ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭ

ಅಂಗನವಾಡಿಗಳಲ್ಲಿ ಚಿಣ್ಣರ ಕಲರವ
Last Updated 8 ನವೆಂಬರ್ 2021, 6:55 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಅಂಗನವಾಡಿ, ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮತ್ತೆ ಚಿಣ್ಣರ ಕಲರವ ಆರಂಭವಾಗಿದೆ.

ರಾಜ್ಯ ಸರ್ಕಾರವು ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಆರಂಭಿಸಲು ಇತ್ತೀಚೆಗೆ ನಿರ್ಣಯ ತೆಗೆದುಕೊಂಡಿತ್ತು. ಅದರ ಬೆನ್ನಲ್ಲೇ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಅಂಗನವಾಡಿ, ಪೂರ್ವ ಪ್ರಾಥಮಿಕ ಶಾಲೆಗಳು ಆರಂಭಗೊಂಡಿವೆ.

ಶನಿವಾರವೇ ಎಲ್ಲ ಅಂಗನವಾಡಿ, ಶಾಲೆಗಳನ್ನು ಸ್ಯಾನಿಟೈಸ್‌ ಮಾಡಲಾಗಿತ್ತು. ಬಲೂನ್‌, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಚಿಣ್ಣರು ಬರುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆಯರು, ಶಾಲೆಯ ಶಿಕ್ಷಕರು ಹೂಮಳೆಗರೆದು ಸ್ವಾಗತಿಸಿದರು. ಚಾಕೊಲೇಟ್‌, ಬಿಸ್ಕತ್‌ ನೀಡಿದರು.

ನಗರದ ಚಿತ್ತವಾಡ್ಗಿಯ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಸಿಡಿಪಿಒ ಸಿಂಧೂ ಯಲಿಗಾರ ಅವರು ಮಕ್ಕಳಿಗೆ ಪೆನ್ಸಿಲ್‌, ಹೂ ಕೊಟ್ಟು ಸ್ವಾಗತಿಸಿದರು. ಬಳಿಕ ಕೇಂದ್ರದಲ್ಲಿ ಮಕ್ಕಳಿಂದಲೇ ದೀಪ ಹಚ್ಚಿಸಿ, ಶಾಲಾ ಆರಂಭಕ್ಕೆ ಚಾಲನೆ ಕೊಡಿಸಿದರು.

ಪೋಷಕರು ಯಾವುದೇ ಹಿಂಜರಿಕೆಯಿಲ್ಲದೆ ಮಕ್ಕಳನ್ನು ಶಾಲೆಗೆ ಬಿಟ್ಟು ಹೋದರು. ಮಕ್ಕಳು ಪುನಃ ಶಾಲೆಗೆ ಬಂದ ಖುಷಿಯಲ್ಲಿದ್ದರು. ಹೊಸಪೇಟೆಯ 340 ಅಂಗನವಾಡಿ ಸೇರಿದಂತೆ ವಿಜಯನಗರ ಜಿಲ್ಲೆಯ ಎಲ್ಲ 2,000 ಅಂಗನವಾಡಿ ಕೇಂದ್ರಗಳು ಸೋಮವಾರ ಬಾಗಿಲು ತೆರೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT