ಸಿಂದಗಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಧರಣಿ ಕುಳಿತ ಅಮಾಯಕರನ್ನು ರಾಜಕೀಯವಾಗಿ ಬಳಸಿಕೊಳ್ಳಬೇಡಿ ಎಂದು ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ಚೌರ ಸಲಹೆ ನೀಡಿದರು.

ಬುಧವಾರ ಪಟ್ಟಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, 842/2*2 ರಲ್ಲಿನ 84 ಕುಟುಂಬಗಳ ತೆರುವು ಕಾರ್ಯಾಚರಣೆ ಸುಪ್ರಿಂ ಕೋರ್ಟ್ ಆದೇಶದ ಮೇರೆಗೆ ನಡೆದಿದೆ. ಆದರೆ ಇದರಲ್ಲಿ ಶಾಸಕ ಅಶೋಕ ಮನಗೂಳಿ ಕೈವಾಡ ಇದೆ ಎಂದು ವಿರೋಧ ಪಕ್ಷ ಬಿಂಬಿಸುತ್ತಿರುವದನ್ನು ನಿಲ್ಲಿಸಬೇಕು. ವಿನಾಕಾರಣ ಶಾಸಕರ ಚಾರಿತ್ರ್ಯವಧೆ ಮಾಡಬಾರದು. ಮನಗೂಳಿ ಕುಟುಂಬದ ಕೈವಾಡ ಇದರಲ್ಲಿ ಎಳ್ಳಷ್ಟೂ ಇಲ್ಲ ಎಂದು ತಿಳಿಸಿದರು.

ಶರಣಪ್ಪ ಸುಣಗಾರ ಅವರು ಮತಕ್ಷೇತ್ರದ ಶಾಸಕರಿದ್ದ ಸಂದರ್ಭದಿಂದ ಸ.ನಂ 842ರ ಜಮೀನು ವ್ಯಾಜ್ಯ ಮುಂದುವರೆದುಕೊಂಡು ಬಂದಿದೆ. ಈಗ ಬಿಜೆಪಿ ಮುಖಂಡರು ಮತಕ್ಷೇತ್ರದಲ್ಲಿ ಶಾಸಕ ಮನಗೂಳಿಯವರು ಮಾಡುತ್ತಿರುವ ಅಭಿವೃದ್ಧಿ ಸಹಿಸದೇ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಂಸದ ರಮೇಶ ಜಿಗಜಿಣಗಿ ಧರಣಿನಿರತ ನಿರಾಶ್ರಿತರನ್ನು ಭೇಟಿಯಾಗಲು ಬಂದಿದ್ದರು. ಆದರೆ ಅವರು ಯಾವೊಂದೂ ಮಾತು ಹೇಳದೇ ಹೋಗಿರುವುದು ಗಮನಿಸಿದರೆ ಅವರಿಗೆ ಬಡವರ ಬಗ್ಗೆ ಇರಬಹುದಾದ ನಿಷ್ಕಾಳಜಿ ಗೊತ್ತಾಗುತ್ತದೆ ಎಂದು ಆರೋಪಿಸಿದರು.

ಸೂರು ಕಳೆದುಕೊಂಡವರ ಜೊತೆಗೆ ಆಟ ಆಡಬೇಡಿ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ನಿರಾಶ್ರಿತರು ಮೊದಲಿದ್ದ ಜಾಗೆಯೇ ಬೇಕು ಎಂಬ ಬೇಡಿಕೆ ಸಮಂಜಸವಲ್ಲ ಎಂದು ಚೌರ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.