ವಿಜಯಪುರ:ಯುಪಿಎಸ್ಸಿ ತರಬೇತಿಗೆ ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ.ಮೊದಲು ಅತ್ಯುತ್ತಮ ತರಬೇತಿ ಸಂಸ್ಥೆ ಆಯ್ಕೆ ಮಾಡಿಕೊಳ್ಳಬೇಕುಎಂದು ಬೆಂಗಳೂರಿನ ಇನ್ಸೈಟ್ಸ್ ಐಎಎಸ್ನ ಸಂಸ್ಥಾಪಕ ಮತ್ತು ನಿರ್ದೇಶಕವಿನಯಕುಮಾರ್ ಜಿ.ಬಿ. ಎಂದರು.

ಬೆಂಗಳೂರಲ್ಲೆ ನಮ್ಮ ಇನ್ ಸೈಟ್ಸ್ ಐಎಎಸ್ ಸಂಸ್ಥೆಯಿಂದ ಅತ್ಯುತ್ತಮ ತರಬೇತಿ ನೀಡುತ್ತಿದ್ದೇವೆ. ಇಲ್ಲಿ ತರಬೇತಿ ಪಡೆದವರು ಅನೇಕರು ಯುಪಿಎಸ್ ಸಿ ಪಾಸಾಗಿದ್ದಾರೆ ಎಂದು ತಿಳಿಸಿದರು.

ಐಎಎಸ್, ಐಪಿಎಸ್ ಮಾಡಲು ಮನೋಬಲ ಮುಖ್ಯ. ಯುಪಿಎಸ್ಸಿ ಪರೀಕ್ಷೆ ಬರೆಯುವವರು ಎಷ್ಟು ಜನರಿದ್ದರೂ ಅವರಿಗಿಂತ ಹೆಚ್ಚು ಅಂಕಗಳನ್ನು ಪಡೆದು ಐಎಎಸ್ ಅಧಿಕಾರಿಯಾಗುತ್ತೇನೆ ಎಂಬ ಮಹತ್ವಾಕಾಂಕ್ಷೆ ಇರಬೇಕು. ಎಲ್ಲರಲ್ಲೂ ಜ್ಞಾನ ಇರುತ್ತದೆ. ಯುಪಿಎಸ್ಸಿ ಗುರಿ ಇಡಿ, ಕೆಪಿಎಸ್ಸಿ ಆದರೂ ಆಗಬಹುದು. ತಪ್ಪುಗಳನ್ನು ತಿಳಿದುಕೊಂಡು, ಸರಿಪಡಿಸಿಕೊಳ್ಳುವ ಜೊತೆಗೆ ದುಪ್ಪಟ್ಟು ಪ್ರಯತ್ನ ಪಡಬೇಕು ಎಂದು ಹೇಳಿದರು.

ಕಾಲ ಕಾಲಕ್ಕೆ ಪರೀಕ್ಷಾ ಕ್ರಮ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ನಾವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪದವಿಯಲ್ಲಿ ಶೇ 35ರಷ್ಟು ಅಂಕ ಪಡೆದವರೂ ಯುಪಿಎಸ್ಸಿ ಪರೀಕ್ಷೆ ಬರೆಯಬಹುದು. ಇಷ್ಟೇ ಅಂಕಗಳನ್ನು ಪಡೆದವರೂ ಐಎಎಸ್ ಅಧಿಕಾರಿಗಳೂ ಆಗಿದ್ದಾರೆ. ಹೀಗಾಗಿ, ಜ್ಞಾನ ಯಾರೊಬ್ಬರ ಸ್ವತ್ತೂ ಅಲ್ಲ. ಆತ್ಮವಿಶ್ವಾಸವನ್ನು ರೂಢಿಸಿಕೊಂಡು ಮುನ್ನುಗ್ಗುವ ಛಾತಿ ನಮ್ಮಲ್ಲಿರಬೇಕು ಎಂದರು.

ವಿದ್ಯಾರ್ಥಿಗಳೊಂದಿ ಸಂವಾದ ನಡೆಸಿದ ಇನ್ ಸೈಟ್ಸ್ ಐಎಎಸ್ ಹಿರಿಯ ಬೋಧಕ ಶಮಂತಗೌಡ, ಸೀಮಿತ ಯೋಚನೆ ಮಾಡಬೇಡಿ. ಸುತ್ತಮುತ್ತಲಿನ ಅನುಭವ, ಬೇರೆ ಎಲ್ಲೂ ಕಲಿಸಲು ಸಾಧ್ಯವಿಲ್ಲ. ಅಂಕಗಳಿಗೆ ತಲೆಕೆಡಿಸಿಕೊಳ್ಳಬೇಡಿ, ಓದುವುದನ್ನು ಚನ್ನಾಗಿ ಓದಿ ಅರ್ಥೈಸಿಕೊಳ್ಳಿ ಅಂಕ ತಾನಾಗಿಯೇ ಬರುತ್ತದೆ ಎಂದು ಹೇಳಿದರು.

ಬಾವಿಯೊಳಗಿನ ಕಪ್ಪೆಗಳಾಗದೇ ಬಾವಿಯಿಂದ ಹೊರಗಡೆ ಬನ್ನಿ. ಪ್ರಶ್ನೆ ಮಾಡುವುದನ್ನು ಕಲಿಯಿರಿ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.