ವಿಜಯಪುರ: ‘ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ನುಸುಳಬಾರದು, ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರೆ ಉತ್ತಮ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಯಾರದೋ ಶಿಫಾರಸ್ಸಿನ ಮೇರೆಗೆ ಅನರ್ಹ ಶಿಕ್ಷಕರನ್ನು ನೇಮಕ ಮಾಡಿಕೊಂಡರೆ ನಮ್ಮ ಮಕ್ಕಳೇ ದಡ್ಡರಾಗುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಎಂದಿಗೂ ರಾಜಿ ಬೇಡ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದ ಬಿಎಲ್ಡಿಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ.ಪಾಟೀಲ ಮತ್ತು ಬಂಗಾರಮ್ಮ ಸಜ್ಜನ ಸ್ಮರಣೆ ಕಾರ್ಯಕ್ರಮದಲ್ಲಿ ಭಾನುವಾರ ಅವರು ಮಾತನಾಡಿದರು.

‘ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ ಜಿಲ್ಲೆಗಳು ಪ್ರತಿ ವರ್ಷ ಎಸ್ಎಸ್ಎಲ್ಸಿ, ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನಗಳಲ್ಲಿ ಇವೆ. ಶೈಕ್ಷಣಿಕವಾಗಿ ಗುಣಮಟ್ಟದ ಶಿಕ್ಷಣದ ಕೊರತೆ ಎದುರಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಿಎಲ್ಡಿಇ ಸಂಸ್ಥೆ ಅಧ್ಯಕ್ಷ, ಸಚಿವ ಎಂ.ಬಿ.ಪಾಟೀಲ ಮಾತನಾಡಿ, ‘ಬಿಎಲ್ಡಿಇ ಸಂಸ್ಥೆಯನ್ನು ಎಂದಿಗೂ ವ್ಯಾಪಾರ ಕೇಂದ್ರ ಮಾಡಿಲ್ಲ. ‘ನೀಟ್ ಬರುವುದಕ್ಕಿಂತ ಮೊದಲು ಪ್ರತಿವರ್ಷ 20 ವೈದ್ಯಕೀಯ ಸೀಟುಗಳನ್ನು ಬಡವರಿಗೆ ಕೊಡಲಾಗುತ್ತಿತ್ತು. ಆದರೆ, ನೀಟ್ ಬಂದ ಬಳಿಕ ಅದು ನಿಂತುಹೋಯಿತು. ಪ್ರಸ್ತುತ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು ಪಡೆದುಕೊಳ್ಳುವ ಬಡವರ ಮಕ್ಕಳ ಸಂಪೂರ್ಣ ಓದಿನ ವೆಚ್ಚವನ್ನು ಸಂಸ್ಥೆಯಿಂದ ಭರಿಸುತ್ತಿದ್ದೇವೆ’ ಎಂದರು.

‘ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ಔಷಧೋಪಚಾರ ಮಾಡಿದ್ದೇವೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬೇಲಿಕೇರಿ ಶಿವರುದ್ರ ಸ್ವಾಮೀಜಿ ಮಾತನಾಡಿ, ‘ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ.ಪಾಟೀಲ ಮತ್ತು ಬಂಗಾರಮ್ಮ ಸಜ್ಜನ ಅವರು ಬಿಎಲ್ಡಿಇ ನಾಲ್ಕು ಮುಖಗಳು. ಅವರ ಸಂಕಲ್ಪವನ್ನು ಸಾಕಾರ ಮಾಡುವ ಕೆಲಸ ಆಗಲಿ, ಅನಂತ ಕಾಲ ಜನರನ್ನು ಬೆಳಕಿನೆಡೆಗೆ ನಡೆಸುವ ಸಂಸ್ಥೆ ಆಗಲಿ, ಯಾವುದೇ ಸಂಘ, ಸಂಸ್ಥೆ ಲೋಕಹಿತಕ್ಕಾಗಿ ಶ್ರಮಿಸಿದರೆ ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಯವಿಲ್ಲ’ ಎಂದರು.

‘ಆಯುರ್ವೇದದ ಬಗ್ಗೆ ಜನರಿಗೆ ತಿಳಿವಳಿಕೆ ಅಗತ್ಯ, ಪ್ರಪಂಚದ ಎಲ್ಲ ಕಾಯಿಲೆಗಳಿಗೆ ಆಯುರ್ವೇದದಲ್ಲಿ ಪರಿಹಾರ ಇದೆ’ ಎಂದರು.

