ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ರಗತಿ ಹಂತದಲ್ಲಿ ಜಲಧಾರೆ ಯೋಜನೆ ಕಾಮಗಾರಿ’

Published 2 ಸೆಪ್ಟೆಂಬರ್ 2024, 16:10 IST
Last Updated 2 ಸೆಪ್ಟೆಂಬರ್ 2024, 16:10 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಕ್ಷೇತ್ರದ ಪ್ರತಿ ಗ್ರಾಮದ ಕೂಡು ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲಾಗಿದ್ದು, ಇಂಗಳೇಶ್ವರ ಹಾಗೂ ಮಸಬಿನಾಳ ಕೂಡು ರಸ್ತೆ ಪೂರ್ಣಗೊಂಡರೆ ಕ್ಷೇತ್ರದ ರಸ್ತೆಗಳು ಸಂಪೂರ್ಣಗೊಂಡಂತಾಗುತ್ತದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲ್ಲೂಕಿನ ಇಂಗಳೇಶ್ವರದಲ್ಲಿ ಲೋಕೊಪಯೋಗಿ ಇಲಾಖೆ ಮತ್ತು ಜಲಸಂಪನ್ಮೂಲ, ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ ವಸತಿ ಯೋಜನೆ ಅಡಿಯಲ್ಲಿ ಸೋಮವಾರ ₹16 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ದಿ ಹಾಗೂ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಜಲಧಾರೆ ಯೋಜನೆ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಭವಿಷ್ಯದಲ್ಲಿ ಸಂಪೂರ್ಣ ಕುಡಿಯುವ ನೀರಿನ ಯೋಜನೆ ಜಾರಿಯಾಗಲಿದೆ. ಸದ್ಯದ ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸಿದಾಗ ವಿಜಯಪುರ ಜಿಲ್ಲೆ ಸಂಪೂರ್ಣ ನೀರಾವರಿಗೆ ಒಳಪಡಲಿದೆ ಎಂದು ಹೇಳಿದರು.

ಇಂಗಳೇಶ್ವರದಲ್ಲಿ ₹1.50 ಕೋಟಿ ವೆಚ್ಚದಲ್ಲಿ ಬಸವೇಶ್ವರರ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಬೇಡಿಕೆ ಇದ್ದು, ಶೀಘ್ರದಲ್ಲಿಯೇ ಬೇಡಿಕೆ ಈಡೇರೆಸುವ ಭರವಸೆ ನೀಡಿದರು.

ಸಹಕಾರಿ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ತಹಶೀಲ್ದಾರ್‌ ವೈ.ಎಸ್. ಸೋಮನಕಟ್ಟಿ, ಇಂಗಳೇಶ್ವರ ಗ್ರಾ.ಪಂ ಅಧ್ಯಕ ಬನ್ನೇಪ್ಪ ಡೋಣೂರ, ಮುಖಂಡರಾದ ಕಲ್ಲಯ್ಯ ಹಿರೇಮಠ, ಶರಣು ಆಲೂರ, ಅರವಿಂದ ಕುಲಕರ್ಣಿ, ಮಲ್ಲಪ್ಪ ಹಾರಿವಾಳ, ರಮೇಶ ಕವಲಗಿ, ಪ್ರಕಾಶ ದೇಸಾಯಿ, ಶಿವರಡ್ಡಿ ಬೋಸಗಿ, ಲೋಕೊಪಯೋಗಿ ಇಲಾಖೆಅಧಿಕಾರಿ ಜೆ.ವಿ.ಕಿರಸೂರ, ನಿಂಗಪ್ಪ ಗೋಠೆ, ಸಂತೋಷ ಭೋವಿ, ಕೆ.ಎನ್. ಒಡೆಯರ, ಮಲ್ಲಿಕಾರ್ಜುನ, ಪಿಡಿಒ ವಿಜಯಕುಮಾರ ದೇವರನಾವದಗಿ ಇದ್ದರು. ಜಕ್ಕಣ್ಣ ಮಾಸ್ತರ ಮೀಸಿ ನಿರೂಪಿಸಿದರು. ಎ.ಎಲ್.ಗಂಗೂರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT