ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳ ಅಭಿವೃದ್ಧಿಗೆ ಗ್ರಾಹಕರ ಸಹಕಾರ ಅವಶ್ಯ: ಭರತೇಶ ಕಲ್ಯಾಣಿ

Published 9 ಆಗಸ್ಟ್ 2023, 13:17 IST
Last Updated 9 ಆಗಸ್ಟ್ 2023, 13:17 IST
ಅಕ್ಷರ ಗಾತ್ರ

ಹೊರ್ತಿ: ಗ್ರಾಹಕರ ಪರಸ್ಪರ ಸಹಕಾರ ಹಾಗೂ ಹೆಚ್ಚಿನ ಗ್ರಾಹಕರನ್ನು ಹೊಂದುವ ಮೂಲಕ ಆರ್‌.ಬಿ.ಎಲ್ ಬ್ಯಾಂಕ್ ಉತ್ತಮ ಬೆಳವಣಿಗೆ ಹೊಂದಲು ಮುಖ್ಯ ಕಾರಣವಾಗಿದೆ ಎಂದು ಇಂಚಗೇರಿ ಆರ್.ಬಿ.ಎಲ್ ಬ್ಯಾಂಕ್ ಲಿಮಿಟೆಡ್ ಶಾಖಾ ಪ್ರಬಂಧಕ ಭರತೇಶ ಕಲ್ಯಾಣಿ ಹೇಳಿದರು.

ಸಮೀಪದ ಇಂಚಗೇರಿಯ ಆರ್.ಬಿ.ಎಲ್ ಬ್ಯಾಂಕ್ ಶಾಖೆಯಲ್ಲಿ ಸೋಮವಾರ ಆರ್.ಬಿ.ಎಲ್ ಬ್ಯಾಂಕ್ ಲಿಮಿಟೆಡ್ ಇದರ 80ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ಯಾಂಕ್‌ ದೇಶದ 24 ರಾಜ್ಯಗಳಲ್ಲಿ 553 ಶಾಖೆಗಳನ್ನು ಹೊಂದುವ ಮೂಲಕ ಗ್ರಾಹಕರಿಗೆ ಸಕಾಲಕ್ಕೆ ಉತ್ತಮ ಸೇವೆ ಒದಗಿಸುತ್ತಿವೆ ಎಂದು ಹೇಳಿದರು.

ಶ್ರೀಮಾಧವಾನಂದ ಪ್ರೌಢ ಶಾಲಾ ಮುಖ್ಯಗುರು ಆರ್.ಡಿ. ಬಿರಾದಾರ ಮಾತನಾಡಿ, ಗ್ರಾಮದ ಆರ್.ಬಿ.ಎಲ್ ಬ್ಯಾಂಕ್ ಗ್ರಾಹಕರ ಜತೆ ಪರಸ್ಪರ ಉತ್ತಮ ಬಾಂಧವ್ಯ, ಸಹಕಾರದೊಂದಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.

ಶಿಕ್ಷಕ ಶಿವಣ್ಣ ಹದಿಮೂರ ಮಾತನಾಡಿ, ಗ್ರಾಮದಲ್ಲಿ ಯಾವುದೇ ಬ್ಯಾಂಕ್ ಇರದ ಕಾರಣ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿತ್ತು. 7 ವರ್ಷದ ಹಿಂದೆ ಗ್ರಾಮದಲ್ಲಿ ಆರ್.ಬಿ.ಎಲ್ ಬ್ಯಾಂಕ್ ಶಾಖೆ ತೆರೆದಿದ್ದರಿಂದ ಗ್ರಾಹಕರಿಗೆ ಬಹಳಷ್ಟು ಅನುಕೂಲಕರವಾಗಿದೆ ಎಂದರು.

ಆರ್.ಬಿ.ಎಲ್ ಬ್ಯಾಂಕ್ ನ ಸಹಾಯಕ ವ್ಯವಸ್ಥಾಪಕ ಶ್ರೀಧರ ಮೆರೆಕೊಡ ಸಿಬ್ಬಂದಿ ಸಿದರಾಯ ಖೈರಾವಕರ, ಕೃಷಿ ಪೀಲ್ಡ್‌ ಅಧಿಕಾರಿ ಆಶಿಪ್ ನದಾಫ್‌, ನಂದಿ ಬಿ.ರಾಠೋಡ, ಸುನೀಲ ನರಸರೆಡ್ಡಿ, ತಾಜುದ್ಧಿನ್ ಎನ್.ಮುಲ್ಲಾ, ಶಫಿಕ್ ಡಿ.ಮುಲ್ಲಾ, ಗೋಪಾಲ ರಾಠೋಡ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಭೀಮರಾಯಗೌಡ ಬಿರಾದಾರ, ಕಮಲಸಾಬ ವಾಲಿಕಾರ, ಸಂತೋಷ ಬೆಳ್ಳೆನವರ, ಅಲಿಸಾಬ ಚಡಚಣ, ನಾಮದೇವ ರಾಠೋಡ, ಬನಸಿದ್ದಗೌಡ ಬಿರಾದಾರ, ಅಮಸಿದ್ದ ಬಿರಾದಾರ, ಬಸಪ್ಪ ನವತ್ರೆ, ಶ್ರೀಶೈಲ ಗಡಶೆಟ್ಟಿ, ವಿಶ್ವನಾಥ ಬಡಿಗೇರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT