ದೇವರಹಿಪ್ಪರಗಿ: ಪಟ್ಟಣದಲ್ಲಿ ಮೇನಲ್ಲಿ ಉದ್ಘಾಟನೆಗೊಂಡ ಇಂದಿರಾ ಕ್ಯಾಂಟಿನ್ನಲ್ಲಿ ಈವರೆಗೂ ಉಪಹಾರ, ಊಟದ ಭಾಗ್ಯ ಜನರಿಗೆ ಲಭಿಸಿಲ್ಲ.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮೇ 28 ರಂದು ಶಾಸಕ ರಾಜುಗೌಡ ಪಾಟೀಲ ಅವರಿಂದ ಅಧಿಕೃತವಾಗಿ ಉದ್ಘಾಟನೆಗೊಂಡ ಇಂದಿರಾ ಕ್ಯಾಂಟಿನ್ ಈವರೆಗೆ ಆರಂಭಗೊಂಡಿಲ್ಲ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಇಂಗಳಗಿ ಗ್ರಾಮದ ಶ್ರೀಶೈಲ ಇಂಡಿ, ರಾಮನಗೌಡ ಹಂಚಲಿ, ‘ಇಂದಿರಾ ಕ್ಯಾಂಟಿನ್ನಲ್ಲಿ ಉದ್ಘಾಟನೆ ದಿನ ಮಾತ್ರ ಬೆಳಿಗ್ಗೆ ಉಪಹಾರ ವ್ಯವಸ್ಥೆ ಮಾಡಿ ಬಂದಂತ ಸಾರ್ವಜನಿಕರಿಗೆ ಶಾಸಕರಿಂದ ಬಡಿಸುವುದರ ಮೂಲಕ ಚಾಲನೆ ನೀಡಿದರೇ ವಿನ: ನಂತರ ಯಾವುದೇ ದಿನ ಗೇಟ್ ಆಗಲಿ, ಬಾಗಿಲು ಆಗಲಿ ತೆಗೆಯಲೇ ಇಲ್ಲ. ಪ್ರತಿ ದಿನ ಸಾಕಷ್ಟು ಜನ ಬರುವುದು, ನೋಡುವುದು ಇದ್ದೇ ಇದೆ. ಆದರೆ, ವಾರ ಕಳೆದರೂ ಯಾವುದೇ ಪ್ರಕ್ರಿಯೆ ಇಲ್ಲ. ಇದೇ ರಸ್ತೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾದು ಹೋಗುತ್ತಾರೆ. ಆದರೆ, ಅವರಾರು ಈ ಕುರಿತು ಗಮನ ಹರಿಸಿಲ್ಲ’ ಎಂದು ಆರೋಪಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಕ್ಯಾಂಟಿನ್ ಆರಂಭಕ್ಕೆ ಸ್ಥಳೀಯ ಆಡಳಿತದಿಂದ ₹ 8 ಲಕ್ಷ ಅನುದಾನ ಒದಗಿಸಿ ಸಹಕಾರ ನೀಡಲಾಗಿದೆ. ಇದು ಉದ್ಘಾಟನಾ ಮರು ದಿನದಿಂದಲೇ ಆರಂಭಗೊಳ್ಳಬೇಕಿತ್ತು. ಆದರೆ, ಗುತ್ತಿಗೆದಾರರು ಅಡುಗೆ ಮಾಡುವವರ ಕೊರತೆ ಸೇರಿದಂತೆ ಕೆಲವು ಕಾರಣಗಳನ್ನು ನೀಡಿ ವಿಳಂಬ ಮಾಡಿದ್ದಾರೆ. ಅದಾಗ್ಯೂ ಮುಂದಿನ ಎರಡು ದಿನಗಳಲ್ಲಿ ಆರಂಭಿಸದಿದ್ದರೇ ಇವರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು’ ಎಂದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕ್ಯಾಂಟಿನ್ ಗುತ್ತಿಗೆದಾರ ಸಿಂಧನೂರಿನ ವಿಜ್ಞಾನಕುಮಾರ, ‘ಅಡುಗೆ ಮಾಡುವವರು, ವಿತರಿಸುವ ಸಿಬ್ಬಂದಿ ಕೊರತೆ ಕಾರಣದಿಂದಾಗಿ ಈವರೆಗೆ ಕ್ಯಾಂಟಿನ್ ಆರಂಭಿಸಿಲ್ಲ. ಸೋಮವಾರದಿಂದಲೇ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆ ಆರಂಭಿಸಲಾಗುವುದು. ಬೆಳಿಗ್ಗೆ ಉಪಹಾರಕ್ಕೆ ₹5 ಊಟಕ್ಕೆ ₹ 10 ನಿಗದಿ ಪಡಿಸಲಾಗಿದೆ. 200 ಜನರಿಗೆ ಉಪಹಾರ, 200 ಜನರಿಗೆ ಮಧ್ಯಾಹ್ನದ ಊಟ, 200 ಜನರಿಗೆ ರಾತ್ರಿ ಊಟ ಸೇರಿದಂತೆ ಒಟ್ಟು 600 ಜನರಿಗೆ ನಿತ್ಯ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

‘ಇಂದಿರಾ ಕ್ಯಾಂಟಿನ್ ಆರಂಭದಿಂದ ಬಡಜನರು ಸೇರಿದಂತೆ ಪಟ್ಟಣಕ್ಕೆ ಆಗಮಿಸುವ ಗ್ರಾಮೀಣ ಜನತೆಗೆ ಅನುಕೂಲವಾಗಲಿದೆ. ಆದ್ದರಿಂದ ಕೂಡಲೇ ಆರಂಭಿಸಬೇಕು’ ಎಂದು ಸಿದ್ದು ಮಲ್ಲಿಕಾರ್ಜುನಮಠ, ಪರಶುರಾಮ ಸನಾದಿ, ಮರನಿಂಗಪ್ಪ ಕೊಡಗಾನೂರ, ಸಿದ್ದಪ್ಪ ಗುಡಿಮನಿ, ರುದ್ರಯ್ಯ ಸದಯ್ಯನಮಠ, ಹಮೀದ್ ರೂಗಿ ಮಹಾಂತೇಶ ಹಡಪದ ಆಗ್ರಹಿಸಿದರು.

ಗುತ್ತಿಗೆದಾರರು ಅಡುಗೆ ಮಾಡುವವರು ಸಿಗುತ್ತಿಲ್ಲ ಎಂದು ವಿಳಂಬ ಮಾಡಿದ್ದಾರೆ. ಅದಾಗ್ಯೂ ಎರಡು ದಿನಗಳಲ್ಲಿ ಆರಂಭ ಮಾಡಿ ಉಪಹಾರ ಊಟದ ವ್ಯವಸ್ಥೆ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು
-ಎಸ್.ಎಸ್.ಬಾಗಲಕೋಟ. ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.