ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹೊಳಲು ಗ್ರಾಮದ ಹೊರ ವಲಯದಲ್ಲಿ ಅ.10ರಂದು ಅಪಹರಣವಾಗಿದ್ದ ವರ್ತಕ ಹೊಳಲು ಗ್ರಾಮದ ಮಂಜುನಾಥ ಶೇಜವಾಡಕರ್ (58) ಅವರ ಶವ ಗುರುವಾರ ಹರವಿ ಬಸಾಪುರ ಬಳಿ ತುಂಗಭದ್ರಾ ನದಿ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿಗಳಾದ ಹೊಳಲು ಗ್ರಾಮದ ಮಲ್ಲಿಕಾರ್ಜುನ ಉಜ್ಜಮ್ಮನವರ (27), ಯೋಗೇಶ ಅಂಗಡಿ (25) ಎಂಬುವವರನ್ನು ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ವಶಕ್ಕೆ ಪಡೆದಿದ್ದು, ಬುಧವಾರ ರಾತ್ರಿ ಆರೋಪಿಗಳನ್ನು ಕರೆ ತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಅವರು ನೀಡಿದ ಮಾಹಿತಿ ಮೇರೆಗೆ ನದಿಯಲ್ಲಿ ಹುಡುಕಾಡಿದಾಗ ಶವ ದೊರೆತಿದೆ.

‘ಅಪಹರಣಕಾರರು ಮಂಜುನಾಥ ಶೇಜವಾಡಕರ್ ಅವರ ಕೈ ಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ಕಾರಿನ ಡಿಕ್ಕಿಯಲ್ಲಿ ಇರಿಸಿ ಇಡೀ ದಿನ ರಾಣೇಬೆನ್ನೂರು ಸುತ್ತಮುತ್ತ ಸುತ್ತಾಡಿಸಿದ್ದರು. ಇದರಿಂದ ಅವರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ನಂತರ ಶವವನ್ನು ಶುಕ್ರವಾರ ರಾತ್ರಿ ಹರವಿ ಸೇತುವೆ ಮೇಲಿನಿಂದ ತುಂಗಭದ್ರಾ ನದಿಗೆ ಎಸೆದು ಪರಾರಿಯಾಗಿರುವುದಾಗಿ ಅಪಹರಣಕಾರರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ: ಅ.10 ರಂದು ಬೆಳಿಗ್ಗೆ ಮೈಲಾರ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಮಂಜುನಾಥ ಶೇಜವಾಡಕರ್ ಅವರನ್ನು ಆರೋಪಿಗಳು ಅಪಹರಿಸಿದ್ದರು. ದಾವಣಗೆರೆಯಲ್ಲಿ ವೈದ್ಯೆಯಾಗಿರುವ ಮಂಜುನಾಥ ಅವರ ಅಕ್ಕ ಡಾ.ಮಂಜುಳಾ ಶೇಜವಾಡಕರ್ ಅವರಿಗೆ ವಾಟ್ಸ್ಆ್ಯಪ್ ಕರೆ ಮಾಡಿ ₹5 ಕೋಟಿಗೆ ಬೇಡಿಕೆ ಇರಿಸಿದ್ದರು. ಅಷ್ಟೊಂದು ಹಣ ಕೊಡಲು ಆಗುವುದಿಲ್ಲ ಎಂದಾಗ ಅಪಹರಣಕಾರರು ಕೊಲೆ ಬೆದರಿಕೆ ಹಾಕಿದ್ದರು. ಇತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸಂಪರ್ಕ ಕಡಿದುಕೊಂಡಿದ್ದರು.

ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ತನಕವೂ ಮಂಜುನಾಥ ಅವರು ಜೀವಂತವಾಗಿಯೇ ಇದ್ದರು. ಎಫ್ಐಆರ್ ಆದದ್ದು ಗೊತ್ತಾದ ತಕ್ಷಣ ಭಯಗೊಂಡ ಅಪಹರಣಕಾರರು ಡಿಕ್ಕಿಯಲ್ಲಿ ಬಚ್ಚಿಡುವ ಪ್ರಯತ್ನ ಮಾಡಿದರು. ಇದರಿಂದಾಗಿಯೇ ಮಂಜುನಾಥ ಮೃತಪಟ್ಟರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಂಜುನಾಥ ಶೆಜವಾಡಕರ್, ಇತ್ತೀಚಿಗೆ ಚಿನ್ನಾಭರಣ ವ್ಯಾಪಾರ ಕೈಬಿಟ್ಟು, ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಚಿನ್ನಾಭರಣ ಮೌಲ್ಯಮಾಪಕರಾಗಿದ್ದರು. ಅವರಿಗೆ ಪತ್ನಿ, 9 ಮತ್ತು 4ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಪುತ್ರರು ಇದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ದೀಪಕ್ ಬೂಸರೆಡ್ಡಿ, ಪಿಎಸ್ಐ ಭರತ್ ಪ್ರಕಾಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
.ವರ್ತಕನ ಅಪಹರಣ: ನಾಲ್ಕು ತಂಡ ರಚನೆ; ಹೊಳಲು ಗ್ರಾಮದಲ್ಲಿ ಎಸ್ಪಿ ಮೊಕ್ಕಾಂ.ಹೂವಿನಹಡಗಲಿ|ವಾಯುವಿಹಾರಕ್ಕೆ ತೆರಳಿದ್ದ ವೇಳೆ ವ್ಯಕ್ತಿ ಅಪಹರಣ: ₹5 ಕೋಟಿಗೆ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.