ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ | ಸೇಬು ತುಂಬಿದ್ದ ಲಾರಿ ಪಲ್ಟಿ; ಹಣ್ಣು ಹೊತ್ತೊಯ್ಯಲು ಮುಗಿಬಿದ್ದ ಜನ

Published : 9 ನವೆಂಬರ್ 2023, 14:11 IST
Last Updated : 9 ನವೆಂಬರ್ 2023, 14:11 IST
ಫಾಲೋ ಮಾಡಿ
Comments

ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಸಮೀಪದ ಬಣವಿಕಲ್ಲು ಬಳಿ ಗುರುವಾರ ಸಂಜೆ ಸೇಬು ತುಂಬಿದ ಲಾರಿ ಪಲ್ಟಿಯಾದ ಪರಿಣಾಮ, ಸೇಬು ಹೊತ್ತೊಯ್ಯಲು ಜನ ಮುಗಿಬಿದ್ದರು.

ಜಮ್ಮ‌ ಮತ್ತು ಕಾಶ್ಮೀರದ ಶ್ರೀನಗರದಿಂದ ಕೆರಳದ ಕೊಚ್ಚಿ ಗೆ ಹೊರಟಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ, ಚಾಲಕ ಸೇರಿ ಲಾರಿಯಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಲಾರಿ ಬೀಳುತ್ತಿದ್ದಂತೆ ಸೇಬು ಹೊತ್ತೊಯ್ಯಲು ಜನತೆ ಮುಗಿಬಿದ್ದರು, ನೆಲಬೊಮ್ಮನಹಳ್ಳಿ, ಉಲ್ಲಾನಹಳ್ಳಿ, ಚಿಕ್ಕೋಬನಹಳ್ಳಿ,ಸೂಲಸಹಳ್ಳಿ, ಬಣವಿಕಲ್ಲು, ಎಂ.ಬಿ.ಅಯ್ಯನಹಳ್ಳಿ ಸೇರಿದಂತೆ ಸುತ್ತಲಿನ‌ ಸಾವಿರಾರು ಜನರು ಸ್ಥಳದಲ್ಲಿ ಜಮಾಯಿಸಿದರು.

ಸ್ಥಳಕ್ಕೆ ಕಾನಹೊಸಹಳ್ಳಿ ಪೊಲೀಸರು ಧಾವಿಸಿ ಜನರನ್ನು ನಿಯಂತ್ರಿಸಿದರು, ಪೊಲೀಸರು ಬರುವ ಹೊತ್ತಿಗೆ ಸ್ವಲ್ಪ ಸೇಬನ್ನು ಜನ ಸಾಗಿಸಿದ್ದರು. ಕೆಲಕಾಲ ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಕಾನಹೊಸಹಳ್ಳಿಯ ಪಿಎಸ್ ಐ ಎರಿಯಪ್ಪ ಅಂಗಡಿ,ಎಎಸ್ ಐ ಚಂದ್ರಶೇಖರ್.ಕೆ ಸಿಬ್ಬಂದಿ ಜಗದೀಶ್, ಪ್ರಭಾಕರ್, ರವಿಗೌಡ, ಕಲ್ಲೇಶ್, ಸಿದ್ದಲಿಂಗಪ್ಪ, ತಿಪ್ಪೇರುದ್ರಪ್ಪ, ಹೊನ್ನೂರಪ್ಪ ನೆರವಿಗೆ ಧಾವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT