ಹೊಸಪೇಟೆ (ವಿಜಯನಗರ): ‘ಪ್ರಜಾವಾಣಿ’ ವರದಿಗೆ ಎಚ್ಚೆತ್ತುಕೊಂಡಿರುವ ಜಿಲ್ಲಾ ಪಂಚಾಯಿತಿ, ಕೂಲಿ ಕಾರ್ಮಿಕರ ಹಾಜರಿ ಸಮಯ ಬದಲಿಸಿದೆ.
‘ಬೇಸಿಗೆಯಲ್ಲಿ ಉದ್ಯೋಗ ಖಾತ್ರಿಗೆ ನಿರಾಸಕ್ತಿ’ ಶೀರ್ಷಿಕೆ ಅಡಿ ಮೇ 2ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಕೂಲಿ ಕಾರ್ಮಿಕರಿಗೆ ಸಮಯ ನಿಗದಿ ಮಾಡಿ ಎರಡು ಸಲ ಇ–ಹಾಜರಾತಿ ಪಡೆದುಕೊಳ್ಳಲಾಗುತ್ತಿತ್ತು. ರಣ ಬಿಸಿಲಲ್ಲಿ ನೆರಳು, ಕುಡಿಯುವ ನೀರು ಸೇರಿದಂತೆ ಇತರೆ ಸೌಕರ್ಯಗಳನ್ನು ಕಲ್ಪಿಸಿರಲಿಲ್ಲ. ಇದರ ಮೇಲೆ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು.
ಪತ್ರಿಕೆಯ ವರದಿಗೆ ಸ್ಪಂದಿಸಿರುವ ಜಿಲ್ಲಾ ಪಂಚಾಯಿತಿ ಬೇಸಿಗೆಯಲ್ಲಿ ಬೆಳಿಗ್ಗೆ 8ರಿಂದ ಕೆಲಸ ಆರಂಭಿಸಲು ಅವಕಾಶ ಕಲ್ಪಿಸಿದೆ. ಈಗ ಬೆಳಿಗ್ಗೆ 8ಗಂಟೆಗೆ ಒಂದೇ ಸಲ ಹಾಜರಾತಿ ಪಡೆಯಲಾಗುತ್ತಿದೆ. ಕೆಲಸ ಮಾಡುವ ಸ್ಥಳದಲ್ಲಿ ಕುಡಿಯುವ ನೀರು, ನೆರಳಿಗೆ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಬೆಳಿಗ್ಗೆ ಹಾಗೂ ಸಂಜೆ ಹಾಜರಾತಿ ಪಡೆದು ಅಪ್‌ಲೋಡ್ ಮಾಡಲಾಗುತ್ತಿತ್ತು. ಇದಕ್ಕೆ ಕಾರ್ಮಿಕರು ಬೇಸತ್ತು ಹೋಗಿದ್ದರು. ಅನೇಕರು ಕೆಲಸದ ಬಗ್ಗೆ ನಿರಾಸಕ್ತಿ ತೋರಿ ದೂರ ಉಳಿದಿದ್ದರು. ಗಣನೀಯವಾಗಿ ಕಾರ್ಮಿಕರ ಸಂಖ್ಯೆ ಕುಸಿದಿತ್ತು.
ಮೇ 2ರಂದು ‘ಪ್ರಜಾವಾಣಿ’ಯಲ್ಲಿಪ್ರಕಟಗೊಂಡಿದ್ದ ವರದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.