ಮುಂಡಗೋಡ: ‘ದಿ.ರಾಮಕೃಷ್ಣ ಹೆಗಡೆ ಅವರು ಮೌಲ್ಯಾಧಾರಿತ ರಾಜಕಾರಣಿಯಾಗಿ ಕೆಲಸ ಮಾಡಿದ್ದರು. ಶಿಕ್ಷಣ, ನೀರಾವರಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು’ ಎಂದು ಓಂ ಗ್ಯಾಸ್ ಸರ್ವಿಸಸ್ನ ಮಾಲೀಕ ಬಸವರಾಜ ಓಶೀಮಠ ಹೇಳಿದರು.

ಇಲ್ಲಿನ ನ್ಯಾಸರ್ಗಿ ರಸ್ತೆಯ ಸಂತಶಿಶುನಾಳ ಶರೀಫ ದೇವಸ್ಥಾನದಲ್ಲಿ, ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯಿಂದ ಶುಕ್ರವಾರ ನಡೆದ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ 99ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ರಾಜಕೀಯವಾಗಿ ಹೆಚ್ಚು ಒಡನಾಟ ಹೊಂದಿದ್ದರಿಂದ, ಅವರ ಆದರ್ಶಗಳು ತಮಗೆ ಪ್ರೇರಣೆಯಾಗಿವೆ. ಸಮಸ್ಯೆಗಳನ್ನು ಆಲಿಸುವುದು, ಸ್ಪಂದಿಸುವ ಗುಣ ಹೆಚ್ಚು ಇಷ್ಟವಾಗುತ್ತಿತ್ತು. ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ವೇಗ ನೀಡಿದ್ದರು’ ಎಂದು ಹೇಳಿದರು.

ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಚಿದಾನಂದ ಹರಿಜನ ಮಾತನಾಡಿ, ‘ದಿ.ರಾಮಕೃಷ್ಣ ಹೆಗಡೆ ಅವರು ಜನಪರ ಆಡಳಿತದ ಮೂಲಕ ಬಡವರು, ದೀನದಲಿತರು ಸೇರಿದಂತೆ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಸರಳ, ಸಜ್ಜನಿಕೆಯ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರುʼ ಎಂದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಖೇಮಣ್ಣ ಲಮಾಣಿ, ಹನಮಂತಪ್ಪ ಆರೆಗೊಪ್ಪ, ಗೋವಿಂದಪ್ಪ ಬೆಂಡ್ಲಗಟ್ಟಿ, ಎಸ್.ಎಸ್.ಪಾಟೀಲ, ಮಾರ್ಟಿನ್ ಬಳ್ಳಾರಿ, ಮಂಜುನಾಥ ಕುರ್ತಕೋಟಿ, ಗಣಪತಿ ಹಳೂರ, ಯಲ್ಲವ್ವ ಭೋವಿ, ಪ್ರಶಾಂತ ಕರಿಗಾರ, ಗಿರಿದಾಸ ಕರ್ಜಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.