ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ತ್ರಿಭುಜ ದೋಣಿಗೆ ಡಿಕ್ಕಿ: ತನಿಖೆಗಾಗಿ ನೌಕಾಪಡೆಗೆ ಪತ್ರ- ಎಂ.ಬಿ.ಪಾಟೀಲ

Last Updated 8 ಮೇ 2019, 12:14 IST
ಅಕ್ಷರ ಗಾತ್ರ

ವಿಜಯಪುರ:‘ಸೇನಾ ನೌಕೆಯೊಂದು ಸುವರ್ಣ ತ್ರಿಭುಜ ದೋಣಿಗೆ ಡಿಕ್ಕಿ ಹೊಡೆದು ನಾಶವಾಗಿದೆ ಎಂಬ ಶಂಕೆಯಿದೆ. ಈ ಕುರಿತಂತೆ ತನಿಖೆ ನಡೆಸುವಂತೆ ನೌಕಾಪಡೆಗೆ ಪತ್ರ ಬರೆಯಲಾಗುವುದು’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

‘ಸಚಿವ ಸಂಪುಟದ ಸಭೆ ಗುರುವಾರ ನಡೆಯಲಿದ್ದು, ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಆಂತರಿಕ ಭದ್ರತೆ ಡಿಜಿ ಮೂಲಕ ಪತ್ರ ಕಳುಹಿಸಲಾಗುವುದು’ ಎಂದು ಬುಧವಾರ ವಿಜಯಪುರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ಸುವರ್ಣ ತ್ರಿಭುಜ ದೋಣಿಯ ಅವಶೇಷ ಪತ್ತೆಯಾಗಿದೆ. ಮೀನುಗಾರರಿಗೆ ಸಂಬಂಧಿಸಿದಂತೆ ಯಾವುದೇ ಸುಳಿವು ಇದೂವರೆಗೂ ಸಿಗದಾಗಿದೆ’ ಎಂದು ಹೇಳಿದರು.

ಬಾಗಿಲು ತಟ್ಟಿಲ್ಲ

‘ಮನಸ್ಸಿಗೆ ನೋವಾಗಿದ್ದಾಗಲೂ ಸಹ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಬಿಜೆಪಿಯ ಯಾವೊಬ್ಬ ಮುಖಂಡರ ಜತೆ ಮಾತನಾಡಿಲ್ಲ. ಯಾರ ಮನೆಯ ಬಾಗಿಲು ತಟ್ಟಿಲ್ಲ’ ಎಂದು ಎಂ.ಬಿ.ಪಾಟೀಲ ತಿರುಗೇಟು ನೀಡಿದರು.

‘ಯತ್ನಾಳ ಆಹ್ವಾನಕ್ಕೆ ನೋ ಥ್ಯಾಂಕ್ಸ್‌. ಅವರ ಹೇಳಿಕೆಗಳಿಗೆ ನೋ ಕಾಮೆಂಟ್ಸ್‌’ ಎಂದ ಪಾಟೀಲ, ‘ಸ್ನೇಹ ಬೇರೆ, ರಾಜಕಾರಣವೇ ಬೇರೆ. ನಾ ಎಂದಾದರೂ ಬಿಜೆಪಿಗೆ ಸೇರುತ್ತೇನೆ ಎಂದು ಹೇಳಿದ್ದೇನಾ ? ಇಲ್ಲ ಅರ್ಜಿ ಹಾಕಿನಾ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT