ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಮಾರಾಟವಾಗಿದ್ದ ಹಸುಗೂಸು ಹುಬ್ಬಳ್ಳಿಯಲ್ಲಿ ಪತ್ತೆ, ತಾಯಿಯೇ ಮುಖ್ಯ ಆರೋಪಿ

ಜಿಲ್ಲಾಸ್ಪತ್ರೆ ಸಿಬ್ಬಂದಿ ಪಾತ್ರವಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ
Last Updated 22 ಸೆಪ್ಟೆಂಬರ್ 2021, 15:12 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮಾರಾಟವಾಗಿದ್ದ ಹಸುಗೂಸು ಸುರಕ್ಷಿತವಾಗಿ ಪತ್ತೆಯಾಗಿದ್ದು, ಮಗುವಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ತಿಳಿಸಿದ್ದಾರೆ.

ಮಗುವಿನ್ನು ಖರೀದಿಸಿದ್ದದೇವರಹಿಪ್ಪರಗಿಯಆಟೋ ಚಾಲಕ ಮಹಮ್ಮದ್‌ ರಫೀಕ್‌ ಹವಾಲ್ದಾರ ಎಂಬಾತನನ್ನು ಪೊಲೀಸರು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ ಎಂದರು.

ಆಟೋ ಚಾಲಕ ಸದವತ್ತಿಯಲ್ಲಿರುವ ತನ್ನ ಸಂಬಂಧಿಕರಿಗಾಗಿ ಗಂಡು ಮಗುವನನ್ನು ₹6 ಸಾವಿರಕ್ಕೆ ಖರೀದಿಸಿರುವುದು ವಿಚಾರಣೆ ವೇಳೆ ಬಯಲಿಗೆ ಬಂದಿದೆ. ಅವಧಿ ಪೂರ್ವ ಜನಿಸಿದ ಮಗುವಾಗಿರುವುದರಿಂದ ಆರೋಪಿಗಳು ಮಗುವನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿಚಿಕಿತ್ಸೆ ಕೊಡಿಸುತ್ತಿದ್ದರು ಎಂದು ಹೇಳಿದರು.

ಹೆತ್ತ ತಾಯಿಯೇ ಸ್ವತಃ ಮಗುವನ್ನು ಮಾರಾಟ ಮಾಡಿದ್ದು, ಮುಖ್ಯ ಆರೋಪಿಯಾಗಿದ್ದಾರೆ. ಇದರಲ್ಲಿ ಜಿಲ್ಲಾಸ್ಪತ್ರೆಸಿಬ್ಬಂದಿ ಪಾತ್ರ ಇಲ್ಲ ಎಂಬುದು ಸ್ಪಷ್ಟವಾಗಿದೆ. ಮಹಿಳೆ ಪ್ರಕರಣದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನರ್ಸ್‌ ಅವರ ಒತ್ತಾಯದ ಮೇರೆಗೆ ಮಗು ಮಾರಾಟ ಮಾಡಿದ್ದೆ ಎಂದು ಆರಂಭದಲ್ಲಿ ಪೊಲೀಸರಿಗೆ ಸುಳ್ಳು ಹೇಳಿಕೆ ನೀಡಿದ್ದರು ಎಂದರು.

ಮಗು ಮಾರಾಟ ಮಾಡಿದ್ದ ಮಹಿಳೆಯುತಿಕೋಟಾ ತಾಲ್ಲೂಕಿನ ಬಿಜ್ಜರಗಿ ನಿವಾಸಿಯಾದ್ದು, ಇವರಿಗೆ ಈ ಮೊದಲು ಜನಿಸಿದ್ದ ಹೆಣ್ಣು ಮಗುವೊಂದು ಇದೆ. ಎರಡನೇ ಮಗುವನ್ನು ಸಾಕುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಮಾರಾಟ ಮಾಡಿದ್ದರು. ವಿಷಯ ಗಮನಕ್ಕೆ ಬರುತ್ತಿದ್ದಂತೆ ಮಕ್ಕಳ ಸಹಾಯವಾಣಿಜಿಲ್ಲಾ ಸಂಯೋಜಕಿಸುನಂದಾ ತೋಳಬಂದಿ ಅವರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಾಸಕರಾದ ಎಂ.ಬಿ.ಪಾಟೀಲ, ಯಶವಂತರಾಯಗೌಡ ಪಾಟೀಲ ಅವರು ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದರು. ಮಗುವನನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ಸಚಿವ ಜಿ.ಮಾಧುಸ್ವಾಮಿ ಸದನದಲ್ಲಿ ಭರವಸೆ ನೀಡಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಮಗುವನ್ನು ಪತ್ತೆ ಹಚ್ಚುವ ಸಂಬಂಧಮಹಿಳಾ ಪೊಲೀಸ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಪ್ಟರ್‌ ಸಿ.ಬಿ ಬಾಗೇವಾಡಿ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ನೇಮಿಸಿದ್ದರು. ವಾರದೊಳಗೆ ಆರೋಪಿಯನ್ನು ಬಂಧಿಸಿ, ಮಗುವನ್ನು ಪತ್ತೆ ಹಚ್ಚುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.

ರಾಜ್ಯದ ಗಮನ ಸೆಳೆದಿದ್ದ ಮಗು ಮಾರಾಟ ಪ್ರಕರಣದ ಪತ್ತೆ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್. ಡಿ ಆನಂದಕುಮಾರ್‌ ತಿಳಿಸಿದ್ದಾರೆ.

ವಿಜಯಪುರ ಮಹಿಳಾ ಠಾಣೆ ಪಿ.ಎಸ್.ಐ ಎಂ.ವಿ. ಕುಲಕರ್ಣಿ, ಎ.ಎಸ್.ಐ ಆರ್.ಎಸ್.ಬನಸೋಡೆ ಸಿಬ್ಬಂದಿ ಎನ್.ಎಸ್.ವಿಜಯಕುಮಾರ. ಆರ್.ಆರ್ ವಾಲಿಕಾರ, ಎಂ.ಬಿ ಹೂಗಾರ, ಕೆ.ಕೆ ಬೆಳಗಲಿ, ವಿ.ಆರ್. ಕಟ್ಟಿಮನಿ, ವಿ.ಪಿ.ಕೋಟ್ಯಾಳ, ಆರ್.ಜಿ ದೇವೂರ, ಪೂರ್ಣಿಮಾ ಅವರು ತನಿಖಾ ತಂಡದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT