ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ | ಗ್ರಾಮ ಪಂಚಾಯಿತಿ ಎದುರು ಕುಡುಕನ ರಂಪಾಟ; ಪಿಡಿಒ ಕಪಾಳಮೋಕ್ಷ!

Published 2 ಡಿಸೆಂಬರ್ 2023, 15:41 IST
Last Updated 2 ಡಿಸೆಂಬರ್ 2023, 15:41 IST
ಅಕ್ಷರ ಗಾತ್ರ

ಇಂಡಿ(ವಿಜಯಪುರ): ತಾಲ್ಲೂಕಿನ ಹಿರೇಮಸಳಿ ಗ್ರಾಮ ಪಂಚಾಯ್ತಿಗೆ ಶನಿವಾರ ಮಧ್ಯಾಹ್ನ ಯುವಕನೊಬ್ಬ ಕುಡಿದು ಬಂದು ರಂಪಾಟ ನಡೆಸಿದ್ದಾನೆ.

ಗ್ರಾಮದ ಸಂತೋಷ ಬಿಜಾಪುರ ಎಂಬಾತ ಕಂಠಪೂರ್ತಿ ಕುಡಿದು, ಅರೆಬೆತ್ತಲೆಯಾಗಿ ಪಂಚಾಯ್ತಿಗೆ ಬಂದು ಕುಡಿಯಲು ನೀರು ಬಿಡುತ್ತಿಲ್ಲ ಎಂದು ಬೀದಿ ರಂಪ ಮಾಡಿದ್ದಾನೆ.

ಗ್ರಾಮದಲ್ಲಿ ಹಲವು ದಿನಗಳಿಂದ ಕುಡಿಯಲು ನೀರು ಬಿಟ್ಟಿಲ್ಲ, ಮನೆಯಲ್ಲಿ ಹನಿ ನೀರಿಲ್ಲ. ನೀರು ಕೇಳಿದರೆ ಬೇಕಾಬಿಟ್ಟಿ ಉತ್ತರ ಕೊಡುತ್ತಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಏನು ಕುಡಿಯುವುದು? ಯಾರಿಗೆ ಹೇಳುವುದು? ಎಂದು ಯುವಕ ಪಂಚಾಯ್ತಿ ಸಿಬ್ಬಂದಿ ಜೊತೆ ಜಗಳ ತೆಗೆದಿದ್ದಾನೆ.

ಕುಡುಕನ ರಂಪಾಟದಿಂದ ಬೇಸತ್ತ ಪಿಡಿಒ ಶೋಭಾ ಹೊರಪೇಟೆ ಕಪಾಳಮೋಕ್ಷ ಮಾಡಿದ್ದಾರೆ. ಕೊನೆಗೆ ಯುವಕನ ಮನೆಯವರು ಬಂದು ಕರೆದುಕೊಂಡು ಹೋಗಿದ್ದಾರೆ. ಬಳಿಕ ಮತ್ತೆ ಪಂಚಾಯಿತಿಗೆ ಬಂದು ನೀರು ಕೊಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಹಠ ಹಿಡಿದಿದ್ದಾನೆ. ಸಾರ್ವಜನಿಕರು ಎಷ್ಟೇ ತಿಳಿ ಹೇಳಿದರೂ ಹಠ ಬಿಡದ ಹಿನ್ನೆಲೆಯಲ್ಲಿ ಪೊಲೀಸರನ್ನು ಕರೆಯಿಸಿ ಪರಿಸ್ಥಿತಿ ತಿಳಿಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT