ಮನೆಯಲ್ಲೇ ಕುಳಿತು ಸ್ಮಾರಕ ದರ್ಶನ | ದೇಶದಲ್ಲಿವೆ 3 ಸಾವಿರ ಎಎಸ್ಐ ಸ್ಮಾರಕಗಳು | ಎಲ್ಲವನ್ನೂ ಆ್ಯಪ್ನಲ್ಲಿ ಅಳವಡಿಸುವ ಗುರಿ

ಹೊಸಪೇಟೆ (ವಿಜಯನಗರ): ಜಗತ್ತಿನ ಎಲ್ಲೆಡೆ ಪ್ರವಾಸಿಗರಿಗೆ ಹಾಗೂ ಜನಸಾಮಾನ್ಯರಿಗೆ ಲಭ್ಯವಾಗಿರುವ ‘ಡಿಜಿಟೂರ್’ ಆ್ಯಪ್ನ ವೈಶಿಷ್ಟ್ಯ ಕಂಡು ಜನ ಬೆರಗಾಗಿದ್ದು, ಇದು ಹಗರಿಬೊಮ್ಮನಹಳ್ಳಿಯ ತಂತ್ರಜ್ಞ ಆನಂದ ಬಾಬು ಅವರ ನೇತೃತ್ವದಲ್ಲಿ ಒಂದು ಚಿಕ್ಕ ತಂಡ ಸಂಶೋಧಿಸಿ, ಪೇಟೆಂಟ್ ಪಡೆದುಕೊಂಡಿರುವ ತಂತ್ರಜ್ಞಾನದ ಫಲ ಎಂಬುದು ಇದೀಗ ಗೊತ್ತಾಗಿದೆ.

‘ಇಮ್ಮರ್ಸೀವ್ ಆಡಿಯೊ ವಿಜುವಲ್ ಗೈಡೆಡ್ ಟೂರ್ ಎಂಬ ಪೇಟೆಂಟ್ ತಂತ್ರಜ್ಞಾನದ ತಳಹದಿಯ ಮೇಲೆ 360 ಡಿಗ್ರಿಯ ಸಾಕ್ಷ್ಯಚಿತ್ರ ಸಿದ್ಧಪಡಿಸಲಾಗಿದೆ. ಸ್ಮಾರಕದಲ್ಲಿನ ಶಿಲ್ಪ, ವಾಸ್ತು, ಶಾಸನ ಸಹಿತ ಪ್ರತಿಯೊಂದು ಕಲ್ಲನ್ನೂ ಬಿಡದೆ ಚಿತ್ರೀಕರಣ ನಡೆಸಿ, ಒಂದೊಂದು ಸೂಚಿತ ಸ್ಥಳಕ್ಕೆ ಪ್ರತ್ಯೇಕ ಮಾಹಿತಿ ನೀಡುವ ಕೆಲಸ ನಡೆದಿದೆ. ಇಂತಹ ತಂತ್ರಜ್ಞಾನವನ್ನು ಬೇರೆ ಯಾರೂ ಅಭಿವೃದ್ಧಿಪಡಿಸಿಲ್ಲ. ಹೀಗಾಗಿಯೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ನಮ್ಮ ತಂಡಕ್ಕೆ ಸ್ಮಾರಕಗಳ ಕುರಿತು ಆ್ಯಪ್ ಅಭಿವೃದ್ಧಿಗೆ ಅನುಮತಿ ನೀಡಿದೆ’ ಎಂದು ಆನಂದ ಬಾಬು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಆ್ಯಪ್ನ ಪರೀಕ್ಷಾರ್ಥ ಪ್ರಯೋಗ ನಡೆಸಿದಾಗಲೇ ಜನರಿಂದ ಅದ್ಭುತ ಸ್ಪಂದನೆ ವ್ಯಕ್ತವಾಗಿತ್ತು. ಇಂತಹ ಪರಿಪೂರ್ಣ, 360 ಡಿಗ್ರಿ ಕೋನದಲ್ಲಿ ನೋಡಬಹುದಾದ ಸ್ಮಾರಕದ ದೃಶ್ಯವನ್ನು ಒದಗಿಸುವ ಇನ್ನೊಂದು ಆ್ಯಪ್ ನಾವಂತೂ ಕಂಡಿಲ್ಲ ಎಂಬ ಪ್ರತಿಕ್ರಿಯೆ ಸ್ಮಾರಕ ಪ್ರಿಯರಿಂದ ಬಂದಿತ್ತು. ಅದು ನಮ್ಮ ಕೆಲಸಕ್ಕೆ ಉತ್ತೇಜನ ನೀಡಿತು. ಇನ್ನಷ್ಟು ಸುಧಾರಣೆಗಳನ್ನು ತಂದು ಆ್ಯಪ್ ಅನ್ನು ಎಲ್ಲಾ ವಯಸ್ಸಿನವರಿಗೂ, ಎಲ್ಲಾ ಭಾಷೆ, ಪ್ರದೇಶದವರಿಗೂ ಅರ್ಥವಾಗುವ ರೀತಿಯಲ್ಲಿ ತೋರಿಸುವ ಮತ್ತು ಕೇಳಿಸುವ ವ್ಯವಸ್ಥೆ ರೂಪಿಸುವುದು ಸಾಧ್ಯವಾಯಿತು’ ಎಂದು ಅವರು ಹೇಳಿದರು.

