ನಾಲತವಾಡ: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ, ಇದರಿಂದ ರೈತರ ಜಮೀನಿನಲ್ಲಿ ನೀರು ನಿಂತಿದೆ. ಬೆಳದ ಬೆಳೆಗಳು ಹಾಳಾಗಿವೆ, ಶೀಘ್ರದಲ್ಲೇ ಸರ್ಕಾರ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು.

ಗುರುವಾರ ಸಾಯಂಕಾಲ ನಾಲತವಾಡ ಹೋಬಳಿಯಲ್ಲಿ ಹಾನಿಗೀಡಾದ ಬೆಳೆಗಳ ಜಮೀನಿಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಾಲ್ಲೂಕ ಆಡಳಿತ ಪ್ರತಿ ರೈತನ ಜಮೀನಿಗೆ ತೆರಳಿ ಬೆಳೆ ಸಮಿಕ್ಷೆ ನಡೆಸಬೇಕು, ಆದರೆ ತಾಲ್ಲೂಕಿನ ಯಾವುದೇ ಅಧಿಕಾರಿ ಬೆಳೆ ಸಮೀಕ್ಷೆ ನಡೆಸಿಲ್ಲ, ತಕ್ಷಣ ಬೆಳೆ ಸಮೀಕ್ಷೆ ಮಾಡಬೇಕು, ಎಸ್ ಡಿ.ಆರ್,ಎಫ್ ನಿಧಿಯಿಂದ ಕೇಂದ್ರ ಸರ್ಕಾರ ಶೇ75 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ25 ಸೇರಿಸಿ ಪ್ರತಿ ಹೆಕ್ಟೇರ್ಗೆ ₹ 8500 ಒಣಬೇಸಾಯಕ್ಕೆ, 15000 ಸಾವಿರ ರೂಪಾಯಿ ನೀರಾವರಿಯ ತೋಟಗಾರಿಗೆ ಬೆಳಗೆಗಳಿಗೆ ನೀಡಲು ಅವಕಾಶವಿದೆ ಎಂದರು.

ರೈತರ ಮೇಲೆ ಕಾಳಜಿ ಇದ್ದರೆ ಕೂಡಲೇ ಎಸ್ಡಿಆರ್ಎಫ್ ನಿಧಿಯಿಂದ ಪರಿಹಾರ ನೀಡಬೇಕು. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್ಗೆ 20 ಸಾವಿರ ರೂಪಾಯಿ ನೀಡಬೇಕು. ಒಂದು ವೇಳೆ ರಾಜ್ಯ ಸರ್ಕಾರ ಬಿಡುಗಡೆ ಮಾಡದಿದ್ದರೆ ರಾಜ್ಯದಲ್ಲಿ ರೈತರ ಜೊತೆಗೂಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಈ ವೇಳೆ ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಎಂ.ಎಸ್.ಪಾಟೀಲ, ಕೆಂಚಪ್ಪ ಬಿರಾದಾರ, ಜಿ.ಮಹಾಂತಗೌಡ ಗಂಗನಗೌಡರ, ಈರಣ್ಣ ಮುದ್ನೂರ, ಸಂಗಣ್ಣ ಹಾವರಗಿ, ಶೇಖಪ್ಪ ದೇಶಮುಖ ಹಾಗೂ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.