ಭಾಷಾಂತರ ಅಧ್ಯಯನ ವಿಭಾಗ ಅನಾಥ
ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾಷಾಂತರ ಅಧ್ಯಯನ ವಿಭಾಗವು ಇಂದು ಅನಾಥವಾಗುತ್ತಿರುವುದು ನೋವಿನ ವಿಚಾರ. ಸರ್ಕಾರದ ನೀತಿ ನಿಯಮಗಳಿಂದ ಕಸ ಹೊಡೆಯಲು ಸಹ ಕೆಲಸದವರನ್ನು ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕನ್ನಡ ವಿಶ್ವವಿದ್ಯಾಲಯ ಈಗ ಸಂಶೋಧನೆಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ಒಮ್ಮೆ 71 ಅಧ್ಯಾಪಕರು ಇದ್ದರು ಈಗ 37 ಜನ ಮಾತ್ರ ಉಳಿದಿದ್ದಾರೆ. ಉಳಿದವರು ನಿವೃತ್ತಿಯಾಗಿದ್ದು ಅತಿಥಿ ಉಪನ್ಯಾಸಕರ ನೇಮಕದ ಅವಕಾಶವಿಲ್ಲ ಎಂದರು. ‘ಆರ್ಥಿಕ ಸಂಕಷ್ಟದಲ್ಲಿದ್ದರೂ ಕೂಡ ಇಂತಹ ಸಾಂಸ್ಕೃತಿಕ ಮತ್ತು ಬೌದ್ಧಿಕ ಕಾರ್ಯಕ್ರಮಗಳು ವಿಶ್ವವಿದ್ಯಾಲಯಕ್ಕೆ ನೆಮ್ಮದಿ ತರುತ್ತಿವೆ. ಕನ್ನಡ ಮನಸುಗಳು ಒಟ್ಟಾಗಿ ಸೇರಿ ಕನ್ನಡ ವಿಶ್ವವಿದ್ಯಾಲಯದ ಏಳಿಗೆಗಾಗಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು’ ಎಂದು ವಿನಂತಿಸಿದರು.