ವಿಜಯಪುರ: ಅಂಜುಮನ್ ಇಸ್ಲಾಂ ಬಿಜಾಪುರ ಮತ್ತು ಮೈನಾರಿಟಿ ಮುಸ್ಲಿಂ ಡೆವಲಪ್ಮೆಂಟ್ ಕಮಿಟಿ ಸಹಯೋಗದಲ್ಲಿ ಈದ್ ಮಿಲಾದ್ ಅಂಗವಾಗಿ ಸೆ.4ರಂದು ಸಂಜೆ 4ಕ್ಕೆ ನಗರದಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗಿದೆ ಎಂದು ಎಂಎಂಡಿಸಿ ಪ್ರಮುಖರಾದ ಎಲ್.ಎಲ್. ಉಸ್ತಾದ್ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಮ್ಮದ್ ಪೈಗಂಬರ್ ಜನ್ಮ ದಿನ ಪ್ರಯುಕ್ತ ಆಯೋಜಿಸಲಾಗಿರುವ ಮೆರವಣಿಗೆಯು ನಗರದ ಹಕೀಂ ಚೌಕದಿಂದ ಆರಂಭಗೊಂಡು ಜುಮ್ಮಾ ಮಸೀದಿ, ಬಡಿಕಮಾನ್, ಅತಾವುಲ್ಲಾ ಸರ್ಕಲ್, ಬಾಗಲಕೋಟೆ ಸರ್ಕಲ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಕನಕದಾಸ ಸರ್ಕಲ್ ಮೂಲಕ ಸಾಗಿ ಆಸರ್ ಮಹಲ್ಗೆ ತೆರಳಲಿದೆ ಎಂದರು.

ಮೆರವಣಿಗೆಯಲ್ಲಿ ಭಾಗವಹಿಸುವವರು ಶುಭ್ರ ಬಿಳಿ ವಸ್ತ್ರ ಉಟ್ಟು ಬರಬೇಕು, ಕುಡಿದು ಬರುವಂತಿಲ್ಲ, ಸ್ವಚ್ಛ ಮನಸ್ಸಿನಿಂದ ಬರಬೇಕು, ಶಾಂತಿಯುತವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ನಾಥ್ ಹಾಗೂ ದರೂದ್ ಪಠಣದೊಂದಿಗೆ ಮೆರವಣಿಗೆ ನಡೆಯಲಿದೆ. ಯಾವುದೇ ಡಿಜೆ,ವಾದ್ಯ ಮೇಳಗಳಿಗೆ ಮೆರವಣಿಗೆಯಲ್ಲಿ ಅವಕಾಶವಿಲ್ಲ. ಮೆರವಣಿಗೆ ಬಳಿಕ ಆಸರ್ ಮಹಲ್ನಲ್ಲಿ ಇರುವ ಪೈಗಂಬರ್ ಅವರ ಕೇಶ ದರ್ಶನ ಕಾರ್ಯಕ್ರಮ ಇರಲಿದೆ ಎಂದರು.

ಈ ಮೆರವಣಿಗೆಯು ಯಾವುದೇ ರಾಜಕೀಯ ಪಕ್ಷದ ಅಥವಾ ವ್ಯಕ್ತಿಯ ಪರವೂ ಅಲ್ಲ, ವಿರೋಧವೂ ಅಲ್ಲ. ಇದು ಕೇವಲ ಪ್ರವಾದಿ ಮಹಮ್ಮದ್ ಅವರ ಮೇಲಿನ ಪ್ರೀತಿ ಮತ್ತು ಗೌರವದಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ಬಿ.ಎಚ್. ಮಹಾಬರಿ, ಜಮೀರ್ ಅಹಮ್ಮದ್ ಬಾಂಗಿ, ಜಮೀರ್ ಅಹಮ್ಮದ್ ಭಕ್ಷಿ, ರಫೀಕ್ ಅಹಮ್ಮದ್ ಸೌದಾಗರ, ಅಲ್ತಾಪ್ ಖಾದ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.