ಪ್ರತಿನಿಧಿಗಳನ್ನು ನಿಯೋಜಿಸಬಹುದಾಗಿದೆ.

ಕಾರ್ಯಾಗಾರದ ಕೊನೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಒಕ್ಕೂಟವನ್ನು ಸಹ ರಚಿಸಲಾಗುತ್ತಿದ್ದು, ಭಾಗವಹಿಸುವ ಪ್ರತಿನಿಧಿಗಳ ಹೆಸರನ್ನು ಸೆ.9ರ ಸಾಯಂಕಾಲ 4 ಗಂಟೆಯ ಒಳಗಾಗಿ ಕಾರ್ಯಾಗಾರದ ಸಂಯೋಜಕರಾದ ಸ್ಕೊಡ್ವೆಸ್ ಸಂಸ್ಥೆಯ ವೆಂಕಟೇಶ ನಾಯ್ಕ (9448609618), ಮನುವಿಕಾಸ ಸಂಸ್ಥೆಯ ಗಣಪತಿ ಭಟ್ (9845982552), ಅರುಣೋದಯ ಸಂಸ್ಥೆಯ ಸತೀಶ ನಾಯ್ಕ (8660102118) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಲು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.