ಸಚಿವರ ಮೆಚ್ಚುಗೆ: ‘ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಸೋಮವಾರ ಹಂಪಿಯಲ್ಲಿ ಈ ಆ್ಯಪ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದರಲ್ಲಿನ ವಿಶೇಷತೆಗಳನ್ನು ನೋಡಿ ಅವರು ಬಹಳ ಖುಷಿಪಟ್ಟರು. ಫ್ರೆಂಚ್, ಸ್ಪ್ಯಾನಿಷ್, ರಷ್ಯನ್, ಚೈನೀಸ್ ಸಹಿತ ಕೆಲವು ವಿದೇಶಿ ಭಾಷೆಗಳಲ್ಲಿ ಸಹ ಆಡಿಯೊ ಇರಲಿ ಎಂದು ಸಚಿವರು ಸಲಹೆ ನೀಡಿದ್ದಾರೆ, ಹೀಗಾಗಿ ಮುಂದಿನ ದಿನಗಳಲ್ಲಿ ಕೆಲವು ವಿದೇಶಿ ಭಾಷೆಗಳನ್ನು ಸಹ ಅಳವಡಿಸಲಾಗುವುದು’ ಎಂದು ಆನಂದ ಬಾಬು ತಿಳಿಸಿದರು.

ತಿಂಗಳೊಳಗೆ ಮುಕ್ತಾಯ: ಈ ಮಧ್ಯೆ, ಡಿಜಿಟೂರ್ ಕ್ಯೂಆರ್ ಕೋಡ್ ಅನ್ನು ಸ್ಮಾರಕಗಳ ಬಳಿ ಅಂಟಿಸುವ ಕೆಲಸ ಆರಂಭವಾಗಿದ್ದು, ತಿಂಗಳೊಳಗೆ ಅದು ಪೂರ್ಣಗೊಳ್ಳಲಿದೆ. ಆ್ಯಪ್ನಲ್ಲಿ ಸದ್ಯ 100 ಸ್ಮಾರಕಗಳ ಸಮಗ್ರ ಮಾಹಿತಿ ಇದೆ. ಮತ್ತೂ 100 ಸ್ಮಾರಕಗಳ ಮಾಹಿತಿ ಸಂಗ್ರಹಿಸಿ ಅನುಮತಿಗೆ ಕಳುಹಿಸಿಕೊಡಲಾಗಿದೆ. ಎಎಸ್ಐನಿಂದ ಒಪ್ಪಿಗೆ ಸಿಕ್ಕಿದ ತಕ್ಷಣ ಅವುಗಳೂ ಈ ಆ್ಯಪ್ನಲ್ಲಿ ಸೇರಿಕೊಳ್ಳಲಿವೆ.

ಶಾಲೆಗಳಲ್ಲಿ ಸ್ಮಾರ್ಟ್ಬೋರ್ಡ್ಗಳು ಬರತೊಡಗಿವೆ. ಈ ಆ್ಯಪ್ನಿಂದ ಸ್ಮಾರಕಗಳ ಕುರಿತು ಮಕ್ಕಳಿಗೆ ತಿಳಿಹೇಳಲು ಉತ್ತಮ ಅವಕಾಶ ದೊರೆತಿದೆ. ಶಾಲೆಗಳು ಈ ಅವಕಾಶ ಬಳಸಿಕೊಳ್ಳಬೇಕು
ಆನಂದ ಬಾಬು ‘ಡಿಜಿಟೂರ್’ ಆ್ಯಪ್ ನಿರ್ಮಾತೃ

ಹತ್ತಿರದಿಂದ ನೋಡಿದ ಅನುಭವ

ವೃದ್ಧರಿಗೆ ಅಶಕ್ತರಿಗೆ ಸ್ಮಾರಕಗಳನ್ನು ಖುದ್ದಾಗಿ ನೋಡಲು ಸಾಧ್ಯವಾಗುವುದಿಲ್ಲ. ಆದರೆ ‘ಡಿಜಿಟೂರ್’ ಆ್ಯಪ್ನಲ್ಲಿ ಇರುವ ‘ವರ್ಚುವಲ್ ರಿಯಾಲಿಟಿ’ ವಿಶೇಷ ಸೌಲಭ್ಯದಿಂದಾಗಿ ಸ್ಮಾರಕಗಳ ಒಳಗೆ ಹೋಗಿ ಹತ್ತಿರದಿಂದ ಗಮನಿಸುವ ಅವಕಾಶ ಲಭ್ಯವಾಗಿದೆ. ಒಂದು ಸ್ಮಾರಕರ ಚಾವಣಿಯಲ್ಲೋ ಎತ್ತರದ ಕಂಬದ ಮೇಲೆ ಏನೋ ಒಂದು ವಿಗ್ರಹವೋ ಕೆತ್ತನೆಯೋ ಇದೆ ಎಂದಾದರೆ ಆ ಜಾಗದಲ್ಲಿ ಹಳದಿ ಚುಕ್ಕೆ ಇರುತ್ತದೆ ಅದನ್ನು ಕ್ಲಿಕ್ ಮಾಡಿದಾಗ ಅದರ ಹತ್ತಿರದ ದರ್ಶನ ಮಾತ್ರವಲ್ಲ ಅದರ ಇತಿಹಾಸ ನಮಗೆ ಬೇಕಾದ ಭಾಷೆಯಲ್ಲಿ ಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.