ಹೊಸಪೇಟೆ (ವಿಜಯನಗರ): ನಗರದ ಮೇನ್ ಬಜಾರ್ನಲ್ಲಿ ಕಳೆದ 11 ದಿನಗಳಿಂದ ಪೂಜಿಸಲಾಗುತ್ತಿದ್ದ ಆರನೇ ವರ್ಷದ ಹಿಂದೂ ಮಹಾಗಣಪತಿಯ ಭವ್ಯ ಶೋಭಾಯಾತ್ರೆ ಶನಿವಾರ ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಮಂಜುನಾಥಸ್ವಾಮಿಯ ಫೋಟೊಗಳನ್ನು ಗಣಪತಿ ಕೂರಿಸಿದ್ದ ಟ್ರಕ್ನ ಮುಂಭಾಗದಲ್ಲಿ ಪ್ರದರ್ಶಿಸುವ ಮೂಲಕ ಧರ್ಮಸ್ಥಳ ಕ್ಷೇತ್ರಕ್ಕೆ ಬೆಂಬಲ ಸೂಚಿಸಲಾಯಿತು.

ಕಿವಿಗಡಚಿಕ್ಕುವ ಡಿ.ಜೆ ಸದ್ದಿನೊಂದಿಗೆ, ನಾಸಿಕ್ ಬ್ಯಾಂಡ್ ಸಹಿತ ಶೋಭಾಯಾತ್ರೆಯನ್ನು ಕಂಡು ಸಾವಿರಾರು ಮಂದಿ ಪುನೀತರಾದರು. ಸಾಂಪ್ರದಾಯಿಕ ಹಸಿರು ಪೈಜಾಮಾ, ಕೇಸರಿ ಶಾಲಿನೊಂದಿಗೆ ಗಣಪತಿ ವಿಗ್ರಹದ ಜತೆಗೆ ಇದ್ದ ಹಿಂದೂ ಮಹಾಗಣಪತಿ ಸಮಿತಿಯ ಸದಸ್ಯರು ಗಮನ ಸೆಳೆದರು.

ನಗರಸಭಾ ಸದಸ್ಯರೂ ಆಗ ಜಗದೀಶ ಕಾಮಟಗಿ ಅವರ ನೇತೃತ್ವದಲ್ಲಿ ಈ ಬಾರಿಯ ಹಿಂದೂ ಮಹಾಗಣಪತಿ ಉತ್ಸವ ನಡೆದಿದ್ದು, ಚೌತಿಯ ದಿನ ಗಣಪತಿ ಪ್ರತಿಷ್ಠಾಪನೆ ಆಗಿತ್ತು. ಶನಿವಾರ ಸಂಜೆ ಧ್ವಜ, ಬೆಳ್ಳಿ ಮೂರ್ತಿಗಳ ಹರಾಜಿನ ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.

ಟ್ರಕ್ನಲ್ಲಿ ಇರಿಸಲಾದ 18 ಅಡಿ ಎತ್ತರದ ಗಣೇಶ ವಿಗ್ರಹ ಬಹಳ ದೂರಕ್ಕೇ ಕಾಣಿಸುತ್ತಿತ್ತು. ಹೀಗಾಗಿ ಸಾವಿರಾರು ಜನರು ದೂರದಿಂದಲೇ ವಿನಾಯಕನನ್ನು ಕಂಡು ಶಿರಬಾಗಿದರು.

ಸಾಂಪ್ರದಾಯಿಕ ಕಲಾ ತಂಡಗಳು, ಸ್ಥಳೀಯ ಜಾನಪದ ತಂಡಗಳು ಇರಲಿಲ್ಲ. ಆರಂಭದಲ್ಲಿ ಗಣಪತಿಯನ್ನು ಸ್ತುತಿಸುವ ಎರಡು ಹಾಡುಗಳನ್ನು ಡಿ.ಜೆಯಲ್ಲಿ ನುಡಿಸಲಾಯಿತು. ಅದಕ್ಕೆ ಮಹಿಳೆಯರು, ಪುರುಷರು ಕುಣಿದಾಡಿದರು. ಬಳಿಕ ಬ್ಯಾಂಗಲ್ ಬಂಗಾರಿ ಸಹಿತ ಇತರ ಡಿ.ಜೆ ಹಾಡುಗಳೇ ಮಾರ್ದನಿಸಿದವು. ಅಂತಹ ಹಾಡಿಗೆ ಕುಣಿದು ಕುಪ್ಪಳಿಸಿದ ಯುವಕರ ಸಂಖ್ಯೆಗೆ ಕಡಿಮೆ ಇರಲಿಲ್ಲ.

ಬಿಗಿ ಪೊಲೀಸ್ ಭದ್ರತೆ: ನಗರದಲ್ಲಿ ಹಿಂದೂ ಮಹಾಗಣಪತಿ ಸಹಿತ ಒಟ್ಟು ಐದು ಸಾರ್ವಜನಿಕ ಗಣೇಶೋತ್ಸವ ಗಣಪತಿ ವಿಗ್ರಹಗಳ ವಿಸರ್ಜನೆ ಶನಿವಾರ ರಾತ್ರಿ ನಡೆದಿದ್ದು, ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಯಿತು. ಎಎಸ್ಪಿ, ಡಿವೈಎಸ್ಪಿ, ಏಳು ಮಂದಿ ಇನ್ಸ್ಪೆಪ್ಟರ್ಗಳು, 15 ಪಿಎಸ್ಐಗಳು, 31 ಎಎಸ್ಐಗಳು, 234 ಎಚ್ಸಿ/ಪಿಸಿಗಳು, 212 ಗೃಹರಕ್ಷಕ ದಳ ಸಹಿತ ಒಟ್ಟು 501 ಮಂದಿ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದರು.

ಹರಪನಹಳ್ಳಿ, ಹಗರಿಬೊಮ್ಮನಹಳ್ಳಿಗಳಲ್ಲಿ ಸಹ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಶನಿವಾರ ನಡೆಯಿತು. ಹರಪನಹಳ್ಳಿ ಉಪವಿಭಾಗದಿಂದ 322 ಮಂದಿ ಹಾಗೂ ಕೂಡ್ಲಿಗಿ ಉಪವಿಭಾಗದಿಂದ 255 ಮಂದಿಯನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿತ್ತು ಎಂದು ಎಸ್ಪಿ ಅರುಣಾಂಗ್ಷುಗಿರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.