ಸಿಂದಗಿ: ಪುರಸಭೆ ನೂತನ ಅಧ್ಯಕ್ಷರಾಗಿರುವ ಡಾ.ಶಾಂತವೀರ ಮನಗೂಳಿ ಹಾಗೂ ಉಪಾಧ್ಯಕ್ಷ ಸಂದೀಪ ಚೌರ ಅವರ ಆಡಳಿತಾವಧಿ ಕೇವಲ ಆರು ತಿಂಗಳು ಮಾತ್ರ. ಈ ಅವಧಿಯಲ್ಲಿ ಅವರು ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ.

ಡಾ.ಮನಗೂಳಿ ಅವರು ಈ ಹಿಂದೆ 28 ತಿಂಗಳು ಕಾಲ ಪುರಸಭೆ ಅಧ್ಯಕ್ಷರಾಗಿ ಆಡಳಿತ ನಡೆಸಿದ ಅನುಭವ ಇದ್ದಾಗ್ಯೂ ಈಗಿರುವ ಅಲ್ಪ ಅವಧಿಯಲ್ಲಿ ದೀರ್ಘ ಸವಾಲುಗಳನ್ನು ಎದುರಿಸಬಹುದೇ...? ಎಂಬ ಪ್ರಶ್ನೆ ಎದುರಾಗುವುದು ಸಹಜ.

ಪುರಸಭೆ ಕಾರ್ಯಾಲಯದ ಆಡಳಿತ ಸಂಪೂರ್ಣ ಹದಗೆಟ್ಟಿದೆ ಎಂದು ಪಟ್ಟಣದ ನಾಗರಿಕರು ಹೇಳುವ ಒಕ್ಕೋರಲಿನ ಮಾತಾಗಿದೆ. ಉತಾರ ಪಡೆಯಲು, ತೆರಿಗೆ ತುಂಬಲು, ಇನ್ನಿತರ ಕೆಲಸಗಳಿಗೆ ಪುರಸಭೆಗೆ ಅಲೆದಾಡುವುದು, ಪುರಸಭೆ ಆಡಳಿತ ವರ್ಗಕ್ಕೆ ಅದರಲ್ಲೂ ವಿಶೇಷವಾಗಿ ಮುಖ್ಯಾಧಿಕಾರಿ ವಿರುದ್ದ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.

ಆಡಳಿತ ಸುಧಾರಣೆ ಮಾಡಲಾಗದಷ್ಟು ಕೆಟ್ಟಿದೆ. ಸಾರ್ವಜನಿಕರ ಆಸ್ತಿಗಳು ಸುರಕ್ಷಿತವಾಗಿಲ್ಲ. ಪುರಸಭೆ ಕಾರ್ಯಾಲಯದ ದಾಖಲೆಗಳ ಸರಿಪಡಿಸುವಿಕೆ ಖಾಸಗಿ ಮನೆಯಲ್ಲಿ ನಡೆಯುತ್ತಿದೆ. ಮುಖ್ಯಾಧಿಕಾರಿಗಿರುವ ಗೌಪ್ಯ ಲಾಗಿನ್ ಇನ್ನಾರಿಗೊ ನೀಡಿದ್ದು ಸಾಬೀತಾಗಿದೆ. ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದರೂ ರಾಜಕೀಯ ಒತ್ತಡದಿಂದಾಗಿ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ವತ: ಪುರಸಭೆ ಹಿಂದಿನ ಅಧ್ಯಕ್ಷರೆ ಬಹಿರಂಗವಾಗಿ ಸುದ್ದಿಗಾರರ ಎದುರು ಅಸಹಾಯಕತೆ ತೋಡಿಕೊಂಡಿದ್ದರು.

ಮೇ 20 ರಂದು ಪುರಸಭೆ ಕಾರ್ಯಾಲಯದ ಮೂವರು ಪ್ರಮುಖ ಸಿಬ್ಬಂದಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನಗರಾಭಿವೃದ್ಧಿಕೋಶ ಯೋಜನಾ ನಿರ್ದೇಶಕರಿಗೆ ದೂರು ಸಲ್ಲಿಸಿ ಪುರಸಭೆ ಕೆಲವು ಸದಸ್ಯರು ಅನಧಿಕೃತ ಕೆಲಸ ಮಾಡಿಕೊಡುವಂತೆ ಒತ್ತಡ ಹೇರುತ್ತಿದ್ದಾರೆ. ನಮ್ಮ ಕರ್ತವ್ಯದಲ್ಲಿ ಅವರು ಭಾಗಿಗಳಾಗುತ್ತಿದ್ದಾರೆ. ಹೀಗಾಗಿ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟಾಗುತ್ತಲಿದೆ. ನಮಗೆ ಬೇರೆ ಪುರಸಭೆ ಕಾರ್ಯಾಲಯಕ್ಕೆ ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಂಡಿರುವುದು ಕಾರ್ಯಾಲಯದ ಮೂಲದಿಂದ ತಿಳಿದು ಬಂದಿದೆ.

ಪಟ್ಟಣದಲ್ಲಿ ತೆರುವು ಕಾರ್ಯಾಚರಣೆ ನಡೆದು 8-9 ತಿಂಗಳಾದರೂ ಅಲ್ಲಿ ಆಗಬೇಕಾಗಿರುವ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಪೌರ ಕಾರ್ಮಿಕರಿಗೆ ನಿವೇಶನ ಹಕ್ಕು ಪತ್ರ ವಿತರಣೆಯಾದರೂ ಅವರಿಗೆ ನಿವೇಶನ ಗುರುತಿಸಿಕೊಟ್ಟಿಲ್ಲ. ಹೀಗೆ ಹತ್ತು ಹಲವಾರು ಸಮಸ್ಯೆ, ಸವಾಲುಗಳು, ಆಡಳಿತ ಸುಧಾರಣೆ ಬಗ್ಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹೇಗೆ ಪರಿಹಾರ ಸೂತ್ರ ಕಂಡುಕೊಳ್ಳುತ್ತಾರೆ ಎಂಬುದನ್ನು ನಾಗರಿಕರು ಕುತುಹಲದಿಂದ ನಿರೀಕ್ಷಿಸುತ್ತಿದ್ದಾರೆ.

ತುರ್ತು ಸಾಮಾನ್ಯ ಸಭೆ ಇಂದು

ಸಿಂದಗಿ: ಪಟ್ಟಣದ ಪುರಸಭೆ ಸಭಾಭವನದಲ್ಲಿ ಜೂನ್ 2 ರಂದು ಬೆಳಿಗ್ಗೆ 11 ಗಂಟೆಗೆ ತುರ್ತು ಸಾಮಾನ್ಯ ಸಭೆ ನಡೆಯಲಿದೆ ಎಂದು ಮುಖ್ಯಾಧಿಕಾರಿ ರಾಜಶೇಖರ ಎಸ್. ತಿಳಿಸಿದ್ದಾರೆ. ಸಭೆಯಲ್ಲಿ ಸಂಸದರು ಶಾಸಕರು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸರ್ವ ಸದಸ್ಯರು ನಾಮನಿರ್ದೇಶಿತ ಸದಸ್ಯರುಗಳು ಪಾಲ್ಗೊಳ್ಳಲು ಕೋರಿದ್ದಾರೆ. ಸಭೆಯಲ್ಲಿ ಐದು ಪ್ರಮುಖ ವಿಷಯಗಳ ಅಜೆಂಡಾ ಇಟ್ಟುಕೊಳ್ಳಲಾಗಿದೆ ಎಂದು ಸೂಚನಾಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.