ಶಿರಸಿ: ನಗರದ ಬಿಡ್ಕಿ ಬಯಲಿನ ತರಕಾರಿ ಮಾರುಕಟ್ಟೆಯಲ್ಲಿ ಸೀಮಿತ ತರಕಾರಿ ಅಂಗಡಿಗಳಿಗೆ ಮಾತ್ರ ಜಾಗದ ಲಭ್ಯತೆ ಇರುವ ಕಾರಣಕ್ಕೆ ಬಹುತೇಕ ತರಕಾರಿ ವ್ಯಾಪಾರಿಗಳು ಬೀದಿ ಬದಿ ತಮ್ಮ ವಹಿವಾಟು ನಡೆಸುವ ಸಂದಿಗ್ಧತೆ ಎದುರಾಗಿದೆ.

ನಗರದ ಬಿಡ್ಕಿ ಬಯಲಿನಲ್ಲಿ ತರಕಾರಿ ಮಾರುಕಟ್ಟೆಯಿದೆ. ಪ್ರತಿ ಮಂಗಳವಾರ ಸಂತೆ ಕೂಡ ನಡೆಯುತ್ತದೆ. ಆದರೆ ಇಲ್ಲಿ ಎಲ್ಲ ತರಕಾರಿ ವ್ಯಾಪಾರಿಗಳಿಗೆ ಬೇಕಾದಷ್ಟು ಜಾಗವಿಲ್ಲದ ಕಾರಣ ಬೀದಿ ಬದಿಯಲ್ಲಿ ತರಕಾರಿ ಅಂಗಡಿಗಳು ಹೆಚ್ಚುವಂತಾಗಿದೆ.

ತರಕಾರಿ ಮಾರುಕಟ್ಟೆಯಲ್ಲಿ 63 ತರಕಾರಿ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಸಂತೆಯ ದಿನ ಒಟ್ಟೂ 100 ವ್ಯಾಪಾರಿಗಳಿಗೆ ಇದೇ ಸ್ಥಳದಲ್ಲಿ ಜಾಗ ಒದಗಿಸಲಾಗುತ್ತಿದೆ. ಇದರ ಹೊರತಾಗಿಯೂ 50ಕ್ಕೂ ಹೆಚ್ಚು ವ್ಯಾಪಾರಿಗಳು ಇಲ್ಲಿ ಜಾಗ ಸಿಗದೇ ರಸ್ತೆ ಬದಿಯಲ್ಲಿ ಕುಳಿತು ತರಕಾರಿ ಮಾರುತ್ತಾರೆ. ಈ ವ್ಯಾಪಾರಿಗಳಿಂದ ಜಾಗದ ಬಾಡಿಗೆ ನಗರಸಭೆಗೆ ಸಂದಾಯವಾಗುತ್ತದೆ. ಆದರೆ ಯಾವುದೇ ಸೌಲಭ್ಯ ಇವರಿಗೆ ಸಿಗುತ್ತಿಲ್ಲ. ಇದರಿಂದ ಬೀದಿ ಬದಿ ಕುಳಿತುಕೊಳ್ಳುವ ತರಕಾರಿ ಮಾರುವವರು ಸಮಸ್ಯೆ ಎದುರಿಸುವಂತಾಗಿದೆ.

‘ರಸ್ತೆ ಬದಿಯ ವ್ಯಾಪಾರಿಗಳಿಗೆ ಬಿಸಿಲು ಹಾಗೂ ಮಳೆ ಬಂದರೆ ಯಾವುದೇ ರಕ್ಷಣೆಯಿಲ್ಲ. ಸೂಕ್ತ ಶೌಚಾಲಯ, ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಬೇಸಿಗೆ ಕಾಲದಲ್ಲಿ ತರಕಾರಿ ಮತ್ತು ಸೊಪ್ಪುಗಳ ರಕ್ಷಣೆಗೆ ಯಾವುದೇ ಹೊದಿಕೆ ಇಲ್ಲದ ಕಾರಣ ಸಂಜೆಯಾಗುವಷ್ಟರಲ್ಲಿ ತರಕಾರಿಗಳು, ಸೊಪ್ಪುಗಳು ಒಣಗಿ ಬಾಡುತ್ತವೆ' ಎನ್ನುತ್ತಾರೆ ತರಕಾರಿ ವ್ಯಾಪಾರಿ ಸುನಂದಮ್ಮ.

