ವಿಜಯಪುರ: 2030 ರೊಳಗಾಗಿ ವಿಜಯಪುರವನ್ನು ಮಲೇರಿಯಾ ಮುಕ್ತ ಜಿಲ್ಲೆಯಾಗಿಸಲು ಜನರ ಸಹಕಾರ ಮುಖ್ಯಎಂದು ವಿಜಯಪುರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಕವಿತಾ ಹೇಳಿದರು.

ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ಶನಿವಾರ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಮಾಧ್ಯಮದವರಿಗೆ ಏರ್ಪಡಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರುಮಾತನಾಡಿದರು.

ಪ್ರತಿ ಗ್ರಾಮ, ಮನೆ-ಮನೆಗಳಿಗೆ ಮಾಧ್ಯಮಗಳ ಮೂಲಕ ಮಲೇರಿಯಾ ರೋಗ ಲಕ್ಷಣ ಬಗ್ಗೆ, ಅದರ ಗುಣಪಡಿಸುವ ಕುರಿತು ಮನವರಿಕೆ ಮಾಡುವುದರೊಂದಿಗೆ ಸಾರ್ವಜನಿಕರಲ್ಲಿ ಹೆಚ್ಚು ತಿಳಿವಳಿಕೆ ನೀಡಬೇಕು ಎಂದು ಅವರು ಹೇಳಿದರು.

ಪ್ರತಿ ಗ್ರಾಮಗಳಲ್ಲಿ ಮಲೇರಿಯ ಕುರಿತು ಆರೋಗ್ಯ ಇಲಾಖೆ ಈಗಾಗಲೇ ಸಮಾರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು ಕೂಡ ತಮ್ಮ ಮನೆಯ ಸುತ್ತಲೂ ಸ್ವಚ್ಛವಾದ ವಾತಾವರಣ ಹೊಂದಿರಬೇಕು. ಎಲ್ಲೆಂದರಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟಬೇಕು. ಸೊಳ್ಳೆ ಪರದೆಗಳನ್ನು, ಸೊಳ್ಳೆಬತ್ತಿ ಹಾಗೂ ಮೈತುಂಬ ಬಟ್ಟೆ ಧರಿಸುವುದು ಸೂಕ್ತ ಎಂದು ಅವರು ಹೇಳಿದರು.

ಉಪ ಜಿಲ್ಲಾ ಶಿಕ್ಷಣ ಅಧಿಕಾರಿ ಡಾ. ಹಂಚಿನಾಳ ಮಾತನಾಡಿ, ನಮ್ಮ ಸುತ್ತ ಮುತ್ತಲು ಸಾವಿರಾರು ಬಗೆಯ ಸೊಳ್ಳೆಗಳಿರುತ್ತವೆ. ಅದರಲ್ಲಿ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಕಚ್ಚುವ ಮೂಲಕ ಮಲೇರಿಯಾ ರೋಗ ಲಕ್ಷಣಗಳು ಕಂಡುಬರುತ್ತವೆ. ಈ ರೋಗದಿಂದ ದಿನ ಬಿಟ್ಟು ದಿನ ಚಳಿ ಜ್ವರ ಬರುವುದು, ತಲೆನೋವು ಕಾಣಿಸಿಕೊಳ್ಳುವುದು, ಕೆಲವೊಮ್ಮೆ ವಿಶೇಷ ತೊಂದರೆಗಳು ಉಂಟಾಗಬಹುದು. ಅದು ಅಲ್ಲದೆ ಮೆದುಳು ಮತ್ತು ಇತರೆ ಒಳ ಅಂಗಾಂಗಗಳಿಗೆ ಹರಡಿ ಮನುಷ್ಯ ಸಾಯಲುಬಹುದಾಗಿದೆ. ಈ ರೋಗವನ್ನು ಸುಮಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ ಅವರು ಹೇಳಿದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಜೈಬುನ್ನಿನಾ ಬೀಳಗಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಆರ್. ಬಾಗವಾನ್, ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಯು.ಎಸ್. ಬೂದಿ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಶಿವಾನಂದ ಬೊಮ್ಮನಹಳ್ಳಿ, ಬಿ. ಪಿ. ಚಿಕ್ಕನಗೌಡರ, ಅರವಿಂದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.