ಹೊಸಪೇಟೆ (ವಿಜಯನಗರ): ‘ಹೊಸಪೇಟೆಯಲ್ಲಿ ಹುಟ್ಟಿದ್ದು ಹೆಮ್ಮೆ. ಅದನ್ನು ಎಲ್ಲೆಡೆ ಹೇಳಿಕೊಳ್ಳುತ್ತೇನೆ. ನಮ್ಮ ಊರಿನ ಬೆಳವಣಿಗೆ ನೋಡಿ ಬಹಳ ಸಂತಸವಾಗಿದೆ’ ಎಂದು ನಟ ಅಜಯ್ ರಾವ್ ನುಡಿದರು.
ನಾನು ಹೊಸಪೇಟೆಯ ಎಂ.ಜೆ. ನಗರದವರು. ಇಲ್ಲಿನ ನ್ಯಾಷನಲ್, ವಿಜಯನಗರ ಕಾಲೇಜಿನಲ್ಲಿ ಓದಿದವನು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕನಸ್ಸು ಕಂಡಿದ್ದೆ. ಸಣ್ಣ ಸಾಧನೆ ಮಾಡಿ ನಿಮ್ಮೆದುರು ನಿಂತಿದ್ದೇನೆ’ ಎಂದು ಹೇಳಿದಾಗ ಜನರ ಕರತಾಡನ ಮುಗಿಲು ಮುಟ್ಟಿತ್ತು.
ಇತಿಹಾಸದಿಂದ ಪ್ರೇರಣೆ ಸಿಗಬೇಕು. ಅದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದು ಮುಖ್ಯ. ನಮ್ಮ ಊರು, ದೇಶಕ್ಕೆ ಕೆಲಸ ಮಾಡುವವನು ನಿಜಯವಾದ ನಾಯಕ. ವಿಜಯನಗರಕ್ಕೆ ಆನಂದ್ ಸಿಂಗ್ ಅಂತಹ ನಾಯಕ ಸಿಕ್ಕಿದ್ದಾರೆ. ಅವರ ನಾಯಕತ್ವದಲ್ಲಿ ಹೊಸಪೇಟೆ ಅಭಿವೃದ್ಧಿಯಾಗುತ್ತದೆ. ಎಲ್ಲರೂ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.