ಕುಮಟಾ: ದಟ್ಟ ಕಾಡಿನ ನಡುವಿನ, ಗುಡ್ಡದ ಪ್ರದೇಶದ ಮೇದಿನಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಕುಸಿದು ಬಿದ್ದು ಒಂದೂವರೆ ವರ್ಷ ಕಳೆದರೂ ಮರು ನಿರ್ಮಾಣ ಸಾಧ್ಯವಾಗಿಲ್ಲ.

ಶಿಥಿಲಗೊಂಡು ಕುಸಿದು ಬಿದ್ದ ಕಾರಣ ತಾತ್ಕಾಲಿಕವಾಗಿ ಪಕ್ಕದ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ಎರಡು ಕೊಠಡಿಗೆ ₹13.5 ಲಕ್ಷ ಮಂಜೂರಾದರೂ ಇನ್ನೂ ಅನುದಾನ ಬಿಡುಗಡೆಯ ಭಾಗ್ಯ ಲಭಿಸಿಲ್ಲ.

ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇದಿನಿ ಕಿರಿಯ ಪ್ರಾಥಮಿಕ ಶಾಲೆಯ ಒಂದೊಂದೇ ಕೊಠಡಿ, ಬಿಸಿಯೂಟ ಕೋಣೆ ಶಿಥಿಲಗೊಂಡು ಕುಸಿದುಬಿದ್ದ ನಂತರ ಪಕ್ಕದಲ್ಲಿರುವ ಅರೋಗ್ಯ ಇಲಾಖೆಯ ಹೊಸ ಕಟ್ಟಡಕ್ಕೆ ಶಾಲೆ, ಬಿಸಿಯೂಟ ಕೋಣೆ, ಅಂಗನವಾಡಿ ಸ್ಥಳಾಂತರಗೊಂಡಿದೆ.

‘ಶಾಲೆಯ ಹಳೆಯ ಕಟ್ಟಡ ಕುಸಿದು ಬಿದ್ದ ನಂತರ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಹೊಸ ಕಟ್ಟಡಕ್ಕೆ ಪ್ರಸ್ತಾವ ಕಳುಹಿಸಿದ್ದಾರೆ. ಹೊಸ ಕಟ್ಟಡಕ್ಕೆ ಅನುದಾನ ಮಂಜೂರಾಗಿದ್ದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದರು. ಹೊಸ ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿರುವ ಹಳೆಯ ಕಟ್ಟಡದ ತೆರವು ಕಾರ್ಯ ಕೂಡ ಇನ್ನೂ ನಡೆದಿಲ್ಲ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಚಂದ್ರ ಗೌಡ ದೂರಿದರು.

‘ಈ ವರ್ಷ, ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾಗಬಹುದು ಎಂಬ ನಿರೀಕ್ಷೆ ಇತ್ತು. ಊರಿನವರೆಲ್ಲ ಸೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೆವು. ಶಾಲೆಗಳು ಪುನರಾರಂಭಗೊಳ್ಳುವ ದಿನ ಸಮೀಪಿಸಿದರೂ ಹೊಸಕಟ್ಟಡ ನಿರ್ಮಾಣದ ಮುನ್ಸೂಚನೆ ಇಲ್ಲವಾಗಿದೆ. ಕಳೆದ ವರ್ಷ 13 ಇದ್ದ ಶಾಲೆಯ ವಿದ್ಯಾರ್ಥಿಗಳ ಈ ವರ್ಷ ಹೆಚ್ಚಾಗಿದ್ದು, ಆಸ್ಪತ್ರೆಯ ಕಟ್ಟಡದಲ್ಲಿಯೇ ಶಾಲೆ ಮುಂದುವರಿದಿದೆ’ ಎಂದರು.

‘ಹಣ ಬಿಡುಗಡೆಯಾಗದಿದ್ದರೆ ಮಳೆಗಾಲದ ನಂತರ ಕಾಮಗಾರಿ’

‘ಶಾಲೆಯ ಎರಡು ಕೊಠಡಿಗಳಿಗೆ ಇಲಾಖೆಯಿಂದ ₹13.50 ಲಕ್ಷ ಹಾಗೂ ಬಿಸಿಯೂಟ ಕೋಣೆಗೆ ಜಿಲ್ಲಾ ಪಂಚಾಯಿತಿಯಿಂದ ಪ್ರತ್ಯೇಕ ಅನುದಾನ ಮಂಜೂರಾಗಿದೆ. ಹಣ ಬಿಡುಗಡೆ ಸಂಬಂಧ ತಾಲ್ಲೂಕು ಹಾಗೂ ಜಿಲ್ಲೆಯಿಂದ ಎಲ್ಲ ಮಾಹಿತಿಗಳನ್ನು ನೀಡಲಾಗಿದ್ದು ತಾಂತ್ರಿಕ ಹಾಗೂ ಆಡಳಿತಾತ್ಮಕ ಮಂಜೂರಾತಿ ಕೂಡ ದೊರಕಿದೆ. ಜೂನ್ ತಿಂಗಳೊಳಗೆ ಇಲಾಖೆಯಿಂದ ಹಣ ಬಿಡುಗಡೆಯಾಗದಿದ್ದರೆ ಮಳೆಗಾಲ ಮುಗಿದ ನಂತರ ಕಾಮಗಾರಿ ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.