ಹಗರಿಬೊಮ್ಮನಹಳ್ಳಿ: ಪಟ್ಟಣದ ಚಿಂತ್ರಪಳ್ಳಿ ರಸ್ತೆಯ ಪಕ್ಕದಲ್ಲಿ ಮೂಲಸೌಕರ್ಯಗಳಿಲ್ಲದ ಖಾಸಗಿಯವರ ನಿವೇಶನದಲ್ಲಿ ಸಿಂದೊಳ್ಳು ಅಲೆಮಾರಿ ಜನಾಂಗದವರು ಟೆಂಟ್ಗಳನ್ನು ಹಾಕಿಕೊಂಡು ಬದುಕುತ್ತಿದ್ದು, ಅವರ ಜೀವನ ಬಹಳ ಕಷ್ಟಕರವಾಗಿದೆ. ಮಕ್ಕಳಂತೂ ಶಾಲೆಯ ಮುಖವನ್ನೇ ನೋಡಿಲ್ಲ.

ಇಲ್ಲಿ ಸಣ್ಣ ಮಳೆ ಬಂದರೂ ಸಾಕು ಕೆಸರು ಗದ್ದೆ ಆದಂತಾಗುತ್ತದೆ, ಟೆಂಟ್ಗಳ ಪಕ್ಕದಲ್ಲಿಯೇ ಚರಂಡಿ ನೀರು ಹರಿದು ಹೋಗುತ್ತದೆ.

ಕಳೆದ 40 ವರ್ಷಗಳಿಂದ ಪಟ್ಟಣದಲ್ಲಿ ಟೆಂಟ್ಗಳಲ್ಲಿಯೇ ವಾಸಿಸುತ್ತಿರುವ ಸಿಂದೊಳ್ಳು ಅಲೆಮಾರಿ ಜನಾಂಗದ 300 ಜನರು ಇರುವ 41 ಕುಟುಂಬಗಳಿಗೆ ಸ್ವಂತ ಸೂರಿಲ್ಲ, 100ಕ್ಕೂ ಹೆಚ್ಚು ಮಕ್ಕಳು ಶಾಲಾ ಪೂರ್ವ ಶಿಕ್ಷಣಕ್ಕಾಗಿ ಇರುವ ಅಂಗನವಾಡಿ ಕೇಂದ್ರಗಳ ಮುಖವನ್ನೇ ನೋಡಿಲ್ಲ.

ಪಟ್ಟಣದ ಅಲ್ಲಲ್ಲಿ ಖಾಲಿ ನಿವೇಶನಗಳಲ್ಲಿ ಟೆಂಟ್ ಹಾಕಿಕೊಂಡು ಬದುಕು ಕಂಡುಕೊಂಡಿರುವ ಅಲೆಮಾರಿಗಳು ಇದುವರೆಗೂ 20 ಬಾರಿ ಸ್ಥಳಾಂತರಗೊಂಡಿದ್ದಾರೆ, ಇದುವರೆಗೂ ಯಾವೊಬ್ಬ ಜನಪ್ರತಿನಿಧಿಗಳು ಇವರಿಗೆ ಶಾಶ್ವತ ನೆಲೆ ಕಲ್ಪಿಸಲು ಇಚ್ಛಾಶಕ್ತಿ ಪ್ರದರ್ಶಿಸಿಲ್ಲ.

ಇವರು ಪರಿಶಿಷ್ಟ ಜನಾಂಗಕ್ಕೆ ಸೇರಿದ್ದರೂ 45ಕ್ಕೂ ಹೆಚ್ಚು ಜನರಿಗೆ ಎಸ್ಸಿ ಜಾತಿ ಪ್ರಮಾಣ ಪತ್ರಗಳು ದೊರೆತಿಲ್ಲ, 64 ಜನರಿಗೆ ಮಾತ್ರ ನೀಡಲಾಗಿದೆ. ಕೆಲವರಿಗೆ ಪರಿಶಿಷ್ಟ ಪಂಗಡ(ಎಸ್ಟಿ) ಪ್ರಮಾಣ ಪತ್ರ ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿಗಳು.

ಶಾಲಾ ದಾಖಲಾತಿ ಇರದಿರುವುದು ಅಗತ್ಯ ದಾಖಲೆಗಳನ್ನು ಪಡೆಯಲು ತೊಡಕಾಗಿದೆ, ಮಕ್ಕಳು ಸೇರಿದಂತೆ ಹಿರಿಯರಿಗೂ ಆಧಾರ್ ಕಾರ್ಡ್ ಸಿಕ್ಕಿಲ್ಲ, ಹಿರಿಯ70 ವರ್ಷ ಮಾರೆಮ್ಮ ಅವರಿಗೆ ಮೊಮ್ಮಕ್ಕಳಿದ್ದರೂ ಜಾತಿ ಪ್ರಮಾಣ ನೀಡಲಾಗಿಲ್ಲ, ವಾಸಸ್ಥಳ ಪ್ರಮಾಣಪತ್ರ ಪಡೆಯಲು ಚುನಾವಣೆ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಕೇಳುತ್ತಿದ್ದಾರೆ. ಹಾಗಾಗಿ ಇದುವರೆಗೂ ನೀಡಿಲ್ಲ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

‘1ರಿಂದ 5 ವರ್ಷಗಳ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ತಯಾರಿಸಿದ ಆಹಾರವನ್ನು ಪ್ರತಿದಿನ ಅಲೆಮಾರಿ ಟೆಂಟ್ಗಳಿಗೆ ತೆರಳಿ ನೀಡಲಾಗುತ್ತಿದೆ, ಆದರೆ ಮಕ್ಕಳು ಮಾತ್ರ ಇದುವರೆಗೂ ಕೇಂದ್ರಗಳಿಗೆ ತೆರಳುತ್ತಿಲ್ಲ’ ಎನ್ನುತ್ತಾರೆ ಅಂಗನವಾಡಿ ಮೇಲ್ವಿಚಾರಕಿ ನಾಗರತ್ನಾ.

40 ವರ್ಷಗಳಿಂದ 300 ಮಂದಿ ವಾಸ ಇದುವರೆಗೆ 20 ಬಾರಿ ಸ್ಥಳಾಂತರ 41 ಕುಟುಂಬಗಳಿಗೆ ಸ್ವಂತ ಸೂರಿಲ್ಲ

ಟೆಂಟ್ಗಳಿಗೆ ಪ್ರತಿದಿನ ಕೊಳಕುಮಂಡಲ ಹಾವುಗಳು ನುಗ್ಗುತ್ತಿವೆ ಭಯದಿಂದಲೇ ಬದುಕಬೇಕಿದೆ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸಬೇಕು ಬಹುವರ್ಷಗಳ ಬೇಡಿಕೆ ಈಡೇರಿಸಬೇಕು
ಕಲ್ಲೇಶ್ ಸಿಂದೊಳ್ಳು ಅಲೆಮಾರಿ ಜನಾಂಗದ ನಿವಾಸಿ

ಅಲೆಮಾರಿಗಳ ಮಕ್ಕಳು ಶಾಲೆಗೆ ಹೋಗಬೇಕು ಅಲ್ಲಿ ವಿಶೇಷವಾಗಿ ಶಾಲೆ ಆರಂಭವಾಗಬೇಕು ಈ ಕುರಿತಂತೆ ಮೇಲಧಿಕಾರಿಗಳಿಗೆ ತಿಳಿಸಲಾಗುವುದು
ಪ್ರಭಾಕರ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.