ಶಿರಸಿ: ತಾಲ್ಲೂಕಿನ ಮತ್ತಿಘಟ್ಟ ಮುಂಡಗನಮನೆ ಸೇವಾ ಸಹಕಾರಿ ಸಂಘದಲ್ಲಿ ಆಯೋಜಿಸಿದ್ದ ಹೆಸ್ಕಾಂ ಸಿಬ್ಬಂದಿ ಹಾಗೂ ವಿದ್ಯುತ್ ಗ್ರಾಹಕರ ಸಮನ್ವಯ ಸಭೆಯಲ್ಲಿ ಹತ್ತಾರು ಸಮಸ್ಯೆಗಳ ಬಗ್ಗೆ ಗ್ರಾಹಕರು ಧ್ವನಿ ಎತ್ತಿ ಹೆಸ್ಕಾಂನ ಗಮನ ಸೆಳೆಯುವ ಕಾರ್ಯ ಮಾಡಿದರು.

ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಗ್ರಾಹಕರು ಕಳೆದ ವರ್ಷ ಯಾವ ಯಾವ ರೀತಿಯಲ್ಲಿ ವಿದ್ಯುತ್ ಸಂಪರ್ಕ ನೀಡುವಲ್ಲಿ ಸಮಸ್ಯೆಗಳಿದ್ದವು, ಅವು ಈಗಲೂ ಮುಂದುವರಿದಿದೆ. ಈ ಸಮಸ್ಯೆಗಳನ್ನು ಹೆಸ್ಕಾಂನವರು ಬಗೆಹರಿಸುವ ಪ್ರಯತ್ನ ಮಾಡಲಿಲ್ಲವೆಂದು
ದೂರಿದರು. ಹೆಸ್ಕಾಂನ ಸಂಪಖಂಡ ವಿಭಾಗದ ಸೆಕ್ಷನ್ ಅಧಿಕಾರಿ ಮಂಜುನಾಥ ಮಾತನಾಡಿ, ಈ ಭಾಗದ ವಿದ್ಯುತ್ ನೀಡುವಲ್ಲಿ ಏನೇನು ಸಮಸ್ಯೆಗಳು ಉದ್ಭವವಾಗುತ್ತಿದೆ. ಅದನ್ನು ಹೇಗೆ ಬಗೆಹರಿಸುತ್ತೇವೆ ಎಂದು ವಿವರಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಸಂಘವು ಸಹಕಾರಿ ತತ್ವದಂತೆ ನಡೆಯುತ್ತಿದ್ದು, ಸಾಮಾಜಿಕ ಕಳಕಳಿಯು ಈ ತತ್ವಗಳಲ್ಲಿ ಒಂದಾಗಿದೆ. ಹಾಗಾಗಿ ಸಂಘದ ಸದಸ್ಯರ ಪರವಾಗಿ ಕುಂದು ಕೊರತೆ ನಿವಾರಣೆಗೆ ಸಭೆಯನ್ನು ಕರೆಯಲಾಗಿದೆ. ಅಲ್ಲದೇ ಈ ರೀತಿ ಕಳಕಳಿಯಿಂದಲೇ ನಮ್ಮ ಭಾಗದಲ್ಲಿ ಕರ್ತವ್ಯನಿರತರಾದ ಲೈನ್ಮನ್ಗಳಿಗೆ ಪ್ರತಿವರ್ಷವೂ ರೈನ್ಕೋಟ್ಗಳನ್ನು ನೀಡುತ್ತಿದ್ದೇವೆ ಎಂದರು. ಇದೇ ವೇಳೆ ಸಂಘದ ಅವತಿಯಿಂದ ಲೈನ್ಮೆನ್ಗಳಿಗೆ ರೈನ್ಕೋಟ್ಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಾಘವೇಂದ್ರ ಹೆಗಡೆ, ಬೆಳೆಸಿರಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಶ್ರೀಪಾದ ಪಾಟೀಲ, ಪ್ರಮುಖರಾದ ವಿ.ಆರ್.ಹೆಗಡೆ ಇದ್ದರು. ಸಂಘದ ಮುಖ್ಯಕಾರ್ಯನಿರ್ವಾಹಕ ನಾಗಪತಿ ಭಟ್ ಸ್ವಾಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.