ಹೊಸಪೇಟೆ (ವಿಜಯನಗರ): ‘ವೋಟ್ ಜೋರ್ ಗದ್ದಿ ಚೋಡ್’ ಅಭಿಯಾನದ ಭಾಗವಾಗಿ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗವು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಿಂದ 1 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ ಮಾಡಿ ಕೆಪಿಸಿಸಿ ಕಚೇರಿಗೆ ತಲುಪಿಸಿದೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಸೋಮವಾರ ತೆರಳಿದ ತಂಡ, ಕಚೇರಿಯ ಉಸ್ತುವಾರಿ ಅಸೀಫ್ ಅವರಿಗೆ ಸಹಿಗಳಿರುವ ಬಾಕ್ಸ್ ಅನ್ನು ಹಸ್ತಾಂತರಿಸಿತು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ ಗೌಡ ಮತ್ತು ಸಾಮಾಜಿಕ ಜಾಲತಾಣ ಅಧ್ಯಕ್ಷ ಸಿದ್ದು ಹಳ್ಳೇಗೌಡ ಅವರ ಆದೇಶದಂತೆ ಈ ಅಭಿಯಾನ ನಡೆಸಲಾಗಿದೆ ಎಂದು ಪಕ್ಷದ ಪ್ರಮುಖರು ತಿಳಿಸಿದರು.

ವಿಜಯನಗರ ಜಿಲ್ಲೆ ಯುವ ಕಾಂಗ್ರೆಸ್ ಮುಖಂಡ ಭರತ್ಕುಮಾರ್ ಸಿ.ಆರ್., ಸಂಡೂರಿನ ಗಣೇಶ್, ಕಂಪ್ಲಿಯ ಆರ್.ಪಿ.ಶಶಿಕುಮಾರ್, ತೋರಣಗಲ್ಲಿನ ಮದರ್ ಬಾಷಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.