ವಿಜಯಪುರ: ಶಿಕ್ಷಣ ಸಂಸ್ಥೆಗಳಲ್ಲಿಯೂ ಗಣೇಶನನ್ನು ಪ್ರತಿಷ್ಠಾಪಿಸಿ ಮಕ್ಕಳ ಮನಸ್ಸನ್ನು ಮುದಗೊಳಿಸಿ ಅವರನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಸಂತಸ ತಂದಿದೆ ಎಂದು ಮಹಾನಗರ ಪಾಲಿಕೆಯ ಸದಸ್ಯ ಪ್ರೇಮಾನಂದ ಬಿರಾದಾರ ಹೇಳಿದರು.

ನಗರದ ಕನಕದಾಸ ಬಡಾವಣೆಯ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಸ್ ಮತ್ತು ನೀಲಾಂಬಿಕಾ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಗಣೇಶ ವಿಸರ್ಜನೆ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾಲಕರು ಹಾಗೂ ಶಿಕ್ಷಕರು ಕೇವಲ ಮಗುವಿನ ಅಂಕಗಳನ್ನು ನೋಡದೆ ಆತನ ಸಾಮರ್ಥ್ಯವನ್ನು ಗುರುತಿಸಬೇಕಾಗಿದೆ ಎಂದರು.

ಯುವ ವಕೀಲ ಮಹಮ್ಮದ್ ಗೌಸ್ ಹವಾಲ್ದಾರ್ ಮಾತನಾಡಿ, ಈ ನಾಡಿನಲ್ಲಿ ಯಾರೂ ಕೇವಲ ಹಿಂದುಗಳಾಗಿ ಬದುಕಬೇಡಿ, ಮುಸ್ಲಿಮರಾಗಿ ಬದುಕಬೇಡಿ, ಜೈನರಾಗಿ ಬದುಕಬೇಡಿ, ಸಿಖ್ ರಾಗಿ ಬದುಕಬೇಡಿ, ಇಂದಿನ ಮಕ್ಕಳೇ ನಾಳಿನ ನಾಗರಿಕರಾದ ನೀವುಗಳು ಭಾರತದ ಪ್ರಬುದ್ಧ ಪ್ರಜೆಗಳಾಗಿ ಜೀವಿಸಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಶಾಲೆಯು ಪ್ರಾರಂಭವಾದ ದಿನದಿಂದಲೂ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದು, ಮಕ್ಕಳು ಸಂತಸದಿಂದ ತಮ್ಮನ್ನು ತಾವು ಕಲಿಕೆಯಲ್ಲಿ ತೊಡಗಿಸಿಕೊಂಡು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಹೊರಹೊಮ್ಮಲಿ ಎನ್ನುವುದು ನಮ್ಮ ಆಶಯವಾಗಿದೆ ಎಂದರು.

ಅರಿಕೇರಿ ಅಮೋಘಸಿದ್ದೇಶ್ವರ ದೇವಸ್ಥಾನದ ಧರ್ಮದರ್ಶಿ ಅಪ್ಪು ಒಡೆಯರ, ಬಿಜೆಪಿ ಜತ್ತ ತಾಲ್ಲೂಕಿನ ಅಧ್ಯಕ್ಷ ರಮೇಶ ದೇವರ್ಷಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಪಾಟೀಲ, ಮಣಪ್ಪುರಂ ಗೋಲ್ಡ್ ಫೈನಾನ್ಸ್ ಶಾಖಾ ವ್ಯವಸ್ಥಾಪಕ ಭರತ ದಾಶಾಳ ಮಾತನಾಡಿದರು.

ಲಕ್ಷ್ಮಣ ಬಿರಾದಾರ, ಮಹೇಶ ಕೋಳಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನೀಲಾ ಜತ್ತಿ, ಆಡಳಿತಾಧಿಕಾರಿ ಮಧು ಬಿರಾದಾರ, ಮುಖ್ಯ ಶಿಕ್ಷಕಿ ರಾಜಶ್ರೀ ಮುಳಜಿ, ಸೌಮ್ಯ ಗಲಗಲಿ, ಪೃಥ್ವಿ, ರಾಘವೇಂದ್ರ ರಾಥೋಡ, ಮಂಜುನಾಥ ಕುಡಚಿ, ಬಸವರಾಜ ಬರಗಿ, ಶಿಕ್ಷಕ ಆನಂದ, ಪರಶುರಾಮ ಬಗಲಿ ಭಾಗವಹಿಸಿದ್ದರು.

ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರದ ಮಕ್ಕಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು. ಸಾರವಾಡದ ಗೊಂಬೆ ಕುಣಿತದೊಂದಿಗೆ ಬಡಾವಣೆಯಲ್ಲಿ ಗಣೇಶನ ಮೂರ್ತಿಯ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.