ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ಡಿಕ್ಕಿ: ಕುರಿಗಾಹಿ, 18 ಕುರಿಗಳು ಸಾವು

Last Updated 1 ಸೆಪ್ಟೆಂಬರ್ 2022, 15:44 IST
ಅಕ್ಷರ ಗಾತ್ರ

ಕೊಲ್ಹಾರ(ವಿಜಯಪುರ ಜಿಲ್ಲೆ): ಲಾರಿ ಡಿಕ್ಕಿ ಹೊಡೆದು ಒಬ್ಬ ಕುರಿಗಾಹಿ ಹಾಗೂ 18 ಕುರಿಗಳು ಸಾವಿಗೀಡಾದ ಘಟನೆ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 218 ರ ಯುಕೆಪಿ ವೃತ್ತದ ಬಳಿ ಗುರುವಾರ ಸಂಜೆ ಸಂಭವಿಸಿದೆ.

ಲಾರಿಯು ಕುರಿ ಹಿಂಡಿನ ಮೇಲೆ ಹರಿದು ಹೋದ ರಭಸಕ್ಕೆ ಕೊಲ್ಹಾರದ ಕುರಿಗಾಹಿ ರಾಮು ಯಲ್ಲವ್ವ ಗೊಲ್ಲರ (19) ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟು, ಆತ ಮೇಯಿಸಿಕೊಂಡು ಹೋಗುತ್ತಿದ್ದ 20ಕ್ಕೂ ಹೆಚ್ಚು ಕುರಿಗಳ ಪೈಕಿ 18 ಕುರಿಗಳು ಸ್ಥಳದಲ್ಲೇ ಸಾವಿಗೀಡಾಗಿವೆ. ಅಲ್ಲದೇ, ಎರಡು ಕುರಿಗಳು ತೀವ್ರ ಗಾಯಗೊಂಡಿವೆ.

ಲಾರಿ ಚಾಲಕ ವಾಹನವನ್ನು ಕೃಷ್ಣಾ ನದಿ ಸೇತುವೆ ಬಳಿಯ ಕೊರೆಮ್ಮ ದೇವಸ್ಥಾನದ ಬಳಿ ಬಿಟ್ಟು ಪರಾರಿಯಾಗಿದ್ದಾನೆ.

ಪಿಎಸ್ಐ ಪ್ರೀತಮ್ ನಾಯಕ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಗಾಯಗೊಂಡ ಕುರಿಗಳನ್ನು ಪಶು ಆಸ್ಪತ್ರೆಗೆ ರವಾನಿಸಿದ್ದಾರೆ. ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT