ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಕೊಲೆ ಮಾಡುವ ಕೆಲ್ಸ ಮಾಡ್ತೀವಿ: ವಕೀಲ ಛಾಯಾಗೋಳ ವಿವಾದಾತ್ಮಕ ಹೇಳಿಕೆ

Published 6 ಡಿಸೆಂಬರ್ 2023, 13:00 IST
Last Updated 6 ಡಿಸೆಂಬರ್ 2023, 13:00 IST
ಅಕ್ಷರ ಗಾತ್ರ

ವಿಜಯಪುರ: ಚಿಕ್ಕಮಗಳೂರಿನಲ್ಲಿ ಪೊಲೀಸರು ಮತ್ತು ವಕೀಲರ ನಡುವೆ ನಡೆದ ಸಂಘರ್ಷ ಖಂಡಿಸಿ ವಕೀಲರು ವಿಜಯಪುರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ವಕೀಲ ಸುಭಾಷ್ ಛಾಯಾಗೋಳ ಅವರು ಈ ವೇಳೆ ಪೊಲೀಸರಿಗೆ ಬಹಿರಂಗವಾಗಿ ಕೊಟ್ಟಿರುವ ಎಚ್ಚರಿಕೆಯ ಮಾತುಗಳು ವಿವಾದಕ್ಕೆ ಕಾರಣವಾಗಿದೆ.

‘ಇನ್ಮೇಲೆ ಯಾರಾದರೂ ಪೊಲೀಸರು ವಕೀಲರ ಮೇಲೆ ಹಲ್ಲೆ ಮಾಡಿದ್ರೆ, ನಾವು ವಕೀಲರು ನೂರು ಪೊಲೀಸರ ಕೊಲೆ ಮಾಡುವ ಕೆಲ್ಸ ಮಾಡ್ತಿವಿ. ಯಾಕಂದ್ರೆ ಇದು ಪೊಲೀಸರ ರಾಜ್ಯವಲ್ಲ, ವಕೀಲರ ರಾಜ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT