ಶಿರಸಿ: ‘ಸೃಜನಶೀಲತೆ, ಶ್ರಮ ಮತ್ತು ಕೌಶಲದ ಪ್ರತೀಕವಾಗಿರುವ ದೇವಶಿಲ್ಪಿ ವಿಶ್ವಕರ್ಮರು ಸೃಷ್ಟಿ ದೇವತೆಯ ಅಮೂರ್ತ ರೂಪ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನಗರದ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವಕರ್ಮರು ಪುರಾಣಗಳ ಪ್ರಕಾರ, ಒಬ್ಬ ಅಪ್ರತಿಮ ವಾಸ್ತುಶಿಲ್ಪ, ತಂತ್ರಜ್ಞಾನದ ಹಿಂದೂ ದೇವರು. ಅಸಾಧಾರಣ ಅರಮನೆಗಳಿಂದ ಹಿಡಿದು ದೇವರ ಆಯುಧಗಳು, ದೇವತೆಗಳಿಗೆ ಹಾರುವ ರಥಗಳವರೆಗೆ ಎಲ್ಲವನ್ನು ಸೃಷ್ಟಿಸಿದ ವಿನ್ಯಾಸಕರಾಗಿದ್ದಾರೆ. ದ್ವಾರಕಾ ಮತ್ತು ಇಂದ್ರಪ್ರಸ್ಥದಂತಹ ಪವಿತ್ರ ನಗರಗಳನ್ನು ಸಹ ವಿನ್ಯಾಸಗೊಳಿಸಿದ ಕೀರ್ತಿ ಇವರದೇ ಆಗಿದೆ. ವಿಶ್ವದ ಮೊದಲ ಎಂಜಿನಿಯರ್ ವಿಶ್ವಕರ್ಮರಾಗಿದ್ದಾರೆ’ ಎಂದರು.

‘ವಿಶ್ವಕರ್ಮ ದಿನಾಚರಣೆಯಂದು ವಿಶ್ವಕರ್ಮನನ್ನು ಪೂಜಿಸುವುದರಿಂದ ತಮ್ಮ ಕೆಲಸದಲ್ಲಿ ಸಮೃದ್ಧಿ ಮತ್ತು ಯಶಸ್ಸು ದೊರೆಯುತ್ತದೆ’ ಎಂದು ಹೇಳಿದ ಅವರು, ‘ಸರ್ಕಾರ ಕೂಡ ವಿಶ್ವಕರ್ಮ ಸಮುದಾಯಕ್ಕೆ ವಿವಿಧ ಸೌಲಭ್ಯ ಕಲ್ಪಿಸುತ್ತಿದೆ. ಇದನ್ನು ಬಳಸಿಕೊಂಡು ಈ ಸಮುದಾಯ ಸಮಾಜದ ಪ್ರಮುಖ ಪಥಕ್ಕೆ ಬರಬೇಕಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಪೂರ್ವಜರ ಕನಸು ನನಸು ಮಾಡಬೇಕಿದೆ’ ಎಂದರು.

ತಹಶೀಲ್ದಾರ್ ಪಟ್ಟರಾಜ ಗೌಡ ಮಾತನಾಡಿ, ‘ಪಂಚತತ್ವಗಳನ್ನು ಕಟ್ಟಿಕೊಟ್ಟವರು ವಿಶ್ವಕರ್ಮರಾಗಿದ್ದಾರೆ. ಅವರ ಆರಾಧನೆಯಿಂದ ಬದುಕಿಗೆ ಅರ್ಥ ತಂದುಕೊಳ್ಳಬೇಕು’ ಎಂದರು.

ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಾ ಉಗ್ರಾಣಕರ, ಪ್ರಮುಖರಾದ ವಿಶ್ವನಾಥ ಆಚಾರ, ಗಿರೀಶ ಆಚಾರ, ಸಂಜೀವ ಪೋತದಾರ, ಗೀತಾ ಶೆಟ್ಟಿ ಇತರರಿದ್ದರು. ಕಂದಾಯ ಸಿಬ್ಬಂದಿ ಶ್ರೀಧರ ಹೆಗಡೆ ನಿರೂಪಿಸಿದರು.

ವಿಶ್ವಕರ್ಮ ಸಮುದಾಯ ಭವನ ನಿರ್ಮಿಸಲು ಜಾಗ ಗುರುತಿಸಿದರೆ ಭವನ ನಿರ್ಮಿಸಲು ಬೇಕಾದ ಅನುದಾನ ನೀಡಲಾಗುವುದು
ಭೀಮಣ್ಣ ನಾಯ್ಕ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.