ವಿಜಯಪುರ: ವೈದ್ಯರು ದಯೆ, ಶಿಸ್ತು, ನ್ಯಾಯಪರತೆ ಮತ್ತು ಆತ್ಮಸಾಕ್ಷಿಗಳಿಂದ ಕೆಲಸ ಮಾಡಬೇಕಿದೆ. ಸಮಾಜ ಅದನ್ನು ನಿರೀಕ್ಷಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಹೇಳಿದರು.

ನಗರದ ಸಿಕ್ಯಾಬ್ ಸಂಸ್ಥೆಯ ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜು ರಾಷ್ಟ್ರಮಟ್ಟದಲ್ಲಿ (ನ್ಯಾಬೆಟ್) ಎರಡನೇ ಶ್ರೇಯಾಂಕ ಪಡೆದು ರಾಜ್ಯಮಟ್ಟದಲ್ಲಿ ಗುರುತರವಾದ ಸ್ಥಾನ ಪಡೆಯುವಲ್ಲಿ ಅದರ ನಾವಿನ್ಯತೆ, ಪ್ರಯೋಗಶೀಲತೆ ಮತ್ತು ಸಂಪ್ರದಾಯಗಳ ಸಂಕರತ್ವ ಗುಣವೇ ಮೂಲಗಳಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬಿಒಎಸ್ ಚೇರ್ಮನ್ ಪ್ರೊ. ಅಲಿಮುದ್ದೀನ್ ಕುಮ್ರಿ, ಯುನಾನಿ ಔಷಧಿಯು ವೈಜ್ಞಾನಿಕ ಮೌಲ್ಯ ಮತ್ತು ಜಾಗತಿಕ ಮನ್ನಣೆ ಪಡೆಯುತ್ತ ದಾಪುಗಾಲು ಹಾಕುತ್ತಿದೆ. ಸಂಶೋಧನೆ, ಡಿಜಿಟಲ್ ಹೆಲ್ತ್ ಸೇವೆ, ಸ್ವಾಸ್ತ್ಯ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ ಎಂದು ಹೇಳಿದರು.

ಮಹಾರಾಷ್ಟ್ರದ ನಿಲಂಗಾ ಶರೀಫ್ ಪೀಠಾಧಿಪತಿ ಸಯ್ಯದ್ ಹೈದರ್ ವಲಿ ಪಾಷಾ ಮಾತನಾಡಿ, ಪಾಲಕರು ಮಕ್ಕಳಿಗಾಗಿ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಅಮೂಲ್ಯ ಪಾತ್ರ ವಹಿಸುತ್ತಿದ್ದಾರೆ. ಮಕ್ಕಳ ಸಾಧನೆಗೆ ಹಿನ್ನೆಲೆಯಾಗಿ ಸದ್ದಿಲ್ಲದೆ ಶ್ರಮಿಸುತ್ತಿದ್ದಾರೆ, ಅಂತಹ ಪಾಲಕರನ್ನು ನಮ್ರತೆಯಿಂದ ಜವಾಬ್ದಾರಿಯಿಂದ ಸ್ಮರಿಸುವುದು ಮಕ್ಕಳ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಡಾ. ಸುಜಾವುದ್ದೀನ್ ಮಾತನಾಡಿ, ಯುನಾನಿ ಕಾಲೇಜು ಉತ್ತುಂಗಕ್ಕೆ ಏರುವಲ್ಲಿ ಸಮಸ್ತ ಸಿಬ್ಬಂದಿಗಳ ಪಾತ್ರ ಅಪೂರ್ವವಾಗಿದೆ. ಇಲ್ಲಿನ ವಿದ್ಯಾರ್ಥಿಗಳ ಘನಶ್ರಮ, ಶಿಸ್ತು, ಶೈಕ್ಷಣಿಕ ಫಲಿತಾಂಶ ಬೆರಗಾಗಿಸಿದೆ ಎಂದು ಹೇಳಿದರು.

ಸಮಾರಂಭದಲ್ಲಿ 2019ರ ಬ್ಯಾಚಿನ 52 ಸ್ನಾತಕ, 2022ರ ಬ್ಯಾಚಿನ 04 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ಅತಿಥಿಗಳು ಪ್ರದಾನ ಮಾಡಿದರು.

ಸಿಕ್ಯಾಬ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎ.ಎಸ್.ಪಾಟೀಲ್, ನಿರ್ದೇಶಕ ಸಲಾವುದ್ದೀನ್ ಪುಣೆಕರ್, ಸರ್ಕಾರದ ಪ್ರಕ್ರಮಾಧಿಕಾರಿ ಶಹಾಜಮಾನ್ ಮುಜಾಹೀದ್, ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಎಸ್.ಡಿ.ಮಕಾಂದಾರ, ಬಿಡಿಎ ಚೇರ್ಮನ್ ಕನ್ನಾನ್ ಅಬ್ದುಲ್ ಹಮೀದ್ ಮುಶ್ರೀಫ್, ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜಿನ ಡೀನ್ ಡಾ. ಮಹಮ್ಮದ್ ಅಕೀಲ್ ಖಾದ್ರಿ, ಪ್ರಾಚಾರ್ಯೆ ಡಾ.ಶಹನಾಜ್ ಬಾನು, ಡಾ.ಸಬ್ಹಾ ಮಮದಾಪೂರ, ಡಾ.ಸೈಯದ ಫಾತಿಮಾ ಜೊಹರಾ ಮತ್ತು ಡಾ.ಸಯಿದಾ ಅಸ್ಫಿಯಾ ಕಾಜಿ ಇದ್ದರು.

ವಿದ್ಯಾರ್ಥಿಗಳಿಗೆ ಉಪ ಪ್ರಾಚಾರ್ಯೆ ಡಾ. ತಸ್ಮೀಯಾ ಪ್ರತಿಜ್ಞಾವಿಧಿ ಬೋಧಿಸಿದರು.

ವಿದ್ಯಾರ್ಥಿಗಳಲ್ಲಿ ವೈಯಕ್ತಿಕವಾಗಿ ಪ್ರಾಮಾಣಿಕತೆ ಜಾಣ್ಮೆಯಿಂದ ಕೆಲಸ ಮಾಡುವ ವಿಭಿನ್ನ ಸಾಮರ್ಥ್ಯ ತುಂಬುತ್ತ ಸಿಕ್ಯಾಬ್ ಸಂಸ್ಥೆ ಮಾರ್ಗದರ್ಶನ ಮಾಡುತ್ತಿರುವುದು ಅವರ್ಣನೀಯ

-ಸಲೀಂ ಅಹಮ್ಮದ್ ಸರ್ಕಾರದ ಮುಖ್ಯ ಸಚೇತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.