‘ಮಳೆಗಾಲದಲ್ಲಿ ವ್ಯಾಪಾರ ನಡೆಯುವ ಸ್ಥಳದಲ್ಲಿ ಜನರ ಅತ್ತಿಂದಿತ್ತ ತಿರುಗಾಟದಿಂದ ಪ್ರದೇಶವಿಡೀ ಕೆಸರುಮಯವಾಗುತ್ತದೆ. ಚರಂಡಿ ಪಕ್ಕದ ರಸ್ತೆ ಬದಿ ಕುಳಿತು ವ್ಯಾಪಾರ ಮಾಡುವವರ ಕಷ್ಟ ಹೇಳತೀರದು. ಮಳೆ ಸುರಿದರೆ ಚರಂಡಿಗಳು ಕಟ್ಟಿಕೊಂಡು ಚರಂಡಿಯ ಗಲೀಜು ನೀರಿನೊಂದಿಗೆ ತರಕಾರಿಗಳು ತೇಲಿ ಹೋಗುತ್ತವೆ. ಸ್ವಯಂ ರಕ್ಷಣೆ ಜತೆಗೆ ಮಾರಾಟ ಮಾಡುವ ವಸ್ತುಗಳ ರಕ್ಷಣೆಗೂ ಮುಂದಾಗಬೇಕಿದೆ’ ಎನ್ನುತ್ತಾರೆ ಅವರು.

‘ಸಂತೆ ಮಾರುಕಟ್ಟೆಯೊಳಗೆ ಜಾಗ ಸಿಗದ ಕಾರಣ ರಸ್ತೆ ಬದಿ ತರಕಾರಿ ಮಾರುವುದು ಅನಿವಾರ್ಯವಾಗಿದೆ. ಹಾಗಾಗಿ ನಗರಸಭೆಯ ಇತರ ಜಾಗದಲ್ಲಿ ಕಡಿಮೆ ಬಾಡಿಗೆ ಪಡೆದು ಬೀದಿಬದಿ ತರಕಾರಿ ಮಾರುವವರಿಗೆ ಅವಕಾಶ ನೀಡಬೇಕು. ಇಲ್ಲವೇ, ವಿಶಾಲವಾದ ಪ್ರತ್ಯೇಕ ಜಾಗದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಲು ಮುಂದಾಗಬೇಕು' ಎಂಬುದು ಬಹುತೇಕ ಬೀದಿಬದಿ ತರಕಾರಿ ವ್ಯಾಪಾರಿಗಳ ಅಭಿಪ್ರಾಯವಾಗಿದೆ.

ನಗರಸಭೆ ಪ್ರತ್ಯೇಕ ಜಾಗ ಗುರುತಿಸುವ ಜತೆ ಅಲ್ಲಿ ತರಕಾರಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ವ್ಯಾಪಾರಿಗಳಿಂದ ಬಾಡಿಗೆ ಪಡೆದು ಸೂಕ್ತ ಸೌಲಭ್ಯ ನೀಡಲು ಮುಂದಾಗಬೇಕು.
ಮಂಜುನಾಥ ಹುಚ್ಚಣ್ಣನವರ್ ಬೀದಿ ಬದಿ ತರಕಾರಿ ವ್ಯಾಪಾರಿ

ಸಾಧ್ಯವಾದಷ್ಟು ತರಕಾರಿ ವ್ಯಾಪಾರಿಗಳಿಗೆ ಬಿಡ್ಕಿ ಬಯಲಿನಲ್ಲಿ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ. ಸಂತೆಯ ದಿನ ಸಮಸ್ಯೆಯಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು
ಆರ್.ಎಂ. ವೇರ್ಣೆಕರ್ ಕಂದಾಯ ಅಧಿಕಾರಿ ನಗರಸಭೆ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.