ವಿಜಯಪುರ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟದ ವೇದಿಕೆಗೆ ಬಂದು ಯಾರೂ ರಾಜಕಾರಣ ಮಾಡಬಾರದು, ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಬಾರದು ಇಂಡಿ ಶಾಸಕ ಯಶವಂತರಾಗೌಡ ಪಾಟೀಲ ಹೇಳಿದರು.

ಸರ್ಕಾರಿ ವೈದ್ಯಕೀಯ ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.

ಯಾವುದೇ ಪಕ್ಷ, ವ್ಯಕ್ತಿ ಇರಲಿ, ಅಧಿಕಾರ ಶಾಶ್ವತ ಅಲ್ಲ, ಉತ್ತಮ ಕೆಲಸಕ್ಕಾಗಿ ಹೋರಾಟ ನಡೆಯುತ್ತಿದೆ. ಜನಪರವಾದ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ, ನಿಮ್ಮ ಹೋರಾಟಕ್ಕೆ ಮುಖ್ಯಮಂತ್ರಿ ಸ್ಪಂದಿಸಲಿದ್ದಾರೆ ಎಂದು ಹೇಳಿದರು.

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ನಾನೊಬ್ಬ ಶಾಸಕರಾಗಿ ಬಂದಿಲ್ಲ, ಜಿಲ್ಲೆಯ ಒಬ್ಬ ಜನ ಸಾಮಾನ್ಯನಾಗಿ ಬಂದಿದ್ದೇನೆ, ಸರ್ಕಾರಿ ವೈದ್ಯಕಿಯ ಕಾಲೇಜು ಜಿಲ್ಲೆಯಲ್ಲಿ ಆಗಲೇಬೇಕು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಇದು ಸಹಾಯವಾಗುತ್ತದೆ ಎಂದರು.

ಹೋರಾಟಕ್ಕೆ ಸ್ಪಂದಿಸುವುದು ಜಿಲ್ಲೆಯ ಎಲ್ಲಾ ನಾಗರಿಕರ ಆದ್ಯ ಕರ್ತವ್ಯ. ಅತ್ಯಂತ ಹಿಂದುಳಿದ ಜಿಲ್ಲೆಗೆ ಅವಕಾಶ ಕೊಡಬೇಕು. ನಮ್ಮ ಕ್ಷೇತ್ರದ ಜನತೆ ಸಂಪೂರ್ಣವಾಗಿ ಇದಕ್ಕೆ ಬೆಂಬಲಿಸುತ್ತಾರೆ. ಯಾರೆ ಜನಪರ ಹೋರಾಟ ಮಾಡಲಿ ಅದರಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯ. ಸಂಬಂದಪಟ್ಟ ಅಧಿಕಾರಗಳೊಂದಿಗೆ ಮಾತನಾಡಿ ಇದರ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಬಾಗಲಕೋಟೆಯ ನಾಗರಾಜ ಕಲ್ಲಕುಟುಕರ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜನ್ನು ಖಾಸಗಿಯವರಿಗೆ ಮಾರಾಟ ಮಾಡಲು ಬಿಡುವುದಿಲ್ಲ, ನಾವು ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ, ಕರ್ನಾಟಕ ರಾಷ್ಟ್ರೀಯ ಸಮಿತಿ ರಾಜ್ಯ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ಅಶೋಕ ಜಾದವ, ಸೀನು ಹಿಪ್ಪರಗಿ, ಅಶೋಕ ಜಾದವ, ಅನಿಲ ಹೊನಕಟ್ಟಿ, ಲಕ್ಷ್ಮಣ ಚಡಚಣ, ಗೋತಕನಾಥ, ಪಿ. ಎಸ್. ಹನಕಟ್ಟಿ, ಮುತ್ತುರಾಜ ಹೊನಗೊಂಡ, ದೇಸು ಚೌಹಾಣ, ಹೋರಾಟ ಸಮಿತಿಯ ಅನಿಲ ಹೊಸಮನಿ, ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಕೆಂಗನಾಳ, ಮಲ್ಲಿಕಾರ್ಜುನ ಎಚ್.ಟಿ., ಲಲಿತಾ ಬಿಜ್ಜರಗಿ, ವಿದ್ಯಾವತಿ ಅಂಕಲಗಿ, ಕೆ. ಎಫ್. ಅಂಕಲಗಿ, ಸಿದ್ದಲಿಂಗ ಬಾಗೇವಾಡಿ, ಅಕ್ರಂ ಮಾಶ್ಯಾಳಕರ, ಶ್ರೀನಾಥ ಪೂಜಾರಿ, ಸುರೇಶ ಬಿಜಾಪುರ, ಸುರೇಶ ಜೀಬಿ, ಡಾ ಎಂ. ಆರ್. ಗುರಿಕಾರ, ಗೀತಾ. ಎಚ್., ನಿಂಗರಾಜ ಬಿದರಕುಂದಿ, ಕಲ್ಲಪ್ಪ ಬಬಲಾದ, ನೀಲಾಂಬಿಕಾ ಬಿರಾದಾರ, ಸುಶೀಲಾ ಮಿಣಜಗಿ, ಮಲ್ಲಪ್ಪ ಬಿರಾದಾರ, ಅಕ್ಷಯಕುಮಾರ ಅಜಮನಿ, ಸಿದ್ರಾಮಯ್ಯ ಹಿರೇಮಠ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸೆ ಹುಟ್ಟಿಸಿದ್ದೇ ನಮ್ಮ ಸರ್ಕಾರ. ಮುಖ್ಯಮಂತ್ರಿ ಅವರು ಎಲ್ಲ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಹೇಳಿದ್ದಾರೆ. ಮೊದಲ ಪ್ರಾಶಸ್ತ್ಯ ನಮ್ಮ ಜಿಲ್ಲೆಗೆ ನೀಡಲು ಒತ್ತಡ ಹೇರುತ್ತೇನೆ
ಯಶವಂತರಾಗೌಡ ಪಾಟೀಲಶಾಸಕ ಇಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.