ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ಯಾಸಿನಿಯಾಗಲು ಜೈನ ಯುವತಿ ನಿರ್ಧಾರ

Last Updated 18 ಜನವರಿ 2021, 11:27 IST
ಅಕ್ಷರ ಗಾತ್ರ

ಹರಪನಹಳ್ಳಿ: ವಿಜಯಪುರದ ಯುವತಿ ಪಾಯಲ್ ಕುಮಾರಿ ಪಾರಿಕ್ ಅವರು ಜೈನ ಸನ್ಯಾಸಿನಿ ಆಗಲು ನಿರ್ಧರಿಸಿದ್ದು, ಹರಪನಹಳ್ಳಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸನ್ಯಾಸತ್ವ ದೀಕ್ಷೆ ಪಡೆಯಲು ಅವರ ಜೈನ ಗುರುಗಳಿಂದ ಆದೇಶ ಪಡೆದರು.

ನರೇಂದ್ರಕುಮಾರ್‌ ಹಾಗೂ ವೈಜಯಂತಿ ಪಾರಿಕ್ ದಂಪತಿಯ 19 ವರ್ಷದ ಪುತ್ರಿ ಪಾಯಲ್ ಕುಮಾರಿ ಪಾರಿಕ್ ಅವರು ಭವ್ಯ ಮೆರವಣಿಗೆಯ ಮೂಲಕ ಬಂದರು. ದಾರಿಯುದ್ದಕ್ಕೂ ವಿವಿಧ ವಸ್ತುಗಳನ್ನು ಸಾರ್ವಜನಿಕರಿಗೆ ದಾನ ಮಾಡಿದರು.

ರಾಷ್ಟ್ರ ಸಂತ ಗುರುಗಳಾದ ನರೇಶ ಮುನೀಜಿ, ಸೌಲಿಭದ್ರಜೀ, ಚಂದನ್ ಬಾಲಾಜಿ, ದೇವೇಂದ್ರ ಪ್ರಭಾಜಿ, ಧರ್ಮ ಜ್ಯೋತಿ ಅವರು ಯುವತಿಗೆ ಸನ್ಯಾಸ ದೀಕ್ಷೆ ಸ್ವೀಕರಿಸಲು ಸಮ್ಮತಿಸಿದರು.

ಜೈನ ಸಮಾಜದ ಅಧ್ಯಕ್ಷ ಧನರಾಜ್ ಜೈನ, ಉಪಾದ್ಯಕ್ಷ ಸುಮೇರಿಮಲ್ ಜೈನ್, ಮಹಾವೀರ ಕುಮಾರ, ಅಶೋಕ ಕುಮಾರ, ಕಾಂತಿಲಾಲ್ ಜೈನ, ಉತ್ತಮ ಚಂದ್ ಜೈನ್ , ಗೌತಮ್ ಚಂದ್, ಮಹಾವೀರ ಭಂಡಾರಿ, ಮಹಾವೀರ ಬನ್ಸಿಲಾಲ್, ಹನುಮಾನ ಚಂದ್, ಗಣಪತಿ ರಾಜ್ ಜೈನ, ಸಂದೀಪ, ವಿಜಯರಾಜ್ ಸೇರಿದಂತೆ ಜೈನ ಸಮುದಾಯದ ಮುಖಂಡರು, ಮಹಿಳೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT