ವಿಜಯಪುರ: ಕೇರಳದಲ್ಲಿ ಹಕ್ಕಿಜ್ವರ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಜಿಲ್ಲೆಗೆ ಕೋಳಿ ಉತ್ಪನ್ನಗಳು ಬರದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಕೋಳಿ ಉತ್ಪನ್ನಗಳು ಕೇರಳದಿಂದ ವಿಜಯಪುರ ಜಿಲ್ಲೆಗೆ ಬರುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಆರ್ ಆರ್ ಟಿ (ರ್ಯಾಪಿಡ್ ರೆಸ್ಪಾನ್ಸ್ ಟೀಮ್) ಸನ್ನದ್ದುಗೊಳಿಸಿ, ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ನಿಯಮಿತವಾಗಿ ಹಕ್ಕಿ ಜ್ವರ ಸರ್ವೇಕ್ಷಣಾ ಕಾರ್ಯಕ್ರಮವು ಜಾರಿಯಲ್ಲಿದೆ ಹಾಗೂ ವಾತಾವರಣದಿಂದ ಕೋಳಿ ಹಿಕ್ಕೆಯಿಂದ ಕೋಳಿ ಆಹಾರ, ರೆಕ್ಕೆಪುಕ್ಕಗಳು, ಕೋಳಿಗಳನ್ನು ಸ್ಯಾಂಪಲ್ ರಕ್ತಗಳನ್ನು ಪ್ರತಿ ತಿಂಗಳು ಬೆಂಗಳೂರಿನ ಪ್ರಾಣಿ ಆರೋಗ್ಯ ಸಂಸ್ಥೆ ಲ್ಯಾಬ್ನ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಯಾವುದೇ ರೀತಿಯ ಹೆಚ್ಚಿನ ಸಂಖ್ಯೆಗಳಲ್ಲಿ ಕೋಳಿಗಳು ಮೃತಪಟ್ಟರೆ ಹಾಗೂ ರೋಗದ ಬಗ್ಗೆ ನಿಗಾ ಇಡಲಾಗಿದೆ ಎಂದರು.

ಜಿಲ್ಲೆಯ ಗಡಿಭಾಗದಲ್ಲಿ ವೈದ್ಯಾಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ಕೋಳಿ ಮತ್ತು ಮೊಟ್ಟೆ ಮೇಲೆ ನಿಗಾ ಇರಿಸಲಾಗಿದೆ ಹಾಗೂ ಕೆರೆ ಹಾಗೂ ನೀರಿನ ಸಂಗ್ರಹಾಲಯಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಮೃತಪಟ್ಟಿರುವ ಪಕ್ಷಿಗಳ ಬಗ್ಗೆ ಪಶುಪಾಲನೆ ಇಲಾಖೆಯಿಂದ ನಿಗಾ ಇಡಲಾಗಿದೆ ಎಂದು ಹೇಳಿದರು.

ಜಿಲ್ಲೆಯ ನಾಗರಿಕರು ಕೋಳಿ ಮೊಟ್ಟೆಯನ್ನು ಉತ್ತಮವಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಸಾರ್ವಜನಿಕರು ಹಾಗೂ ಕೋಳಿ ಹಾಗೂ ಕೋಳಿ ಉತ್ಪನ್ನ ಮಾರಾಟಗಾರರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.