ನಾಲತವಾಡ: ರಕ್ಕಸಗಿ ಕ್ಲಸ್ಟರ್‌ನ ಬಂಗಾರಗುಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಯ್ಯಪ್ಪ ಪರುತಪ್ಪ ಶಿರಗುಂಪಿ, ರಕ್ಕಸಗಿ ಸರ್ಕಾರಿ ಕೆಪಿಎಸ್ ಪ್ರಾಥಮಿಕ ಶಾಲಾ ಶಿಕ್ಷಕಿ ನಿಂಗಮ್ಮ ಅಥಣಿ ಅವರಿಗೆ ‘ಶಿಕ್ಷಕ ರತ್ನ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ಆಶ್ರಯದಲ್ಲಿ, ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಅಂಗವಾಗಿ, ಧಾರವಾಡದ ಆಲೂರ ವೆಂಕಟರಾಯರ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.