ವಿಜಯಪುರ: ವಿಚ್ಛೇದನ ಪ್ರಕರಣವೊಂದನ್ನು ಗುಜರಾತ್ ಗಾಂಧಿನಗರದ ಕೋರ್ಟ್ನಿಂದ ವಿಜಯಪುರದ ಕೋರ್ಟ್ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಗಾಂಧಿನಗರದ ಕೌಟುಂಬಿಕ ಕೋರ್ಟ್ನಲ್ಲಿ ಪತಿ ಸಲ್ಲಿಸಿದ್ದ ವಿವಾಹ ವಿಚ್ಛೇದನ ಅರ್ಜಿಯನ್ನು ತಾನು ವಾಸವಾಗಿರುವ ವಿಜಯಪುರದ ಕೌಟುಂಬಿಕ ಕೋರ್ಟ್ಗೆ ವರ್ಗಾಯಿಸಬೇಕು ಎಂದು ಮಹಿಳೆ ಸಲ್ಲಿಸಿದ್ದ ವರ್ಗಾವಣೆ ಪ್ರಕರಣದ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿ ಆದೇಶ ಹೊರಡಿಸಿದೆ.

ವಿಜಯಪುರದ ತನ್ನ ತವರು ಮನೆಯಲ್ಲಿ ವಾಸವಾಗಿದ್ದ ಮಹಿಳೆ ಗಾಂಧಿನಗರ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆಯಲು ಸಾಧ್ಯವಾಗದೇ ಇದ್ದಾಗ ಪತಿ ಅದನ್ನು ಏಕತರ್ಫಿ ತೀರ್ಪು ಮಾಡಿಸಿಕೊಳ್ಳುವ ಹಂತಕ್ಕೆ ಬಂದಾಗ ವಿಜಯಪುರದ ಭೃಂಗಿಮಠ ಕ್ರಿಯಾತ್ಮಕ ವೇದಿಕೆಗೆ ಸಂಪರ್ಕಿಸಿ ತನ್ನ ಸಮಸ್ಯೆ ಹೇಳಿದಳು. ಭೃಂಗಿಮಠ ಹಾಗೂ ಸುಪ್ರಿತಾ ಶರಣಗೌಡ ಪಾಟೀಲ ಅವರ ಮೂಲಕ ಸುಪ್ರೀಂ ಕೋರ್ಟ್ಗೆ ವರ್ಗಾವಣೆ ಅರ್ಜಿ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ ಇಬ್ಬರ ಪರವಾಗಿ ವಾದ, ಪ್ರತಿವಾದ ಆಲಿಸಿ ಮಹಿಳೆ ಸಲ್ಲಿಸಿದ ವರ್ಗಾವಣೆ ಅರ್ಜಿಯನ್ನು ಪುರಸ್ಕರಿಸುವ ಮೂಲಕ ನೊಂದ ಮಹಿಳೆಗೆ ಕಾನೂನಿನ ಆಸರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.