ಬಿಎಲ್ಡಿಇ ಡೀಮ್ಡ್ ವಿವಿ ಕುಲಾಧಿಪತಿ ಬಸನಗೌಡ ಎಂ.ಪಾಟೀಲ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ, ಚಿಂತನಾ ಸಾಂಸ್ಕೃತಿಕ ಬಳಗದ ಕಾರ್ಯದರ್ಶಿ ಮಹಾಂತೇಶ ಬಿರಾದಾರ, ಶಾಸಕ ಅಶೋಕ ಮನಗೂಳಿ, ಸಿ.ಎಸ್.ನಾಡಗೌಡ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಮಲ್ಲಿಕಾರ್ಜುನ ಲೋಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಇದ್ದರು.

Quote - ಬಿಎಲ್ಡಿಇ ಸಂಸ್ಥೆಯಲ್ಲಿ ಬಡವರಿಗೆ ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ಅವಕಾಶ ಕೊಡಬೇಕು ಹಿಂದುಳಿದ ಜಾತಿ ಜನರಿಗೆ ಅವಕಾಶ ಕೊಟ್ಟರೆ ಆ ಸಮಾಜ ಬೆಳಕಿಗೆ ಬರುತ್ತದೆ ಮಲ್ಲಿಕಾರ್ಜುನ ಖರ್ಗೆಅಧ್ಯಕ್ಷ ಎಐಸಿಸಿ

ಸಂವಿಧಾನ ಗೊತ್ತಿಲ್ಲದವರಿಂದ ಟೀಕೆ: ಖರ್ಗೆ

ವಿಜಯಪುರ: ‘ಸಂವಿಧಾನ ಗೊತ್ತೊಲ್ಲದ ಕೆಲವರು ಸಂವಿಧಾನ ಸರಿಯಿಲ್ಲ ಎಂದು ಟೀಕಿಸುತ್ತಾರೆ. ಸಂವಿಧಾನ ಇರದಿದ್ದರೇ ನಮಗೆ ಸ್ವಾತಂತ್ರ್ಯ ಸಮಾನತೆ ಶಿಕ್ಷಣ ಮಹಿಳೆಯರಿಗೆ ಮತದಾನದ ಹಕ್ಕು ಲಭಿಸುತ್ತಿರಲಿಲ್ಲ ದೇಶದ ಜನರಿಗೆ ಶಕ್ತಿ ಬರಲು ಸಂವಿಧಾನ ಕಾರಣ. ಜನ ಸುಖಃ ಶಾಂತಿ ನೆಮ್ಮದಿಯಿಂದ ಇರಲು ಸಂವಿಧಾನ ಬೇಕು’ ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಕೆಲವರು ವ್ಯಕ್ತಿ ಮೊದಲು ಆ ಮೇಲೆ ದೇಶ ಎನ್ನುತ್ತಾರೆ. ಅವರ ತಲೆಗೆ ಏಕೆ ಈ ವಿಚಾರಗಳು ಬಂದಿದೆ ಎಂಬುದು ಗೊತ್ತಿಲ್ಲ. ದೇಶ ಉಳಿದರೆ ಎಲ್ಲರೂ ಉಳಿಯುತ್ತಾರೆ. ಹೀಗಾಗಿ ದೇಶ ಮೊದಲು ಎಂಬುದನ್ನು ಅರಿಯಬೇಕು’ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಕಿದರು.

‘ದೇಶದಲ್ಲಿ ಜಾತಿ ಜನ ಗಣತಿ ವಿಷಯವಾಗಿ ಎಲ್ಲ ಸೌಲಭ್ಯ ಸಿಕ್ಕವರು ಜಾತಿ ಜನ ಗಣತಿ ಮಾಡುವುದು ಬೇಡ ಎನ್ನುತ್ತಾರೆ. ಸೌಲಭ್ಯಗಳಿಂದ ವಂಚಿತರಾದವರು ಜಾತಿ ಜನ ಗಣತಿ ಮಾಡಬೇಕು ಎನ್ನುತ್ತಾರೆ. ಸಮಾಜದಲ್ಲಿ ಸಮಾನತೆ ತರಬೇಕು ಅವಕಾಶ ವಂಚಿತರಿಗೆ ಅನುಕೂಲ ಕಲ್ಪಿಸಲು ಜಾತಿ ಜನ ಗಣತಿ ಅಗತ್ಯ’ ಎಂದು ಅವರು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.