ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ ನಗರಸಭೆ: ಸಂಖ್ಯಾಬಲ ಇಲ್ಲದಿದ್ದರೂ ಅಧ್ಯಕ್ಷ ಸ್ಥಾನ ಬಿಜೆಪಿಗೆ

Published : 12 ಸೆಪ್ಟೆಂಬರ್ 2024, 15:21 IST
Last Updated : 12 ಸೆಪ್ಟೆಂಬರ್ 2024, 15:21 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆಯಲ್ಲಿ ಸಂಖ್ಯಾಬಲ ಇಲ್ಲದಿದ್ದರೂ ಬಿಜೆಪಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಒಲಿದಿದೆ.

ಗುರುವಾರ ಇಲ್ಲಿ ನಡೆದ ಚುನಾವಣೆಯಲ್ಲಿ ನಗರಸಭೆ ಅಧ್ಯಕ್ಷರಾಗಿ ಎನ್‌.ರೂಪೇಶ್‌ ಕುಮಾರ್‌ ಮತ್ತು ಉಪಾಧ್ಯಕ್ಷರಾಗಿ ರಮೇಶ್ ಗುಪ್ತ ಆಯ್ಕೆಯಾದರು. ಸಂಸದ ಇ.ತುಕಾರಾಂ, ಶಾಸಕ ಎಚ್‌.ಆರ್‌.ಗವಿಯಪ್ಪ ಅವರು ಪರ ಮತ ಚಲಾಯಿಸಿದರೂ ಕಾಂಗ್ರೆಸ್‌ಗೆ ಗೆಲುವು ದಕ್ಕಲಿಲ್ಲ.

ನಗರಸಭೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 10 ಹಾಗೂ ಒಬ್ಬ ಎಎಪಿ ಸದಸ್ಯ ಸಹಿತ 13 ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್ ಒಬ್ಬ ಎಎಪಿ ಸದಸ್ಯ ಮತ್ತು ಮೂವರು ಪಕ್ಷೇತರರನ್ನು ತನ್ನೆಡೆಗೆ ಸೆಳೆಯಲು ಸಫಲವಾಯಿತು ಮತ್ತು ಪಕ್ಷದ ಸದಸ್ಯರೊಬ್ಬರು ಗೈರಾಗಿದ್ದರು. ಹೀಗಾಗಿ ಎರಡು ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಸೋಲಾಯಿತು.

‘ಕಾಂಗ್ರೆಸ್‌ ಪಕ್ಷದಲ್ಲಿ ತೀವ್ರ ಸ್ವರೂಪದ ಭಿನ್ನಮತ ಇದ್ದು, ಒಗ್ಗಟ್ಟಿನ ಕೊರತೆಯೇ ಕಾಂಗ್ರೆಸ್‌ ಸೋಲಿಗೆ ಕಾರಣ’ ಎಂಬ ದೂರು ಕೇಳಿಬಂದಿದೆ. ಮತ್ತೊಂದೆಡೆಯಲ್ಲಿ ಮಾಜಿ ಸಚಿವ ಆನಂದ್‌ ಸಿಂಗ್ ಅವರು ತಮ್ಮ ಪ್ರಭಾವ ಹೊಸಪೇಟೆಯಲ್ಲಿ ಇರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಸಂಸದ ಪ್ರತಿಕ್ರಿಯೆ

‘ನಮಗೆ ಸಂಖ್ಯಾಬಲ ಇರಲಿಲ್ಲ, ಕಳೆದ ಬಾರಿ ಸಹ ಬಹುತೇಕ ಪಕ್ಷೇತರ ಸದಸ್ಯರು ಬಿಜೆಪಿ ಬೆಂಬಲಿಸಿದ್ದರು. ಈ ಬಾರಿ ನಾಲ್ವರನ್ನು ಪಕ್ಷದತ್ತ ಒಲಿಸಿಕೊಳ್ಳುವಲ್ಲಿ ಸಫಲರಾಗಿದ್ದೇವೆ,  ಆದರೆ ಕೇವಲ ಎರಡು ಮತಗಳಿಂದ ಬಹುಮತದಿಂದ ವಂಚಿತರಾಗಿದ್ದೇವೆ’ ಎಂದು ಸಂಸದ ಇ.ತುಕಾರಾಂ ಬಳಿಕ ಮಾಧ್ಯಮದವರಿಗೆ ತಿಳಿಸಿದರು.

ನಾಯಿ ಹಾವಳಿ ತಡೆಗೆ ತಕ್ಷಣ ಕ್ರಮ

‘ಬೀದಿ ನಾಯಿ ಹಾವಳಿ ತಡೆಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಜತೆಗೆ ನಗರದ ನೀರು, ಒಳಚರಂಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಒಳಚರಂಡಿಯ ಹೂಳು ತೆಗೆದು ನೀರು ಸರಾಗವಾಗಿ  ಹರಿಯುವಂತೆ ಮಾಡಲು ₹1.50  ಕೋಟಿ ವೆಚ್ಚದ ಯಂತ್ರ ತರಿಸಿ ಕಾರ್ಯಾಚರಣೆ  ನಡೆಸುವ ಯೋಚನೆ ಇದೆ’ ಎಂದು ಅಧ್ಯಕ್ಷ ರೂಪೇಶ್‌ ಕುಮಾರ್ ತಿಳಿಸಿದರು. 

‘ನಗರದಲ್ಲಿ ಇನ್ನು ಮುಂದೆ ಅಭಿವೃದ್ಧಿಗೆ ವೇಗ ಸಿಗುವುದು ನಿಶ್ಚಿತ’ ಎಂದು  ಉಪಾಧ್ಯಕ್ಷ ರಮೇಶ್‌ ಗುಪ್ತ ಹೇಳಿದರು.

ಸಂಭ್ರಮಾಚರಣೆ: ಗುರುವಾರ ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಮೆರವಣಿಗೆ ನಡೆಯಿತಲ್ಲದೆ, ಕಾರ್ಯಕರ್ತರು  ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT