ವಿಜಯಪುರ: ಒಂದು ದೇಶ - ಒಂದು ಚುನಾವಣೆಯಿಂದ ದೊಡ್ಡ ಪ್ರಮಾಣದಲ್ಲಿ ಚುನಾವಣಾ ವೆಚ್ಚಕ್ಕೆ ಕಡಿವಾಣ ಬೀಳಲು ಸಾಧ್ಯವಾಗುತ್ತದೆ ಎಂದು ಸ್ವದೇಶಿ ಜಾಗರಣ ಮಂಚ್ ಕ್ಷೇತ್ರಿಯ ಪ್ರಚಾರಕ ಕೆ. ಜಗದೀಶ ಹೇಳಿದರು.

ನಗರದ ಸಾಯಿವಿಹಾರ ಮಂಗಲ ಕಾರ್ಯಾಲಯದಲ್ಲಿ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ, ಸ್ವದೇಶಿ ವಸ್ತು ಬಳಸುವಿಕೆ ಜಾಗೃತಿ ಹಾಗೂ ಒಂದು ರಾಷ್ಟ್ರ - ಒಂದು ಚುನಾವಣೆ’ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ಬೇರೆ ಬೇರೆ ಭಾಗಗಳಲ್ಲಿ ಚುನಾವಣೆಗಳು ನಡೆಯುತ್ತಿರುವುದರಿಂದ ಜನರು ಶ್ರಮ ವಹಿಸಿದ ತೆರಿಗೆ ಹಣ ಚುನಾವಣೆಗಳಾಗಿಯೇ ವೆಚ್ಚವಾಗುತ್ತಿದೆ, ಅಪಾರ ಪ್ರಮಾಣದಲ್ಲಿ ಬಂದೋಬಸ್ತ್ ಹೀಗೆ ನಾನಾ ಕಾರಣಗಳಿಂದ ಸಂಪನ್ಮೂಲ ಸಹ ವ್ಯಯವಾಗುತ್ತಿದೆ, ಇದಕ್ಕೆ ಕಡಿವಾಣ ಹಾಕಲು ಒಂದು ದೇಶ ಹಾಗೂ ಒಂದು ಚುನಾವಣೆ ಎನ್ನುವುದು ಬಹುಮುಖ್ಯವಾದ ಅಂಶವಾಗಿದ್ದು, ಇದರಿಂದ ಚುನಾವಣಾ ಹೆಚ್ಚುವರಿ ವೆಚ್ಚಕ್ಕೆ ಸಂಪೂರ್ಣ ಕಡಿವಾಣ ಹಾಕಬಹುದು, ಏಕ ಕಾಲಕ್ಕೆ ಚುನಾವಣೆ ನಡೆಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಹೇಳಿದರು.

ನಮ್ಮ ದೇಶದಲ್ಲಿ ಉತ್ಪಾದನೆಯಾದ ವಸ್ತುಗಳನ್ನೇ ನಾನು ಬಳಕೆ ಮಾಡುವೆ, ಸ್ವದೇಶಿ ವಸ್ತುಗಳಿಗೆ ಆದ್ಯತೆ ನೀಡುವೆ ಎಂಬ ಪ್ರತಿಜ್ಞೆಯನ್ನು ನೂರಾರು ಕಾರ್ಯಕರ್ತರು ಸ್ವೀಕರಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದ ರಮೇಶ ಸಂಸದ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮುಖಂಡರಾದ ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಂಜೀವ ಐಹೊಳೆ, ಚಂದ್ರಶೇಖರ ಕವಟಗಿ, ಸುರೇಶ ಬಿರಾದಾರ, ಎಸ್.ಎ ಪಾಟೀಲ, ಉಮೇಶ ಕಾರಜೋಳ, ರಾಘವೇಂದ್ರ ಕಾಪಸೆ, ಮುಳುಗೌಡ ಪಾಟೀಲ್, ಸಾಬು ಮಾಶ್ಯಾಳ, ಈರಣ್ಣ ರಾವೂರ, ಮಲ್ಲಿಕಾರ್ಜುನ ಕಲಾದಗಿ, ಸ್ವಪ್ನಾ ಕಣಮುಚನಾಳ, ಸಂದೀಪ ಪಾಟೀಲ್, ಸಿದ್ಧಗೊಂಡ ಬಿರಾದಾರ, ಕೃಷ್ಣಾ ಗುನ್ನಾಳಕರ, ಬಸವರಾಜ ಬೈಚಬಾಳ, ರಾಜಕುಮಾರ ಸಗಾಯಿ, ಅಶೋಕ ರಾಠೋಡ, ಆನಂದ ಮುಚ್ಚಂಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.