ಕಾರವಾರ: ಪಾರ್ಶ್ವವಾಯು ಚಿಕಿತ್ಸೆಗೆಂದು ತಾಲ್ಲೂಕಿನ ಹಳಗಾದ ಆಸ್ಪತ್ರೆಗೆ ಬಂದಿದ್ದ ವೇಳೆ ಕಾಣೆಯಾಗಿದ್ದ ಮಹಿಳೆ ಬೀದರ್ ಜಿಲ್ಲೆ ಹುಮ್ನಾಬಾದನ ಪರ್ವಿನ್ ಬೇಗಂ (45) ಗುರುವಾರ ಸಂಜೆ ಜೊಯಿಡಾ ತಾಲ್ಲೂಕಿನ ಅಣಶಿ ಘಟ್ಟ ಪ್ರದೇಶದ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆ ಶಂಕೆಯ ಮೇಲೆ ಆಕೆಯ ಪತಿ ಇಸ್ಮಾಯಿಲ್ ವಾಯಿದ್ ಅಲಿ ದಫೇದಾರ (50) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

‘ಆ.29ರಂದು ಹಳಗಾಕ್ಕೆ ಚಿಕಿತ್ಸೆ ಸಲುವಾಗಿ ದಂಪತಿ ಬಂದಿದ್ದರು. ಪತ್ನಿ ಕಾಣೆಯಾಗಿದ್ದಾಗಿ ಊರಿಗೆ ತೆರಳಿದ್ದ ಇಸ್ಮಾಯಿಲ್ ಕಥೆ ಕಟ್ಟಿದ್ದರು. ಸೆ.1 ರಂದು ಸಹೋದರಿ ಕಾಣೆಯಾಗಿದ್ದಾಗಿ ಪರ್ವಿನ್ ಸಹೋದರ ಮುಸ್ತಫಾ ಠಾಣೆಗೆ ಬಂದು ದೂರು ನೀಡಿದ್ದರು. ಸೆ.18ರಂದು ಅಣಶಿ ಘಟ್ಟದಲ್ಲಿ ಪತ್ತೆಯಾದ ಶವ ಪರೀಕ್ಷೆಗೆ ಒಳಪಡಿಸಿದಾಗ ಅದು ಪರ್ವಿನ್ರದ್ದು ಎಂಬುದು ಖಚಿತವಾಗಿದೆ’ ಎಂದು ಚಿತ್ತಾಕುಲ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಚಿಕಿತ್ಸೆಗೆ ಪತ್ನಿಯನ್ನು ಕರೆತಂದಿದ್ದ ಪತಿ ಇಸ್ಮಾಯಿಲ್ ಊಟದಲ್ಲಿ ವಿಷ ಬೆರೆಸಿ ಆಕೆಯನ್ನು ಹತ್ಯೆಗೈದಿದ್ದಾರೆ. ಬಳಿಕ ಶವವನ್ನು ಕಾಡಿನಲ್ಲಿ ಎಸೆದು ಹೋಗಿದ್ದಾರೆ. ಈ ಕೃತ್ಯದಲ್ಲಿ ಇಸ್ಮಾಯಿಲ್ ಜೊತೆಗೆ ಇನ್ನಿಬ್ಬರು ಭಾಗಿಯಾಗಿರುವ ಶಂಕೆ ಇದೆ. ಇಸ್ಮಾಯಿಲ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.