ಹೊಸಪೇಟೆ (ವಿಜಯನಗರ): ಗಣೇಶ ಚೌತಿಯ ಮೂರನೇ ದಿನವಾದ ಶುಕ್ರವಾರ ನಗರದಲ್ಲಿ ನೂರಾರು ವಿನಾಯಕ ಮೂರ್ತಿಗಳ ಭವ್ಯ ಶೋಭಾಯಾತ್ರೆ ಹಾಗೂ ವಿಸರ್ಜನೆ ನಡೆಯಿತು.

ಕಿವಿಡಗಚಿಕ್ಕುವ ಡಿ.ಜೆ ಹಾಡುಗಳು, ಕಣ್ಣು ಕೋರೈಸುವ ಬೆಳಕಿನ ನಡುವೆ, ಮಳೆಯ ಸಿಂಚನವೂ ಆಯಿತು. ಭಕ್ತರ ಉತ್ಸಾಹ ಆಗಲೂ ಕಡಿಮೆಯಾಗಲಿಲ್ಲ. ಬಳಿಕ ಸ್ಟೇಷನ್ ರಸ್ತೆಯಲ್ಲಿ ಮೆರವಣಿಗೆ ಸಾಗಿ ಫ್ರೀಡಂ ಪಾರ್ಕ್ ಸಮೀಪ ಎಲ್ಎಲ್ಸಿ ಕಾಲುವೆಯಲ್ಲ ಗಣೇಶ ಮೂರ್ತಿಗಳ ವಿಸರ್ಜನೆ ಕ್ರೇನ್ ಮೂಲಕ ನಡೆಯಿತು.

ಸಂಡೂರು ರಸ್ತೆ, ಬಳ್ಳಾರಿ ರಸ್ತೆ, ಆಯಿಲ್ ಫ್ಯಾಕ್ಟರಿ ಪಕ್ಕದ ಕಾಲುವೆಗಳಲ್ಲಿ ಸಹ ಅಲ್ಲಿಗೆ ಸಮೀಪದ ಸಾರ್ವಜನಿಕ ಗಣೋಶೋತ್ಸವ ಸಮಿತಿಯವರು ಏಕದಂತನ ಮೆರವಣಿಗೆ ನಡೆಸಿ ವಿಸರ್ಜನೆ ನೆರವೇರಿಸಿದರು.

ಸಂಜೆ 5ರಿಂದಲೇ ಒಂದೊಂದಾಗಿ ಗಣೇಶ ಮೆರವಣಿಗೆ ಆರಂಭವಾಯಿತು. ಹೆಚ್ಚಿನ ಎಲ್ಲ ಮೂರ್ತಿಗಳ ಮೆರವಣಿಗೆ ದೊಡ್ಡ ಮಸೀದಿ ಮೂಲಕವೇ ಸ್ಟೇಷನ್ ರಸ್ತೆಗೆ ಬಂದು ಮುಂದೆ ಸಾಗಿದವು. ಡಿ.ಜೆ. ಅಬ್ಬರದ ನಡುವೆ ಅಲ್ಲೊಂದು, ಇಲ್ಲೊಂದು ಭಜನಾ ತಂಡಗಳು, ಡೊಳ್ಳಕುಣಿತ, ಕೋಲಾಟ, ಹಗಲುವೇಷ ಸಹಿತ ವಿವಿಧ ಬಗೆಯ ಕಲಾತಂಡಗಳೂ ಕಾಣಿಸಿದವು. ನಾಸಿಕ್ ಬ್ಯಾಂಡ್ಗಳು ಡಿ.ಜೆಗೆ ಪ್ರತಿಸ್ಪರ್ಧೆ ಒಡ್ಡಿದವು.

ನಗರದಲ್ಲಿ 220 ಸಾರ್ವಜನಿಕ ಗಣಪತಿ ಸಹಿತ ಜಿಲ್ಲೆಯಲ್ಲಿ 1,462 ವಿನಾಯಕ ವಿಗ್ರಹಗಳ ವಿಸರ್ಜನೆ ಶುಕ್ರವಾರ ನಿಗದಿಯಾಗಿದ್ದವು ಎಂದು ಎಸ್ಪಿ ಕಚೇರಿ ಮೂಲಗಳು ತಿಳಿಸಿವೆ.

ಅನ್ನದಾನ: ಕೆಲವು ಪೆಂಡಾಲ್ಗಳಲ್ಲಿ ಗಣಪತಿ ಹೋಮ, ವಿವಿಧ ಧಾರ್ಮಿಕ ವಿಧಿವಿಧಾನಗಳು ಕಾಣಿಸಿದರೆ, ಹಲವೆಡೆ ನಿರಂತರ ಅನ್ನದಾನ ವ್ಯವಸ್ಥೆ ಮಾಡಿದ್ದು ಕಾಣಿಸಿತು. ಮೊದಲ ಎರಡು ದಿನ ಮಳೆ ಸುರಿಯುತ್ತಿದ್ದರೂ ಅನ್ನಸಂತರ್ಪಣೆಗೆ ಧಕ್ಕೆ ಉಂಟಾಗಲಿಲ್ಲ. ವಡಕರಾಯ ಯುವಕರ ಸಂಘ, ಕನ್ನಡ ಯುವಕರ ಸಂಘ, ಮಡ್ಡಿಕಟ್ಟಿ ನವೋದಯ ಯುವಕ ಮಂಡಳಿ, ಶಾಸಕರ ಮನೆ ಹತ್ತಿರದ ಗಣಪತಿ, ಆಕಾಶವಾಣಿ ಹತ್ತಿರದ ಸಿದ್ಧಿವಿನಾಯಕ ಗಣಪತಿ ಸಂಘಗಳ ವತಿಯಿಂದ ಅನ್ನದಾನ ನಡೆಯಿತು.

ಮಳೆಯ ಪರೀಕ್ಷೆ ಗೆದ್ದ ಗಣೇಶೋತ್ಸವ

ಕಳೆದ ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಗಣೇಶೋತ್ಸವ ಸಮಯದಲ್ಲಿ ಮತ್ತೆ ಸುರಿಯಲಾರಂಭಿಸಿದ್ದರಿಂದ ಸಂಘಟಕರಿಗೆ ಕಿರಿಕಿರಿಯಾಯಿತು. ಆದರೆ ನಿಗದಿತ ಕಾರ್ಯಕ್ರಮಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಸಂಘಟಕರು ವ್ಯವಸ್ಥೆ ಮಾಡಿದರು. ಆರ್ಥಿಕ ಸಶಕ್ತ ಸಂಘಗಳು ಐದನೇ ದಿನದವರೆಗೂ ಅನ್ನದಾನವನ್ನು ಮುಂದುವರಿಸುತ್ತವೆ. 7911ನೇ ದಿನಗಳಂದು ಕಡಿಮೆ ಸಂಖ್ಯೆಯ ಗಣೇಶ ವಿಗ್ರಹಗಳು ವಿಸರ್ಜನೆಗೊಳ್ಳಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.