ಶನಿವಾರ, ಸೆಪ್ಟೆಂಬರ್ 26, 2020
23 °C

ವಿಜಯಪುರ: ಕೋವಿಡ್‍ನಿಂದ ವೃದ್ಧ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಇಂಡಿ ತಾಲ್ಲೂಕಿನ ಬೀರಪ್ಪ ನಗರ ನಿವಾಸಿ 68 ವರ್ಷ ವಯೋಮಾನದ ವೃದ್ಧ (ಪಿ1,40,195) ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ  ತಿಳಿಸಿದ್ದಾರೆ.

ತೀವ್ರ ಶ್ವಾಸಕೋಶ ತೊಂದರೆ, ಕೆಮ್ಮು, ಸಕ್ಕರೆ ಕಾಯಿಲೆ,  ರಕ್ತದೊತ್ತಡದಿಂದ ಬಳಲುತ್ತಿದ್ದರು ಅವರು ಆಗಸ್ಟ್‌  1ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಆಗಸ್ಟ್‌ 5ರಂದು  ಸಾವಿಗೀಡಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

2407 ಜನ ಬಿಡುಗಡೆ: ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 2407 ಗುಣಮುಖರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಆಸ್ಪತ್ರೆಯಲ್ಲಿ ಸದ್ಯ 973 ಕೋವಿಡ್  ಪಾಸಿಟಿವ್ ಸಕ್ರಿಯ ರೋಗಿಗಳಿದ್ದು, ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 40 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ವಿಜಯಪುರ ನಗರದಲ್ಲಿ 2153, ಬಸವನ ಬಾಗೇವಾಡಿಯಲ್ಲಿ 196, ಬಬಲೇಶ್ವರದಲ್ಲಿ 55, ಚಡಚಣದಲ್ಲಿ 35, ದೇವರ ಹಿಪ್ಪರಗಿಯಲ್ಲಿ 58, ಇಂಡಿಯಲ್ಲಿ 193, ಕೋಲ್ಹಾರದಲ್ಲಿ 56, ಮುದ್ದೇಬಿಹಾಳದಲ್ಲಿ 181, ನಿಡಗುಂದಿಯಲ್ಲಿ 35, ಸಿಂದಗಿಯಲ್ಲಿ 191, ತಾಳಿಕೋಟಿಯಲ್ಲಿ 199, ತಿಕೋಟಾದಲ್ಲಿ 68 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು