ಸಚಿವ ಶಿವಾನಂದ ಪಾಟೀಲ ನನ್ನ ಒಂದು ಕಾಲದ ರಾಜಕೀಯ ಗುರುಗಳು. ಇದೀಗ ಅವರ ಮತ ಕ್ಷೇತ್ರದ ನಿಡಗುಂದಿ ಪಟ್ಟಣ ಪಂಚಾಯಿತಿ ವಾರ್ಡ್‌ವೊಂದಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ನಾನೇ ಗೆಲ್ಲಿಸಿಕೊಂಡು ಬಂದಿದ್ದೇನೆ
–ಗುರುಲಿಂಗಪ್ಪ ಅಂಗಡಿ ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ ವಿಜಯಪುರ
ಪಾಲಿಕೆಯಲ್ಲಿ ಬಿಜೆಪಿ ಆಡಳಿತ
ವಿಜಯಪುರ: ‘ಮಹಾನಗರ ಪಾಲಿಕೆ ಮೇಯರ್ ಉಪ ಮೇಯರ್ ಚುನಾವಣೆಯಲ್ಲಿ ಗೆದ್ದಿರುವುದು ಬಿಜೆಪಿಯೇ ಹೊರತು ಬಿಆರ್‌ಪಿ ಅಲ್ಲ. ಆಡಳಿತ ನಡೆಸುತ್ತಿರುವವರು ಬಿಜೆಪಿ ಚುನಾಯಿತ ಪ್ರತಿನಿಧಿಗಳು. ನಗರದ ಅಭಿವೃದ್ಧಿ ವಿಷಯವಾಗಿ ಶಾಸಕ ಯತ್ನಾಳ ಅವರ ಜೊತೆ ಮೇಯರ್ ಉಪ ಮೇಯರ್ ಸದಸ್ಯರು ಕೈಜೋಡಿಸಿದ್ದಾರೆಯೇ ಹೊರತು ರಾಜಕೀಯವಾಗಿ ಅಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸ್ಪಷ್ಟಪಡಿಸಿದರು. ‘ಯತ್ನಾಳ ಅವರು ಈ ಹಿಂದೆ ಬಿಜೆಪಿಯಲ್ಲಿ ಇದ್ದಾಗಲೇ ಮೇಯರ್ ಉಪಮೇಯರ್ ಚುನಾವಣೆ ನಡೆದಿತ್ತು. ಆಗ ಯತ್ನಾಳ ಅವರು ಸಹಕಾರ ನೀಡಿದ್ದರು. ಅಲ್ಲದೇ ಹಾಲಿ ಅವರೇ ಶಾಸಕರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಹಕಾರ ಪಡೆದುಕೊಂಡರೆ ತಪ್ಪೇನಿಲ್ಲ’ ಎಂದರು.