ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಹೆತ್ತವರನ್ನು ದೂರ ಮಾಡುವವರಿಗೆ ಮನೆಯಿಲ್ಲ: ಭೀಮಣ್ಣ

Published 9 ಜನವರಿ 2024, 14:21 IST
Last Updated 9 ಜನವರಿ 2024, 14:21 IST
ಅಕ್ಷರ ಗಾತ್ರ

ಶಿರಸಿ: ಹೆತ್ತವರನ್ನು ನೋಡಿಕೊಳ್ಳದ‌ ಮಕ್ಕಳಿಗೆ ವಸತಿ ಯೋಜನೆಯಡಿ ಮನೆ ಕೊಡುವ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲ್ಲೂಕಿನ ಯಡಳ್ಳಿಯಲ್ಲಿ ಸೋಮವಾರ 2020–21ನೇ ಸಾಲಿನ ವಸತಿ ಯೋಜನೆಯ ಕಾಮಗಾರಿ ಆದೇಶಪತ್ರ ವಿತರಿಸಿ ಮಾತನಾಡಿದ ಅವರು, ಇತ್ತೀಚೆಗೆ ಸರ್ಕಾರದ ಸೌಲಭ್ಯ ಪಡೆಯಲು ಹಲವರು ಮುಂದಾಗುತ್ತಿದ್ದಾರೆ. ಹೆತ್ತವರ ದೂರ ಇಟ್ಟು ಸೌಲಭ್ಯ ಪಡೆಯುವವರೂ ಇದ್ದಾರೆ. ಅಂಥ ಘಟನೆಗಳು ಆಗಬಾರದು. ಬೆಳಸಿದ ಮಕ್ಕಳು ತಂದೆ–ತಾಯಿಗೆ ವಯಸ್ಸಾದ ಬಳಿಕ ಮನೆಯಿಂದ ಹೊರಗೆ ಹಾಕಿದರೆ,‌ ಬಿಟ್ಟು ಹೋದರೆ‌ ಅಂಥ ಮಕ್ಕಳು ಆಶ್ರಯ‌ ಮನೆಗೆ ಅರ್ಜಿ ಹಾಕಿದರೆ ಸೌಲಭ್ಯ ಕೊಡಲು ಯೋಚಿಸಬೇಕಾಗಿದೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಅರ್ಹ ವಸತಿ ಫಲಾನುಭವಿಗಳಿಗೆ‌ ಮನೆ ಇಲ್ಲ ಎಂಬ ಸ್ಥಿತಿ ಆಗಬಾರದು. ಮಳೆಗಾಲದ ಒಳಗೆ‌ ಮನೆ‌ ನಿರ್ಮಾಣ ಮಾಡಿಕೊಳ್ಳಬೇಕು. ವಸತಿ ನಿರ್ಮಾಣಕ್ಕೆ ಅಧಿಕಾರಿಗಳು ಕಿರುಕುಳ ನೀಡಿದರೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಮರಳುಗಾರಿಕೆ ಅಕ್ರಮವಾಗಿ ನಡೆಯುತ್ತಿಲ್ಲ. ಜನತೆಗೆ ಮರಳಿನ ಅಗತ್ಯತೆ ಇದೆ. ಹೀಗಾಗಿ ಎಲ್ಲರೂ ಸಹಕಾರ ಮನೋಭಾವದಿಂದ ಇರಬೇಕು ಎಂದರು. 

ತಾಲ್ಲೂಕು ಪಂಚಾಯಿತಿ ಇಒ ಸತೀಶ ಹೆಗಡೆ, ಗ್ಧಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ಶೆಟ್ಟಿ, ಉಪಾಧ್ಯಕ್ಷೆ ರಾಜೇಶ್ವರಿ ಗೌಡ, ಪ್ರಮುಖರಾದ ಎಸ್.ಕೆ.ಭಾಗವತ, ಕಮಲಾಕ್ಷಿ ನಾಯ್ಕ, ಕಾರ್ಯದರ್ಶಿ ಚಂದ್ರಕಾಂತ ಕಾರಂತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT