ಬೈಲಹೊಂಗಲ: ಸಮೀಪದ ಹಾರುಗೊಪ್ಪ ಗ್ರಾಮದಲ್ಲಿ ದುರ್ಗಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.

ಜಾತ್ರಾ ಮಹೋತ್ಸವ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಅಭಿಷೇಕ ಹೋಮ ಹವನಗಳು ಜರುಗಿದವು. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಸರತಿ ಸಾಲಿನಲ್ಲಿ ಬಂದು ದೇವಿಗೆ ಉಡಿ ತುಂಬಿ ಭಕ್ತಿ ಭಾವ ಮೆರೆದರು. ದೇವಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ದುರ್ಗಾದೇವಿ ರಥದ ಉತ್ಸವ ಸಂಚರಿಸಿತು. ಹೊನ್ನಾಟದ ಸಂಭ್ರಮ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು. ಭಕ್ತರು ಭಂಡಾರ, ಗುಲಾಲ್ ಏರಚುತ್ತಾ ಕೆಂಡ ಹಾಯ್ದು ಭಕ್ತಿ ಭಾವ ಮೆರೆದರು. ಗ್ರಾಮದ ಮಲ್ಲಿಕಾರ್ಜುನ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಅದ್ದೂರಿಯಿಂದ ಜರುಗಿತು.

ಮುದಕಪ್ಪ ಕರೆಪ್ಪನ್ನವರ, ಶಿವಪ್ಪ ಹೊಸಮನಿ, ಅಡಿವೆಪ್ಪ ಪೂಜೇರಿ, ಯಶವಂತ ಕೋಲಕಾರ, ಬಸವರಾಜ ಕರೆಪ್ಪನ್ನವರ, ಚಿದಾನಂದ ಪೂಜೇರಿ, ಮಹಾಂತೇಶ ಹೊಸಮನಿ,ಮರೆಪ್ಪ ಹರಿಜನ, ಮಲ್ಲಪ್ಪ ಕೋಲಕಾರ, ಗಂಗಪ್ಪ ಹೊಸಮನಿ, ಮಹಾದೇವ ಹುಲಿಕಟ್ಟಿ ನಿಂಗಪ್ಪಾ ಪೂಜೇರಿ, ಸಿದ್ರಾಮಪ್ಪಾ ಪೂಜೇರಿ, ಪಕ್ಕೀರಪ್ಪಾ ಹರಿಜನ, ಪ್ರಕಾಶ ಕೋಲಕಾರ,ರುದ್ರಯ್ಯ ಕಲ್ಮಠ, ಭರತೇಶ ಕೋಲಕಾರ, ಡಾ.ಬಿ ಆರ್ ಅಂಬೇಡ್ಕರ ಯುವಕ ಮಂಡಳಿ, ಶ್ರೀ ದುರ್ಗಾದೇವಿ ಅಭಿರುದ್ದಿ ಸೇವಾ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.