ಹೊಸಪೇಟೆ (ವಿಜಯನಗರ): ಸ್ವಾಮೀಜಿಗಳು, ಯೋಗಿಗಳು ಸೇರಿದಂತೆ ಕೆಲವರ ಸ್ವತ್ತಾಗಿದ್ದ ಯೋಗಾಭ್ಯಾಸವನ್ನು ಸಾರ್ವಜನಿಕರ ಸ್ವತ್ತಾಗಿ ರೂಪಿಸಿದ ಕೀರ್ತಿ ಯೋಗ ಗುರು ಬಾಬಾ ರಾಮದೇವ ಅವರಿಗೆ ಸಲ್ಲುತ್ತದೆ ಎಂದು ಹರಿಹರ ಪಂಚಮಸಾಲಿ ಪೀಠಾಧಿಪತಿ ಹಾಗೂ ಯೋಗಗುರು ವಚನಾನಂದ ಸ್ವಾಮೀಜಿ ಹೇಳಿದರು.

ಹಂಪಿ ಉತ್ಸವದ ಪ್ರಯುಕ್ತ ವಿಜಯನಗರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳ ವತಿಯಿಂದ ಶನಿವಾರ ಬೆಳಿಗ್ಗೆ ಹಂಪಿಯ ವಿಜಯ ವಿಠಲ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಯೋಗಾಸನದಲ್ಲಿ ಅವರು ಮಾತನಾಡಿದರು.

ಹಂಪಿ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಯೋಗವನ್ನು ಪರಿಚಯಿಸುವ ಮೂಲಕ ನಡೆಸಿದ ಮೊದಲ ಯೋಗಾಭ್ಯಾಸದಲ್ಲಿ ಪತಂಜಲಿ ಯೋಗ ಪೀಠದ ಯೋಗ ಗುರು ಹಾಗೂ ಕರ್ನಾಟಕ ರಾಜ್ಯ ಪ್ರಭಾರಿ ಭವರ್ಲಾಲ್ ಆರ್ಯ ಜೊತೆಗೆ ಯೋಗಾಭ್ಯಾಸಕ್ಕೆ ಮಾರ್ಗದರ್ಶನ ನೀಡಿದ ಅವರು, ಯೋಗಾಭ್ಯಾಸದ ಜೊತೆ ಯೋಗದ ಮಹತ್ವ, ಯೋಗ ಮಾಡುವ ವಿಧಾನ ಸೇರಿದಂತೆ ಅದರಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು ಹಾಗೂ ಅಭ್ಯಾಸ ಮಾಡಿಸಿದರು.

‘ಇಂದು ಪತಂಜಲಿ ಪರಿವಾರ ದೇಶ ವಿದೇಶಗಳಲ್ಲಿ ಯೋಗವನ್ನು ಉಚಿತವಾಗಿ ತರಬೇತಿಗೊಳಿಸುವ ಮೂಲಕ ಸೇವೆ ಮಾಡುತ್ತಿದೆ’ ಎಂದು ಸ್ವಾಮೀಜಿ ಶ್ಲಾಘಿಸಿದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಹಂಪಿ ಉತ್ಸವದಲ್ಲಿ ಮೊದಲ ಬಾರಿಗೆ ಯೋಗ ನಡೆಸಲು ಅವಕಾಶ ನೀಡಿದ್ದರಿಂದ ತೃಪ್ತಿಯಾಗಿದೆ, ಇದು ನಿಜವಾಗಿಯೂ ಆಗಲೇಬೇಕಾದ ಕಾರ್ಯವಾಗಿತ್ತು. ಮುಂದೆ ಪ್ರಮುಖ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು ಎಂದರು.

ಆಯುಷ್ ಇಲಾಖೆಯ ಡಾ.ಸರಳಾ, ಪತಂಜಲಿ ಯೋಗಸಾಧಕರು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದದ ಸಾಧಕರು ಸೇರಿದಂತೆ ನೂರಾರು ಯೋಗಾಸಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.