ವಿಜಯಪುರ: ಸಿಂದಗಿಯ ನೆಲೆ ಪ್ರಕಾಶ ಸಂಸ್ಥೆ ಹಾಗೂ ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಜಾನಪದ ವಿದ್ವಾಂಸರಿಗೆ ನೀಡುವ ರಾಜ್ಯಮಟ್ಟದ ‘ದೇಸಿ ಸಮ್ಮಾನ’ಕ್ಕೆ ಗುಲಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಎಚ್.ಟಿ.ಪೋತೆ ಭಾಜನರಾಗಿದ್ದಾರೆ.

ಇಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ನ.26ರಂದು ನಡೆಯುವ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಈ ಪ್ರಶಸ್ತಿಯನ್ನು ಪೋತೆಗೆ ಪ್ರದಾನ ಮಾಡಲಿದ್ದಾರೆ.

ನಾಡಿನ ಸಂವೇದನಾಶೀಲ ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವಿಮರ್ಶಕ, ಸಂಶೋಧಕ, ಪ್ರವಾಸ ಕಥನಗಾರ, ಜೀವನ ಚರಿತ್ರೆಕಾರ, ಅನುವಾದಕರಾಗಿರುವ ಪ್ರೊತೆಯವರು ಮೂಲತಃ ಜಾನಪದ ವಿದ್ವಾಂಸರು.

ನೆಲಮೂಲ ಸಂಸ್ಕೃತಿಯ ಬೇರುಗಳ ಆಳಗಳನ್ನು ಬಲ್ಲ ಇವರು ತಮ್ಮ ವಿದ್ವತ್ಪೂರ್ಣ ಪ್ರತಿಭೆಯ ಮೂಲಕ ಜಾನಪದ ಕಥನ, ಜಾನಪದ ಸಿಂಗಾರ, ಜಾನಪದ ಆಯಾಮಗಳು, ಸಮಾಜೋ ಜಾನಪದ, ಜಾನಪದ ಜ್ಞಾನ-ವಿಜ್ಞಾನ ಜನಪದ ಕಲೆ ಸಂಸ್ಕೃತಿ, ಜನಪದ ಕಲೆ ಸಮಸ್ಯೆ ಸವಾಲುಗಳು, ಜನಪದ ಸಾಹಿತ್ಯದ ವೈವಿಧ್ಯ, ಜನಪದ ಗೀತೆಗಳು, ಜನಪದ ಹಾಡುಗಳ ಸಂಗ್ರಹ, ಹೈದರಾಬಾದ್ ಕರ್ನಾಟಕ ಜನಪದ ವಾದ್ಯಗಳು, ದಲಿತ ಜಾನಪದ, ಕರ್ನಾಟಕದ ದಲಿತ ಜಾನಪದ ವಿದ್ವಾಂಸರು, ಕಲ್ಯಾಣ ಕರ್ನಾಟಕದ ಜಾನಪದ ವಿದ್ವಾಂಸರು ಮುಂತಾದ ಕೃತಿಗಳನ್ನು ರಚಿಸಿ ಕನ್ನಡ ಜಾನಪದ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬಹಮಾನ ಪಡೆದ ಸಮಾಜೋ ಜಾನಪದ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದ ಜಾನಪದ ಜ್ಞಾನ-ವಿಜ್ಞಾನ ಎಂಬವು ಎಚ್.ಟಿ. ಪೋತೆ ಅವರ ಮಹತ್ವದ ಕೃತಿಗಳಾಗಿವೆ.

ಕನ್ನಡ ಸಾಹಿತ್ಯ ಪರಿಷತ್ತು ‘ದಲಿತ ಸಾಹಿತ್ಯ ಸಂಪುಟ’ ಯೋಜನೆಯಡಿಯಲ್ಲಿ ಪ್ರಕಟಿಸಿರುವ ‘ಜಾನಪದ’ ಪುಸ್ತಕವು ಇವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಜಾನಪದ ಆಯಾಮಗಳು ಎಂಬ ಪುಸ್ತಕ ಇವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿದೆ.

ಪ್ರಶಸ್ತಿ, ಪುರಸ್ಕಾರಗಳು:

ಕನ್ನಡ ಜಾನಪದ ಕ್ಷೇತ್ರಕ್ಕೆ ಪೋತೆಯವರ ಕೊಡುಗೆಯನ್ನು ಪರಿಗಣಿಸಿ 2007ರಲ್ಲಿ ಇವರ ‘ಸಮಾಜೋ ಜಾನಪದ’ ಕೃತಿಗೆ ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2019ರಲ್ಲಿ ಇವರ ಜಾನಪದ ಜ್ಞಾನ-ವಿಜ್ಞಾನ ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಅವರ ಒಟ್ಟು ಜಾನಪದ ಸಾಧನೆಯನ್ನು ಗಮನಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನವರು ಗೊರುಚ ಜಾನಪದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಳಗನಾಥ ಹಾಗೂ ಹಾವೇರಿಯ ನಾ.ಶ್ರೀ.ರಾಜಪುರೋಹಿತ ಪ್ರತಿಷ್ಠಾನವು ಪೋತೆಯವರು ದಲಿತ ಸಾಹಿತ್ಯ ಹಾಗೂ ಜಾನಪದ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆಯನ್ನು ಪರಿಗಣಿಸಿ ನಾ.ಶ್ರೀ.ರಾಜಪುರೋಹಿತ ಸಂಶೋಧನ ಪ್ರಶಸ್ತಿ (2021) ನೀಡಿ ಗೌರವಿಸಿದೆ. ಸಗರ ನಾಡಿನ ಜಾನಪದ ವಿದ್ವಾಂಸರಾಗಿದ್ದ ಸೂಗಯ್ಯ ಹಿರೇಮಠ ಸ್ಮರಣಾರ್ಥ ನೀಡುವ ಸಗರನಾಡ ಜಾನಪದ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.